ಶಾಸಕರ ಅಮಾನತ್ತು ಸಭಾಧ್ಯಕ್ಷರ ಕ್ರಮ ಸ್ವಾಗತಾರ್ಹ -ಡಾ.ರಝಾಕ್ ಉಸ್ತಾದ್
ಜಯಧ್ವಜ ನ್ಯೂಸ್ , ರಾಯಚೂರು, ಮಾ.25- ಬಿಜೆಪಿ ಶಾಸಕರು ಇತ್ತೀಚಿಗೆ ಮುಕ್ತಾಯವಾದ ವಿಧಾನ ಮಂಡಳದ ಅಧಿವೇಶನದಲ್ಲಿ ಅನಗತ್ಯ ಗೊಂದಲ ಸೃಷ್ಠಿಸಿ ಪ್ರತಿಭಟನೆ ನಡೆಸಿದರಲ್ಲದೇ, ಸ್ಪೀಕರ್ ಪೀಠದ ಮೇಲೆ ಹತ್ತಿ ಆ ಸ್ಥಾನಕ್ಕೆ ಅಗೌರವ ತೋರಿಸಿದ್ದಾರೆ, ಇದು ರಾಜ್ಯದ ಜನತೆ ನೋಡಿದ್ದಾರೆ, ರಾಜ್ಯದ ಜನರ ಸಮಸ್ಯೆಗಳನ್ನು ಚರ್ಚಿಸಬೇಕಾದ ವಿರೋಧ ಪಕ್ಷದ ಶಾಸಕರು ಪುಡಾರಿಗಳ ರೀತಿ ಸಧನದಲ್ಲಿ ವರ್ತಿಸಿರುವದು ಅಕ್ಷಮ್ಯ ಅಪರಾಧ, ಅಂತಹ ಶಾಸಕರನ್ನು ಸಭಾಧ್ಯಕ್ಷರಾದ ಯು.ಟಿ.ಖಾದರ ಅವರು ಆರು ತಿಂಗಳ ಅವಧಿಗೆ ಅಮಾನತ್ತು ಮಾಡಿರುವದು ಸರಿಯಾದ ಕ್ರಮವಾಗಿದೆ, ಮೇಲ್ಮನೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸದಸ್ಯರ ವರ್ತನೆಗೆ ಬೇಸತ್ತು ರಾಜೀನಾಮೆ ನೀಡಲು ಮುಂದಾಗಿದ್ದಾರೆ, ಇದು ರಾಜ್ಯದ ಜನರಿಗೆ ಬಿಜೆಪಿ ಮಾಡುತ್ತಿರುವ ಅವಮಾನವಲ್ಲವೇ? ಶಾಸಕರನ್ನು ಅಮಾನತ್ತು ಮಾಡಿರುವದನ್ನು ವಿರೋಧಿಸಿ, ಸಭಾಧ್ಯಕ್ಷರ ಕ್ರಮ ಸಂವಿಧಾನ ಭಾಹಿರ ಎಂದುಹೋರಾಟ ಮಾಡುತ್ತಿರುವದು ಹಾಸ್ಯಾಸ್ಪದ, ಇವರು ಏನೇ ಮಾಡಿದರೂ ಸಹಿಸಿಕೊಳ್ಳಬೇಕು ಎನ್ನುವ ಮನಸ್ಥಿತಿ ಅತ್ಯಂತ ಹಾನಿಕಾರಕ, ಸಧನದಿಂದ ಸದಸ್ಯರನ್ನು ಅಮಾನತ್ತು ಮಾಡುವದು ದೇಶದ ಎಲ್ಲಾ ರಾಜ್ಯಗಳಲ್ಲಿ ಆಯಾ ಸಂಧರ್ಭದ ಪರಸ್ಥಿತಿ ನೋಡಿಕೊಂಡು ಅಮಾನತ್ತು ಮಾಡಿರುವದು ಇತಿಹಾಸ. ಇತ್ತೀಚಿಗೆ ಲೋಕಸಭೆಯಲ್ಲಿ ವಿರೋಧ ಪಕ್ಷದ ೧೪೦ ಜನ ಸಂಸದರನ್ನು ಅಮಾನತ್ತು ಮಾಡಿರುವದು ಬಿಜೆಪಿ ಮರೆತಂತಿದೆ, ಆದರೆ ಜನ ಮರೆತಿಲ್ಲ, ಅಲ್ಲಿ ಸದಸ್ಯರು ಕೇವಲ ಪ್ರತಿಭಟನೆ ಮಾಡುತ್ತಿದ್ದರೂ ಅಮಾನತ್ತು ಮಾಡಲಾಗಿತ್ತು, ಇಲ್ಲಿ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಪೀಠದ ಮೇಲೆ ಹತ್ತಿ ಸಭಾಧ್ಯಕ್ಷರು ಕೇಲಸ ಮಾಡಲು ಅಡ್ಡಿಪಡಿಸುತ್ತಿದ್ದರು ಮತ್ತು ಕೆಲವೊಬ್ಬರು ಪೇಪರ್ ಹರಿದು ಪೀಠಕ್ಕೆ ಎಸೆಯುತ್ತಿದ್ದರು, ಇದು ಅತ್ಯಂತ ಗಂಭೀರ ವಿಷಯ ಎನ್ನುವದು ಗೊತ್ತಿಲ್ಲವೇ ಈ ಬಿಜೆಪಿಯವರಿಗೆ.
ಅಲ್ಲದೇ ಇತ್ತೀಚಿಗೆ ಕರ್ನಾಟಕ ಸರಕಾರ ರಾಜ್ಯದಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಹಿಂದುಳಿದ ವರ್ಗಗಳ ೧ಎ, ೨ಎ ಮತ್ತು ೨ಬಿ ಪ್ರವರ್ಗಗಳಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡಿದ್ದು, ಇದರಲ್ಲಿ ೨ಬಿ ಅಡಿಯಲ್ಲಿ ಬರುವ ಮುಸ್ಲಿಂರಿಗೆ ಮೀಸಲಾತಿ ನೀಡಿದ್ದು ಸಂವಿಧಾನಬಾಹಿರ ಎಂದು ಬಿಜೆಪಿ ನಾಯಕರು ದೇಶದ ಮೂಲೆ ಮೂಲೆಗೆ ಬಾಯಿ ಬಡೆದುಕೊಳ್ಳುತ್ತಿರುವದಲ್ಲದೇ, ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿಯೂ ವಿರೋಧೀಸುತ್ತಿದ್ದಾರೆ, ಧರ್ಮಾಧಾರಿತ ಮೀಸಲಾತಿ ಸಂವಿಧಾನ ವಿರೋಧಿ ಎನ್ನುವದು ಬಿಜೆಪಿ ಆರೋಪ, ಅದು ಸತ್ಯಕ್ಕೆ ದೂರವಾದ ವಿಷಯ. ಸಂವಿಧಾನದಲ್ಲಿ ಎಲ್ಲಿಯೂ ಮುಸ್ಲಿಂರಿಗೆ ಮೀಸಲಾತಿ ನೀಡಬಾರದೆಂದು ಹೇಳಿಲ್ಲ, ಸಂವಿಧಾನದ ಅನುಚ್ಛೇಧ ೧೬(೪)ರಲ್ಲಿ ಸರಕಾರ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬಹುದು ಎಂದು ಹೇಳಿದೆ, ಅದರಲ್ಲಿ ಯಾವುದೇ ಧರ್ಮ ಅಥವಾ ಜಾತಿ ಎಂದು ಸೂಚಿಸಿಲ್ಲ, ಈ ದೇಶದಲ್ಲಿ ಮುಸ್ಲಿಂ ಸಮುದಾಯ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ಸಾಕಷ್ಟು ವರದಿಗಳು ಇವೆ, ಸಂವಿಧಾನ ಹಿಂದುಳಿದ ವರ್ಗ ಮತ್ತು ಆ ಸಮುದಾಯದ ಪ್ರಾತಿನಿಧ್ಯ ಸರಕಾರದಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಇರದಿದ್ದರೆ ಅಂತಹ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬಹುದು ಎಂದು ಹೇಳಿದೆ, ಸಂವಿಧಾನದಲ್ಲಿ ಎಲ್ಲಿಯೂ ಮುಸ್ಲಿಂರಿಗೆ ಮೀಸಲಾತಿ ನೀಡಬಾರದು ಎಂದು ಹೇಳಿಯೇ ಇಲ್ಲ, ದೇಶದ ಯಾವುದೇ ನ್ಯಾಯಾಲಯವು ಮುಸ್ಲಿಂರಿಗೆ ಮೀಸಲಾತಿಯೇ ನೀಡಬಾರದು ಎಂದು ಹೇಳಿಲ್ಲ, ಆದರೂ ಬಿಜೆಪಿ ಅನಗತ್ಯವಾಗಿ ಗೊಂದಲ ಸೃಷ್ಟಿಸಿ, ಮುಸ್ಲಿಂ ವಿರೋಧಿ ರಾಜಕಾರಣ ಮಾಡುತ್ತಿದೆ. ಅವರು ಮಾಡುತ್ತಿರುವ ಹೋರಾಟ ದೇಶವಿರೋಧಿ, ಜನವಿರೋಧಿ, ಸಂವಿಧಾನ ವಿರೋಧಿಯಾಗಿದೆ ಎಂದು ಕೆಪಿಸಿಸಿ ಮಾದ್ಯಮ ವಿಭಾಗ ರಾಜ್ಯ ವಕ್ತಾರ ಡಾ.ರಝಾಕ ಉಸ್ತಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments
Post a Comment