ಬೇಸಿಗೆ ಬೆಳೆ ರಕ್ಷಿಸಲು ನೀರು ಬಿಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ- ಬೋಸರಾಜು. ಜಯಧ್ವಜ ನ್ಯೂಸ್, ರಾಯಚೂರು, ಮಾ.31- ಜಿಲ್ಲೆಯಲ್ಲಿ ನಾರಾಯಣಪೂರು ಬಲದಂಡೆ ನಾಲೆ ಅವಲಂಬಿತ ರೈತರು ಬೆಳೆದಿರುವ ಬೆಳೆ ರಕ್ಷಣೆಗೆ ನೀರು ಬಿಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಹೇಳಿದರು. ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಎನ್ ಆರ್ ಬಿ ಸಿ ಅವಲಂಬಿತ ರೈತರು ಬೇಸಿಗೆ ಭತ್ತ ಬೆಳೆ ಬೆಳೆದಿದ್ದು ನೀರಿನ ಅಭಾವದಿಂದ ಅವು ಒಣಗುತ್ತಿವೆ ಆದ್ದರಿಂದ ಬೆಳೆ ರಕ್ಷಣೆಗಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ರಾಜ್ಯಕ್ಕೆ ನೀರು ಹರಿಸುವಂತೆ ಕೋರಲಾಗಿದೆ ಎಂದರು. ಇತ್ತೀಚೆಗೆ ನಡೆದ ಐಸಿಸಿ ಸಭೆಯಲ್ಲಿ ವಾರಬಂದಿಯಂತೆ ನಿಗದಿತ ದಿನಾಂಕದವರೆಗೆ ನೀರು ಬಿಡುಲು ಸಭೆ ನಿರ್ಧರಿಸಿತ್ತು ಆದರೆ ರೈತರ ಒತ್ತಾಯದ ಮೇರೆಗೆ ನಿರಂತರ ನೀರು ಹರಿಸಿದ ಪರಿಣಾಮ ನಾರಾಯಣಪೂರು ಜಲಾಶಯ ಹಾಗೂ ಆಲಮಟ್ಟಿ ಜಲಾಶಯದಲ್ಲಿ ಕುಡಿಯುವ ನೀರಿಗೆ ಮಾತ್ರ ನೀರಿನ ಸಂಗ್ರಹವಿದ್ದು ಆದ್ದರಿಂದ ಬೆಳೆಗಳ ರಕ್ಷಣೆಗೆ ನೀರು ಬಿಡುವಂತೆ ಮಹಾರಾಷ್ಟ್ರಕ್ಕೆ ಕೋರಲಾಗಿದೆ ಎಂದು ಅವರು ನಾನು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸದಿರಲು ನಾನು ವಿಧಾನ ಪರಿಷತ್ ಕಲಾಪದಲ್ಲಿದ್ದೆ ಸಭಾ ನಾಯಕ ನಾಗಿರುವ ಕಾರಣ ಅಧಿವೇಶನದಲ್ಲಿ ನನ್ನ ಉಪಸ್ಥಿತಿ ಅನಿವಾರ್ಯವಿದ್ದದ್ದರಿಂದ ಸಭೆಯಲ್ಲಿ ಪಾಲ್ಗೊಳ್ಳಲು ಆಗಲಿಲ್ಲವೆಂದರು.
Comments
Post a Comment