ಅತ್ತನೂರು : ಪ್ರವಚನ ಕಾರ್ಯಕ್ರಮ ಉಧ್ಘಾಟನೆ      ಜಯಧ್ವಜ ನ್ಯೂಸ್ ರಾಯಚೂರು,ಮಾ.26- ಅತ್ತನೂರಿನ ಸೋಮವಾರಪೇಟೆ ಹಿರೇಮಠದಲ್ಲಿ ಶ್ರೀಮಠದ ಹಿರಿಯ ಪೂಜ್ಯಶ್ರೀ ಲಿಂ. ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳವರ 21ನೇ ವರ್ಷದ ಪುಣ್ಯಸ್ಮರಣೆಯ ನಿಮಿತ್ಯವಾಗಿ ಅತ್ತನೂರು ಗ್ರಾಮದ ಸೋಮವಾರಪೇಟೆ ಹಿರೇಮಠದಲ್ಲಿ ನೀಲಗಲ್ ಪೂಜ್ಯಶ್ರೀ ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯಸಾನಿಧ್ಯದಲ್ಲಿ ಲಿಂ. ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳವರ ಜೀವನ ಚರಿತ್ರೆಯ ಪುರಾಣ ಪ್ರಚನವನ್ನು ದಿ. ಏ. 2 ರವರೆಗೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಉಭಯ ಶ್ರೀಗಳು, ಜೆ.ಡಿ.ಎಸ್. ರಾಜ್ಯ ಉಪಾಧ್ಯಕ್ಷರಾದ ಮಹಾಂತೇಶ ಪಾಟೀಲ ಅತ್ತನೂರು, ಅ.ಭಾ.ವೀ.ಲಿಂ.ಮಹಾಸಭಾ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಪಾಟೀಲ ಮಿರ್ಜಾಪೂರ, ಪರಮೇಶ್ವರ ಸಾಲಿಮಠ ಹಾಗೂ ಇನ್ನಿತರ ಗಣ್ಯರು ಸೇರಿ ಲಿಂ.ಶ್ರೀಗಳ ಕಂಚಿನ ಮೂರ್ತಿಗೆ ಮಾಲಾರ್ಪಣೆ ಸಲ್ಲಿಸಿ ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ನಂತರ ಮಾತನಾಡಿದ ಅತ್ತನೂರು ಮಹಾಂತೇಶ ಪಾಟೀಲರು ನಮ್ಮ ಶ್ರೀಮಠದ ಹಿರಿಯ ಶ್ರೀಗಳ ಗುಣ ಹೇಗಿತ್ತು ಎಂದರೆ ನಾಲ್ಕು ಜನರಿಗೆ ದಾನ ಮಾಡಿ ಅದರಲ್ಲಿ ನಾವೂ ಒಬ್ಬರಾಗಿ ಪ್ರಸಾದ ಸೇವಿಸುವುದರಲ್ಲಿ ಇರುವ ನೆಮ್ಮಧಿ ಎಲ್ಲೂ ಸಿಗಲಾರದು ಎಂಬ ಅರ್ಥದಲ್ಲಿ ಅವರು ಅತ್ತನೂರು ಗ್ರಾಮಕ್ಕಲ್ಲದೇ ಇಡೀ ಸುತ್ತಮುತ್ತಲಿನ ಗ್ರಾಮಗಳು ಸೂರ್ಯ ಚಂದ್ರರಿರುವವರೆಗೂ ಶ್ರೀಗಳ ಹೆಸರಿನಲ್ಲಿ ಗಂಗಾ ತೀರ್ಥವನ್ನು ಸೇವಿಸುವಂತ ಮಹಾದಾನವನ್ನೇ ಮಾಡಿದ್ದಾರೆ, ಆಗಿನ ಕಾಲದಲ್ಲಿ ನಾವಿನ್ನು ಚಿಕ್ಕವರಿದ್ದೇವು ಆದರೂ ಬುದ್ದಿ ತಿಳಿಯತಿತ್ತು ಗ್ರಾಮದ ನಾಲ್ಕು ಜನರು ಶ್ರೀಗಳ ಮಠಕ್ಕೆ ಆಗಮಿಸಿ ಅಪ್ಪಾಜಿ ಇಡೀ ಗ್ರಾಮದಲ್ಲಿ ನೀರಿನ ಬವಣೆ ಮಿತಿ ಮೀರಿದೆ ಅದಕ್ಕಾಗಿ ಶ್ರೀಮಠದ 3 ಎಕರೆ ಗದ್ದೆಯನ್ನು ಗ್ರಾಮದ ಜನರಿಗೆ ನೀರಿಗೋಸ್ಕರ ಕೆರೆ ನಿರ್ಮಾಣಕ್ಕೆ ನೀಡಿದರೆ ತಮ್ಮ ಆಶೀರ್ವಾದ ಸದಾ ಇರುತ್ತೆ ಬುದ್ದಿ ಅಂದಾಗ ಮಾತೃ ಹೃದಯದ ಹಿರಿಯ ಅಪ್ಪಾಜಿಯವರು ಅತ್ತನೂರು ಹಾಗೂ ಇಡೀ ಸುತ್ತಮುತ್ತಲಿನ ನನ್ನ ಭಕ್ತರೇ ಈ ಮಠದ ಶಕ್ತಿ ಅವರಿಗೋಸ್ಕರ ಕೆರೆ ನಿರ್ಮಾಣದ ವಿಷಯ ಪುಣ್ಯದ ಕೆಲಸವಾಗಿದೆ ಆಗಲಿ ಭಕ್ತರ ಇಚ್ಚೆಯಂತೆ ಶ್ರೀಮಠದ ಗದ್ದೆಯಲ್ಲೆ ಕೆರೆ ನಿರ್ಮಾಣ ಮಾಡಿ ಎಂದು ಹೇಳಿ ಹಂಚಿಕೊಂಡು ಪ್ರಸಾದ ಸೇವಿಸುವ ರುಚಿಯೇ ಬೇರೆ ಇರುತ್ತೆ ಪಾಟೀಲರೇ ತಾವು ಹೇಗೇಳ್ತೀರೋ ಹಾಗೇ ಆಗಲಿ ಎಂದು ಹೇಳಿದರು.


ಆಗ ಶ್ರೀಗಳ ಅಪ್ಪಣೆಯಂತೆ ಕೆರೆಯನ್ನು ನಿರ್ಮಿಸಿದ್ದರಿಂದ ಆಗಿನಿಂದ ಇಂದಿನವರೆಗೂ ಈ ಗ್ರಾಮವಿರಬಹುದು ಸುತ್ತಮುತ್ತಲ ಗ್ರಾಮಗಳಿರಬಹುದು ಕೆರೆ ನೀರಲ್ಲದೇ ಬೇರೆ ನೀರು ಬಳಕೆಯೇ ಇಲ್ಲವಾಗಿದೆ, ಇಂಥ ಮಹಾತ್ಮರ ಜೀವನ ಚರಿತ್ರೆಯ ಪುರಾಣ ಪ್ರವಚನವನ್ನು ನಮ್ಮ ಗ್ರಾಮದಲ್ಲಿ ಹಮ್ಮಿಕೊಂಡಿರುವುದು ನಮ್ಮ ಪೂರ್ವ ಜನ್ಮದ ಪುಣ್ಯವಾಗಿದೆ, ಆದಕಾರಣ ಗ್ರಾಮದ ಮತ್ತು ಎಲ್ಲಾ ಗ್ರಾಮದವರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖೆಯಲ್ಲಿ ಆಗಮಿಸಿ ಪುನಿತರಾಗಬೇಕು ಎಂದು ಹೇಳಿದರು.


ನಂತರ ಮಾತನಾಡಿದ ಮಹಾಸಭಾ ಜಿಲ್ಲಾಧ್ಯಕ್ಷರು ಹಿರಿಯ ಶ್ರೀಗಳ 21 ವರ್ಷದ ಪುಣ್ಯ ಸ್ಮರಣೆಯ ನಿಮಿತ್ಯ ಅವರದ್ದೇ ಆದ ಜೀವನ ಚರಿತ್ರೆ ಪುರಾಣ ಹಮ್ಮಿಕೊಂಡಿದ್ದು ಶ್ಲಾಘನೀಯ ಯಾಕೆಂದರೆ ಮೊದಲಿನ ಭಕ್ತರಿಗೆ ಅವರು ಹೇಗಿದ್ದರು ಗೊತ್ತಿರುತ್ತೆ ಆದರೆ ಈಗಿನ ಯುವ ಪೀಳಿಗೆಗೆ ಶ್ರೀಗಳು ಹೇಗಿದ್ದರು ಭಕ್ತರಿಗಾಗಿ ಅವರು ತಮ್ಮ ಜೀವನವನ್ನೇ ಮುಡುಪಾಗಿಟ್ಟಂಥ ಅಮೃತ ನುಡಿಗಳನ್ನು ಪುರಾಣಿಕರು ಪುರಾಣದ ಮೂಲಕ ತಮ್ಮ ಮಸ್ಥಕಕ್ಕೆ ಜ್ಞಾನ ನೀಡುತ್ತಾರಲ್ಲ ಅದು ಮುಖ್ಯವಾದುದು ಎಂದು ಹೇಳಿದರು.


ಶ್ರೀಮಠದ ಶ್ರೀಗಳು ತಮ್ಮ ಧರ್ಮ ಸಂದೇಶದಲ್ಲಿ ಗ್ರಾಮದ ಭಕ್ತರೆಲ್ಲರೂ ಸೇರಿ ಹಿರಿಯ ಅಪ್ಪಾಜಿಯವರ ಕಂಚಿನ ಮೂರ್ತಿಯನ್ನು ಭಕ್ತಿ ಸೇವೆ ಸಲ್ಲಿಸಿದ್ದು ತುಂಬಾ ಸಂತೋಷ ತಂದಿದೆ, ಯಾಕೆಂದರೆ "ಕೊಟ್ಟಿದ್ದು ತನಗೆ" "ಬಚ್ಚಿಟ್ಟಿದ್ದು ಪರರಿಗೆ"ಎಂದು ಸರ್ವಜ್ಞ  ಹೇಳಿದ್ದಾರೆ ಅದರಂತೆ ಇಂದು ಶ್ರೀಮಠಕ್ಕೆ ಅಜರಾಮರವಾಗಿ ಉಳಿಯುವಂತ ಸೇವೆ ಭಕ್ತರು ಸಲ್ಲಿಸಿದ್ದಾರೆ ಅವರ ಜೀವನ ಪಾವನವಾಗಲಿ ಎಂದರು, ಶ್ರೀಮಠಕ್ಕಾಗಿ ಸರ್ವರೂ ಸೇವೆ ಸಲ್ಲಿಸುತ್ತಿರುವುದನ್ನು ಕಂಡು ನಮಗೆ ತುಂಬಾ ಸಂತೋಷ ತಂದಿದೆ, ಗ್ರಾಮದಲ್ಲಿರುವವರಿಗೆ ಈ ಕಾರ್ಯಕ್ರಮದ ಬಗ್ಗೆ ತಿಳಿಯಲಿ ಎಂದು ಸುದ್ದಿ ಪ್ರಚಾರ ಮಾಡಿರುವುದು ನಮಗೆ ತುಂಬಾ ಸಂತೋಷ ತಂದಿದೆ,  ದಿ. 02.04.25 ಬೆಳಿಗ್ಗೆ ಸರಳ ಸಾಮೂಹಿಕ ವಿವಾಹಗಳು, ಶ್ರೀಮಠದಿಂದ ದಿಡ್ಡಿ ಬಸವೇಶ್ವರ ದೇವಸ್ಥಾನದ ವರೆಗೆ ಶ್ರೀಗಳ ಕಂಚಿನ ಮೂರ್ತಿಯ ಭವ್ಯ ಮೆರವಣಿಗೆಯೂ ಅದ್ಧೂರಿಯಾಗಿ ಜರುಗಲಿದೆ ಆದಕಾರಣ ಸರ್ವ ಸದ್ಭಕ್ತರು ತನು, ಮನ, ಧನಾದಿ ತ್ರೀಕರಣ ಸೇವೆ ಸಲ್ಲಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ನುಡಿದರು,


ಪ್ರಾರಂಭದಲ್ಲಿ ಪುರಾಣ ಪ್ರವಚನಕಾರರಾದ ಶ್ರವಣ ಕುಮಾರ ಶಾಸ್ತ್ರಿಗಳು ಪುರಾಣದ ಪೀಠಿಕೆಯನ್ನು ಪಠಿಸಿದರು, ಇವರಿಗೆ ಸಂಗೀತ ಕಲಾವಿದರಾದ ಹನುಮಂತ್ರಾಯ ಗವಾಯಿ ಚಿಕ್ಕಕೊಟ್ನೇಕಲ್, ತಬಲಾ ವಾದಕರಾಗಿ ರಾಘವೇಂದ್ರ ಆಶಾಪೂರರವರು ಸಾಥ ನೀಡಿದರು.


ಈ ಸಂದರ್ಭದಲ್ಲಿವಿರುಪಾಕ್ಷಯ್ಯ ಸ್ವಾಮಿ, ಬೂದೆಯ್ಯ ಸ್ವಾಮಿ ಗುರುಮಠ, ವೀರಭದ್ರಯ್ಯ ಸ್ವಾಮಿ, ಟೇಲರ್ ಈರಣ್ಣ, ಬಸನಗೌಡ, ಕಸ್ತೂರಿ ಬೆಟ್ಟಪ್ಪ, ಹೊಸೂರು ಬಸನಗೌಡ, ಚನ್ನಪ್ಪ ಗಚ್ಚಿನಮನೆ, ಪೆದ್ದಯ್ಯ ನಾಯಕ, ಶ್ರೀಮಠದ ಶಿಷ್ಯ ವೃಂಧದವರು, ಸದ್ಭಕ್ತರು, ಮಹಿಳೆಯರು, ಯುವಕ, ಯುವತಿಯರು,  ಮಕ್ಕಳು ಉಪಸ್ಥಿತರಿದ್ದರು.

Comments

Popular posts from this blog