ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ಅನುರಾಧ ಮೇಟಿಗೌಡ, ಉಪಾಧ್ಯಕ್ಷರಾಗಿ ಗಿರಿಜಮ್ಮ ಆಯ್ಕೆ
ಜಯಧ್ವಜ ನ್ಯೂಸ್ , ರಾಯಚೂರು, ಮಾ 26-
ಮಾನ್ವಿ ತಾಲೂಕಿನ ಅಮರಾವತಿ ಗ್ರಾಮದ ಕೆಎಂಎಫ್ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿ ಅವಿರೋಧವಾಗಿ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಅನುರಾಧ ಮೇಟಿಗೌಡ ಮತ್ತು ಉಪಾಧ್ಯಕ್ಷರಾಗಿ ಗಿರಿಜಾ ಮಾಲಿ ಪಾಟೀಲ್ ಆಯ್ಕೆಯಾದರು. ಉಮೇಶ್ ಮಾತನಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವು ಮಹಿಳಾ ಸಬಲೀಕರಣ ಮತ್ತು ಹಾಲು ಉತ್ಪಾದಕರ ಆರ್ಥಿಕ ಸುಧಾರಣೆಗೆ ಪ್ರಮುಖ ಪಾತ್ರ ವಹಿಸುತ್ತದೆ ಸಂಘದ ನೂತನ ಆಡಳಿತ ಮಂಡಳಿಯು ಕೃಷಿಕರಿಗೆ, ಹಾಲು ಉತ್ಪನ್ನ ಮಾಡುವವರಿಗೆ ಸೌಲಭ್ಯ ಒದಗಿಸುವ ಪ್ರಯತ್ನದಲ್ಲಿ ತೊಡಗಬೇಕು ಎಂದರು.
ಈ ಸಭೆಯಲ್ಲಿ ಅಮರಾವತಿ ಗ್ರಾಮದ ಶಾಲಾ ಮುಖ್ಯ ಗುರುಗಳಾದ ಕುಮಾರ್ ಹಾಗೂ ಶಿವಕುಮಾರ್, ಎನ್‌ಆರ್‌ಎಲ್‌ಎಂ ಸಿಬ್ಬಂದಿಗಳಾದ ಉಮೇಶ್, ಕಾಸಿಂ, ಕೆಎಂಎಫ್ ಪ್ರತಿನಿಧಿ ರಘು ಹಾಗೂ ಸಂಘದ ಪ್ರಮುಖ ಸದಸ್ಯರು ಶಶಿಕಲಾ, ಶರಣಮ್ಮ, ಸಿದ್ದಲಿಂಗಮ್ಮ ಮತ್ತು ಗಂಗಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
.
Comments
Post a Comment