ಜಿಡ್ಗಾ ಶ್ರೀ ಸದ್ಗುರು ಯಲ್ಲಾಲಿಂಗೇಶ್ವರ ಶ್ರೀಮಠದ ಸನ್ನಿದಾನದಲ್ಲಿ ಶ್ರೀ ಶೈಲದಿಂದ ಮರಳುವ ಯಾತ್ರಾರ್ಥಿಗಳಿಗೆ ದಾಸೋಹ ವೈದ್ಯೋಪಚಾರ ಜಯಧ್ವಜ ನ್ಯೂಸ್ ರಾಯಚೂರು, ಮಾ.31- ನಗರದ ಹೊರ ವಲಯದ ಜಗದ್ಗುರು ರೇಣುಕಾಚಾರ್ಯ ವೃತ್ತದ ಹತ್ತಿರವಿರುವ ಜಿಡ್ಗಾ ಶ್ರೀ ಸದ್ಗುರು ಯಲ್ಲಾಲಿಂಗೇಶ್ವರ ಶ್ರೀಮಠದ ಸನ್ನಿದಾನದ ಆವರಣದಲ್ಲಿ ನಗರದ ಡ್ಯಾಡಿ ಕಾಲೋನಿಯ ಈಶ್ವರ ದೇವಸ್ಥಾನದ ಸಮಿತಿ ಹಾಗೂ ರಾಯಚೂರ ನಗರದ ಸದ್ಭಕ್ತರ ಸಹಾಯ ಸಹಕಾರದಿಂದ ಸುಮಾರ 45 ಸಾವಿರಕ್ಕೂ ಹೆಚ್ಚು ಶ್ರೀಶೈಲದಿಂದ ವಾಪಸ ಮರಳುವ ಭಕ್ತರಿಗೆ ಮಹಾ ಪ್ರಸಾದ ಮತ್ತು ಉಚಿತ ಚಿಕಿತ್ಸೆ ಮತ್ತು ಔಷಧ ವಿತರಿಸಲಾಯಿತು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರು, ನಗರದ ಈಶ್ವರ ದೇವಸ್ಥಾನದ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ ಮಿರ್ಜಾಪೂರ ಹೇಳಿದರು.
ಸರ್ವ ಸದ್ಭಕ್ತರು ಮಹಾ ಪ್ರಸಾದವನ್ನು ಸ್ವೀಕರಿಸಿದ್ದು ಸಾಕ್ಷಾತ್ ಶ್ರೀಶೈಲ ಮಲ್ಲಿಕಾರ್ಜುನ ದೇವರಿಗೆ ಅರ್ಪಿಸಿದ ತೃಪ್ತಿ ನಮಗಾಗಿದೆ ಎಂದು ಹೇಳಿದರು.
ನಂತರ ರಿಮ್ಸ್ ಆಸ್ಪತ್ರೆಯ ಡಾ. ಬಸನಗೌಡ ಪಾಟೀಲ ಮಾತನಾಡಿ ಶ್ರೀಶೈಲಕ್ಕೆ ತೆರಳಿ ವಾಪಸ್ ಬಂದಂತ ಭಕ್ತರಿಗೆ ನಮ್ಮ ಪ್ರತಿಯೊಬ್ಬ ವೈಧ್ಯರೂ ಭಕ್ತರನ್ನು ಸ್ವಂತ ಮಕ್ಕಳಂತೆ ಕಂಡು ಅವರಿಗೆ ಚಿಕಿತ್ಸೆ ನೀಡಿ ಅವರು ಅರಾಮವಾದ ನಂತರ ಮಹಾ ಪ್ರಸಾದ ಮಾಡಿಸಿ ನಿಮ್ಮ ಮುಂದಿನ ಪ್ರಯಾಣ ಸುಖಕರವಾಗಿರಲಿ ಎಂದು ನೋಡುವಂತ ವೈಧ್ಯರು ಸೇವೆ ಸಲ್ಲಿಸುತ್ತಿರುವುದು ನಮಗೆ ತುಂಬಾ ಸಂತೋಷ ತಂದಿದೆ ಎಂದು ಹೇಳಿದರು.
ಸಾವಿರಾರು ಸದ್ಭಕ್ತರು ಮಹಾ ಪ್ರಸಾದವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಈಶ್ವರ ದೇವಸ್ಥಾನದ ಸಮಿತಿಯ ಸರ್ವ ಪದಾಧಿಕಾರಿಗಳು, ವೀರಶೈವ ರುದ್ರಸೇನಾ ಸಮಿತಿಯ ಸರ್ವ ಪದಾಧಿಕಾರಿಗಳು, ರಿಮ್ಸ್ ಆಸ್ಪತ್ರೆಯ ಸಿಬ್ಬಂಧಿ, ಪೂರ್ಣಿಮಾ ಆಯುರ್ವೇಧಿಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸರ್ವ ಸಿಬ್ಬಂಧಿಗಳು, ರಾಯಚೂರ ನಗರದ ಸರ್ವ ಸಮುದಾಯದವರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Comments
Post a Comment