ಅತ್ತನೂರು:  ಪುಣ್ಯಸ್ಮರಣೆ ಕಾರ್ಯಕ್ರಮ
                                ಜಯಧ್ವಜ ನ್ಯೂಸ್ , ರಾಯಚೂರು, ಮಾ.25-ತಾಲೂಕಿನ ಅತ್ತನೂರಿನ ಸೋಮವಾರಪೇಟೆ ಹಿರೇಮಠದಲ್ಲಿ ಶ್ರೀಮಠದ ಹಿರಿಯ ಪೂಜ್ಯಶ್ರೀ ಲಿಂ. ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳವರ 21ನೇ ವರ್ಷದ ಪುಣ್ಯಸ್ಮರಣೆಯ ನಿಮಿತ್ಯವಾಗಿ ಮಂಗಳವಾರ ಬೆಳಿಗ್ಗೆ ಗ್ರಾಮದ ದಿಡ್ಡಿ ಬಸವೇಶ್ವರ ದೇವಸ್ಥಾನದಿಂದ ಗ್ರಾಮದ ಸದ್ಭಕ್ತರಿಂದ ಭಕ್ತಿ ಸೇವೆ ಸಲ್ಲಿಸಿದ ಪೂಜ್ಯಶ್ರೀ ಲಿಂ. ರಾಚೋಟಿ ವೀರ ಶಿವಾಚಾರ್ಯರ ಕಂಚಿನ ಮೂರ್ತಿಯನ್ನು ದೇವಸ್ಥಾನ ಗರ್ಭ ಗುಡಿಯಲ್ಲಿ ಪೂಜಿಸಿ ನಂತರ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆಯೊಂದಿಗೆ ಗ್ರಾಮದ  ಮಹಿಳೆಯರ ಕಳಸಗನ್ನಡಿ, ಬಾಜಾ ಬಜಂತ್ರಿ, ಛತ್ರಿ ಚಾಮರಗಳ ಸಂಭ್ರಮದಲ್ಲಿ ಹಿರೇಮಠವನ್ನು ತಲುಪಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸೋಮವಾರಪೇಟೆ ಹಿರೇಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯರು ವಹಿಸಿದ್ದರು.

ಈ ಸಂದರ್ಭದಲ್ಲಿ ಗ್ರಾಮದ ಸೋಮವಾರಪೇಟೆ ಹಿರೇಮಠದ ಸಕಲ ಸದ್ಭಕ್ತರು, ಗುರು ಹಿರಿಯರು,  ಮಹಿಳೆಯರು, ಯುವಕ ಯುವತಿಯರು ಮಕ್ಕಳು ಉಪಸ್ಥಿತರಿದ್ದರು.

Comments

Popular posts from this blog