ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ : ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ರಮೇಶ್ ಕುಲಕರ್ಣಿ ನಾಮಪತ್ರ ಸಲ್ಲಿಕೆ                                                          ಜಯ ಧ್ವಜ ನ್ಯೂಸ್ ರಾಯಚೂರು ,ಮಾ.25-  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಅಧ್ಯಕ್ಷರ ಹಾಗೂ ಜಿಲ್ಲಾ ಪ್ರತಿನಿಧಿಗಳ ಸ್ಥಾನಕ್ಕೆ ಏಪ್ರಿಲ್ 13 ರಂದು ನಡೆಯುವ ಚುನಾವಣೆ ಹಿನ್ನಲೆಯಲ್ಲಿ ಸೋಮವಾರ ರಾಯಚೂರು ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ  ರಮೇಶ ಕುಲಕರ್ಣಿ ರವರು ಡಾ. ಭಾನುಪ್ರಕಾಶ ಶರ್ಮ ರವರ ಬೆಂಬಲಿತ ಒಮ್ಮತದ ಅಭ್ಯರ್ಥಿಯಾಗಿ, ಬೆಂಗಳೂರಿನ ಬ್ರಾಹ್ಮಣ ಮಹಾಸಭಾದ ಕೇಂದ್ರ ಕಛೇರಿ ಗಾಯಿತ್ರಿ ಭವನದಲ್ಲಿ ಸಮಸ್ತ ಬ್ರಾಹ್ಮಣ ಸಮಾಜದ ಬಾಂಧವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು

ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಜಿಲ್ಲಾ ಸಂಚಾಲಕರಾದ  ಡಿ.ಕೆ.ಮುರಳೀಧರ್, ಹಿರಿಯರಾದ   ಪ್ರಾಣೇಶ ಮುತಾಲಿಕ್,  ವೇಣುಗೋಪಾಲ್ ಇನಾಂದಾರ್,  ವೆಂಕಟೇಶ ದೇಸಾಯಿ, ಡಾ. ರವೀಂದ್ರ ಮಜುಮ್‌ದಾರ್, ಡಾ. ಕೆ. ನಾಗರಾಜ್,  ರಾಮರಾವ್ ಗಣೇಕಲ್,  ತುರುವಿಹಾಳ ರಮೇಶ್,  ಸುಧೀಂದ್ರ ಜಾಹಗೀರದಾರ್,   ವಿನೋದ ಕಕ್ಕೇರಿ,  ಪಾಂಡುರಂಗರಾವ ಕುಲಕರ್ಣಿ,   ಹನುಮೇಶ್ ಸರಾಫ್,  ಜಯಕುಮಾರ್ ಗಬ್ಬೂರ್,  ಪ್ರವೀಣ್ ಜಹಾಗೀರದಾರ,  ವಿನೋದ ಸಗರ, ಪ್ರಲ್ಲಾದ್ ಕುಲಕರ್ಣಿ,  ನವೀನ್ ಕುಲಕರ್ಣಿ,  ಪವನ ಕುಲಕರ್ಣಿ,  ನಿರಂಜನ ಕುಲಕರ್ಣಿ,  ಗೋವಿಂದ್ ಬಿದರಕುಂದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Comments

Popular posts from this blog