ನನ್ನ ಎಕ್ಸ್ (ಟ್ವಿಟರ್ ) ಖಾತೆಯಲ್ಲಿರುವ ಪೋಸ್ಟ್ ಅಳಿಸಲಾಗಿದ್ದಕ್ಕೆ ದೂರು ದಾಖಲಿಸುತ್ತೇನೆ- ಕುಮಾರ್ ನಾಯಕ.                                                          ಜಯಧ್ವಜ ನ್ಯೂಸ್ , ರಾಯಚೂರು, ಮಾ.31-   ಲೋಕಸಭೆಯಲ್ಲಿ ರಾಯಚೂರಿಗೆ  ಏಮ್ಸ್ ಮಂಜೂರು ಮಾಡಬೇಕೆಂಬ  ಬಗ್ಗೆ  ಸಂಸದ ಸದಸ್ಯ ಡಾ.ಸಿ.ಎನ್.ಮಂಜುನಾಥ್ ರವರು ಮಾತನಾಡಿರುವ ಬಗ್ಗೆ ಅದನ್ನು  ಪ್ರಶಂಸೆ ಮಾಡಿ ನಾನು (ಎಕ್ಸ್) ಟ್ವಿಟರ್ ನಲ್ಲಿ  ಹಾಕಲಾಗಿದ್ದ ಪೋಸ್ಟ್ ನ್ನು ನನ್ನ ಗಮನಕ್ಕೆ ತರದೆ

ಅಳಿಸಲಾಗಿದ್ದು ಈ ಬಗ್ಗೆ ಟ್ವಿಟರ್ ಗೆ ದೂರು ನೀಡುವುದಾಗಿ ಸಂಸದರಾದ ಜಿ.ಕುಮಾರ್ ನಾಯಕ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನನ್ನ ಟ್ವಿಟರ್ ಖಾತೆ ಯನ್ನು ನನ್ನ ಗಮನಕ್ಕೆ ತರದೆ ನಾನು ಹಾಕಿದ ಪೋಸ್ಟ್ ಹೇಗೆ ಅಳಿಸಿತು ಎಂಬುದು ಯಕ್ಷಪ್ರಶ್ನೆಯಾಗಿದೆ ಈ ಬಗ್ಗೆ ಟ್ವಿಟರ್ ಸಂಸ್ಥೆಗೆ ದೂರು ನೀಡುತ್ತೇನೆ ಎಂದರು
.

Comments

Popular posts from this blog