ಶ್ರೀ ಮನ್ಯಾಯಸುಧಾ ಮಂಗಳ ಮಹೋತ್ಸವ ಸಮಾರೋಪ:                     ವಿವಿಧ ಮಠಾಧೀಶರು ಭಾಗಿ             
                                                                                                           ಜಯ ಧ್ವಜ ನ್ಯೂಸ್, ರಾಯಚೂರು,ಮಾ.24-  ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಎರೆಡು ದಿನಗಳು ಕಾಲ ನಡೆದ ಶ್ರೀ ಮನ್ಯಾಯಸುಧಾ ಮಂಗಳ ಮಹೋತ್ಸವ ಕಾರ್ಯಕ್ರಮ ಸಮಾರೋಪ ಇಂದು ಅದ್ದೂರಿಯಾಗಿ ನೆರವೇರಿತು.

ಪ್ರಾರಂಭದಲ್ಲಿ ವೇದಿಕೆ ಮೇಲೆ ವಿದ್ಯಾರ್ಥಿಗಳು ಶ್ರೀ ಮನ್ಯಾಯಸುಧಾ ಅನುವಾದ ನೆರವೇರಿಸಿದರು. ದಿವ್ಯ ಸಾನಿಧ್ಯವನ್ನು ಶ್ರೀ ವ್ಯಾಸರಾಜ ಮಠದ ಶ್ರೀ ವಿದ್ಯಾ ಶ್ರೀಶ ತೀರ್ಥರು, ಶ್ರೀ ಪಾದರಾಜ ಮಠದ ಶ್ರೀ ಸುಜಯನಿಧಿ ತೀರ್ಥರು, ಶ್ರೀ  ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು, ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾ ಧೀಶ ತೀರ್ಥರು,

ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥರು, ಶ್ರೀ ಭೀಮನ ಕಟ್ಟೆ ಮಠದ ರಾಘವೇಂದ್ರ ತೀರ್ಥರು, ಶ್ರೀ ತಂಬಿ ಹಳ್ಳಿ ಮಠದ ಶ್ರೀ ವಿದ್ಯಾ ಸಾಗರ್ ಮಾಧವ ತೀರ್ಥರು, ರಾಮೋಹಳ್ಳಿ ಮಠದ ಶ್ರೀ ವಿಶ್ವಭೂಷಣ ತೀರ್ಥರು, ಶ್ರೀ ಸುಬ್ರಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥರು, ಶ್ರೀ ಕಣ್ವ ಮಠದ ಶ್ರೀ ವಿದ್ಯಾ ಕಣ್ವವಿರಾಜ ತೀರ್ಥರು, ಶ್ರೀ ಬಾಳಿಗಾರು ಮಠದ ಶ್ರೀ ಅಕ್ಷೋಭ್ಯ ರಾಮ ಪ್ರಿಯ ತೀರ್ಥರು, ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥರು, ಶ್ರೀ ವಾಮನ ತೀರ್ಥರು ವಹಿಸಿದ್ದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಹಾಮಹೋಪಾಧ್ಯಾಯರಾದ ಶ್ರೀ ರಾಜಾ.ಎಸ್. ಗಿರಿಯಾಚಾರ್ಯರು ಉಪಸ್ಥಿತರಿದ್ದರು . ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಎಲ್ಲಾ ಶ್ರೀ ಪಾದಂಗಳವರನ್ನು ಭಕ್ತಿಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು.

ಶ್ರೀ ಮನ್ಯಾಯಸುಧಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ರೂಪವಾಗಿ ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಆಶೀರ್ವದಿಸಿದರು. ಪಂಡಿತರು, ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

Comments

Popular posts from this blog