ನಗರದಲ್ಲಿ ಹಗಲು ವೇಳೆ ಭಾರಿ ವಾಹನ ಸಂಚಾರ ನಿಷೇಧ ಹಾಗೂ ಗೋ ಕಳ್ಳಸಾಗಾಣಿಕೆ ತಡೆಗೆ ಮನವಿ.                                              ಜಯ ಧ್ವಜ ನ್ಯೂಸ್, ರಾಯಚೂರು, ಮಾ.27- ನಗರದಲ್ಲಿ ಹಗಲು ವೇಳೆ ಭಾರಿ ವಾಹನ ಸಂಚಾರ ನಿಷೇಧ ಹಾಗೂ ಗೋವುಗಳ ಕಳ್ಳ ಸಾಗಾಣಿಕೆ ತಡೆಯಬೇಕೆಂದು  ರಾಷ್ಟ್ರೀಯ ಗೋರಕ್ಷಾ ವಾಹಿನಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಠಾಕೂರು ವಿನಯಸಿಂಗ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದರು. ಹಗಲು ವೇಳೆ ನಗರದಲ್ಲಿ ಭಾರಿ ವಾಹನ ಸಂಚಾರದಿಂದ ದಿನ ನಿತ್ಯ ಅಪಘಾತದಿಂದ ಸಾವು ನೋವುಗಳಾಗುತ್ತಿವೆ ರಾತ್ರಿ ವೇಳೆಯಲ್ಲಿ ಮಾತ್ರ ಭಾರಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಲಾಯಿತು. ನಗರದಲ್ಲಿ ಕಳ್ಳ ಸಾಗಾಣಿಕೆ ಮೂಲಕ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ನಕಲಿ ರಶೀದಿ ತೋರಿಸಿ ಗೋ ಮಾತೆಯನ್ನು ಕಸಾಯಿಖಾನೆಗೆ ಸಾಗಿಸಿ ಹತ್ಯೆ ಮಾಡಲಾಗುತ್ತಿದೆ ಅದನ್ನು ತಡೆಯಬೇಕು ಗೋವುಗಳನ್ನು ಗೋಶಾಲೆಗೆ ಬಿಡಬೇಕೆಂದು ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಗೋ ಸಂರಕ್ಷಕ ಸಮಿತಿ ಸದಸ್ಯರು ಇದ್ದರು.

Comments

Popular posts from this blog