ಸಮಾಜ ಹಾಗೂ ಕುಟುಂಬದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತಿಮುಖ್ಯ - ಎನ್ ಎಸ್ ಬೋಸರಾಜು.

ಜಯಧ್ವಜ ನ್ಯೂಸ್, ರಾಯಚೂರು,ಮಾ.31-

ಪ್ರತಿಯೊಂದು ಕುಟುಂಬ ಕುಟುಂಬದ ಅಭಿವೃದ್ಧಿ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆ ತಮ್ಮದೇ ಅದ ಪಾತ್ರವನ್ನು ವಹಿಸುತ್ತಾಳೆ ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ ಉದಾಹರಣೆಗಳನ್ನು ನೋಡುತ್ತೇವೆ  ಹಾಗಾಗಿ ಕುಟುಂಬದ ಅಭಿವೃದ್ಧಿಯಲ್ಲಿ ಮಹಿಳೆ ತನ್ನದೇ ಪಾತ್ರವನ್ನು ವಹಿಸಿದ್ದಾಳೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ  ಎನ್ ಎಸ್ ಬೋಸರಾಜು ಹೇಳಿದರು

  ಅವರು ನಿನ್ನೆ ಶ್ರೀಗಿರಿ ಅಭಯ ಆಂಜನೇಯ ಸ್ವಾಮಿ ದೇವಸ್ಥಾನ ಮಾರುತಿ ನಗರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ 40 ನೇ ಶಿವಾನುಭವ ಚಿಂತನಾಗೋಷ್ಠಿಯ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ರಾಯಚೂರಿನಲ್ಲಿ ಮೆಡಿಕಲ್, ಇಂಜಿನಿಯರಿಂಗ್, ಡೆಂಟಲ್, ಕೃಷಿ , ಕಲಾ, ವಾಣಿಜ್ಯ, ಸಂಗೀತ ಎಲ್ಲಾ ವಿವಿಧ ಕ್ಷೇತ್ರಕ್ಕೇ ಸಂಬಂದಿಸಿದ ಕಾಲೇಜುಗಳಿದ್ದು ಹಾಗೆ ರಾಯಚೂರ್ ವಿಶ್ವವಿದ್ಯಾಲಯ ಇದ್ದು ಎಲ್ಲರೂ ತಮ್ಮ ಮಕ್ಕಳ ಉನ್ನತ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣವನ್ನು ನೀಡಬೇಕೆಂದು ತಿಳಿಸಿದರು. ರಾಯಚೂರು ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದು ಕೆರೆ ರಸ್ತೆ ಉದ್ಯಾನವನ ಅಭಿವೃದ್ಧಿಗೆ ಅಗತ್ಯ ನೀಡುತ್ತೇವೆ ರಾಯಚೂರು ನಗರ ಮಹಾನಗರ ಪಾಲಿಕೆ ಆಗಿ ಮೇಲ್ದರ್ಜೆಗೆರಿದ್ದು ನಗರದ ಅಭಿವೃದ್ಧಿಗೆ 200 ಕೋಟಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಂಡಿದ್ದು ರಿಂಗ್ ರೋಡ್, ವಿಮಾನ ನಿಲ್ದಾಣಕ್ಕೆ ಅನುದಾನ ಬಿಡುಗಡೆ ಆಗಿದ್ದು  ಅಭಿವೃದ್ಧಿ ಕಾರ್ಯಗಳಿಗೆ ತಮ್ಮೆಲ್ಲರ ಸಹಕಾರ ಆಗತ್ಯ ಎಂದು ತಿಳಿಸಿದರು.

ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಡಾ. ಮೀನಾಕ್ಷಿ ಖಂಡಿಮಠ     ಉಪನ್ಯಾಸಕಾರರಾಗಿ   ಮಾತನಾಡುತ್ತಾ 12ನೇ ಶತಮಾನದ ಶರಣರು ವಿಶ್ವಗುರು ಬಸವಣ್ಣ ರಾದಿಯಾಗಿ ಅನುಭವ ಮಂಟಪದಲ್ಲಿ ಶರಣರ ವಚನಗಳಿಂದ  ಸಮಾಜದ ಸುಧಾರಣೆ ಅನುಕೂಲವಾಗುವ ಕೆಲಸ ಆಗುತ್ತಿತ್ತು ಎಂದು ಅವರು ಶ್ರೀ ಗಿರಿ ಅಭಯ ಆಂಜನೇಯ  ಸ್ವಾಮಿ ದೇವಸ್ಥಾನದಲ್ಲಿ ಮಹಿಳಾ ದಿನಾಚರಣೆ ನಡೆಯುತ್ತಿರುವುದು ಸಂತಸದ ವಿಷಯ.

ವಿಶ್ವಗುರು ಪಥದಲ್ಲಿ ಭಾರತ ಸಾಗುತ್ತಿದೆ.ಭಾರತದ ಸಂಸ್ಕೃತಿ ಮೌಲ್ಯಗಳು ಜಗತ್ತಿಗೆ ದಾರಿ ದೀಪವಾಗಿವೆ. ಭಾರತ ಶಾಂತಿ ಸಹನೆಗೆ ಮತ್ತೊಮ್ಮೆ ಹೆಸರು ಭಾರತ ಹಾಗಾಗಿ ಇಂದು ಭಾರತದ ಪ್ರತಿಯೊಂದು ಕುಟುಂಬ ಸಮಾಜ ಸುಧಾರಣೆಯಾಗಬೇಕಾದರೆ ಮಹಿಳೆಯರ ಪಾತ್ರ ಬಹು ಮುಖ್ಯ ಮಹಿಳೆ ದರ್ಬಲಳಲ್ಲ ಅಭಲೆಯಳಲ್ಲ ಕುಟುಂಬದ ಬದುಕನ್ನು ಕಟ್ಟಿದ ಮಹಿಳೆಯರಿಗೆ ವಿವಿಧ ಕ್ಷೇತ್ರಗಳಲ್ಲಿ ಬೇರೆ ಬೇರೆ ಸಾಧನೆಗಳನ್ನು ಮಾಡಿದಂತ ಕೀರ್ತಿ ಮಹಿಳೆಗೆ ಸಲ್ಲುತ್ತದೆ ಮಹಿಳೆ ಸಭಲೆ, ಮಹಿಳೆ ಮನೆಗೆದ್ದು ಮಾರು ಗೆಲ್ಲು ಎನ್ನುವಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೀರ್ತಿ ಹೆಣ್ಣಿಗೆ ಸಲ್ಲುತ್ತದೆ. ಮಹಿಳೆ  ಕುಟುಂಬದ ಜವಾಬ್ದಾರಿ ಜೊತೆಗೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಉತ್ತೇಜನ ನೀಡುವ ಮೂಲಕ ಕುಟುಂಬದ ಅಭಿವೃದ್ಧಿಗೆ  ಮಹತ್ವದ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದರು.

ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ  ರಾಜಯೋಗಿನಿ ಸ್ಮಿತಾ ಅಕ್ಕನವರು ಆಶೀರ್ವಚನ ನೀಡುತ್ತಾ ಇದು ಮಹಿಳೆಯರ ಕಾರ್ಯಕ್ರಮ ಆಗಿರುವುದರಿಂದ ಮಹಿಳೆಯರ ಎಲ್ಲಾ ಪ್ರತಿಭೆಗಳು ಅನಾವರಣಗೊಂಡಿವೆ ಮಹಿಳೆ  ಕೇವಲ  ಅಡಿಗೆಮನೆಗೆ ಮಾತ್ರ ಸೀಮಿತವಲ್ಲ .ಅಲ್ಲದೆ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನ ನೀಡುವ ಕೆಲಸ ತಾಯಿ ಮಾಡುತ್ತಾಳೆ.  ಪ್ರಕೃತಿ ಸಂರಕ್ಷಣೆಗೆ ನಾವೆಲ್ಲರೂ ಅಂಕಣ ಬದ್ಧರಾಗಬೇಕು ಒಂದು ವೃಕ್ಷದ ಎಲೆ ಹೂವು ಕಾಯಿ ಹಣ್ಣು ಕೊಂಬೆ ರೆಂಬೆ  ಸುಂದರವಾಗಿ ಇರಬೇಕಾದರೆ ಗಿಡದ ಬುಡಕ್ಕೆ ನೀರುಣಿಸಬೇಕು ಹಾಗೆ ಮಹಿಳೆ ತನ್ನ ಸ್ವಯಂ ರಕ್ಷಣೆ ಮಾಡಿಕೊಂಡಾಗ ಮಾತ್ರ ಮನೆಯ ಜವಾಬ್ದಾರಿ ಉತ್ತಮವಾಗಿ ನಿರ್ವಹಿಸಲು ಯೋಗ್ಯ ಆಗುತ್ತಾಳೆ.

ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕೆಲಸ ನಾವೆಲ್ಲ ಸೇರಿ ಮಾಡಬೇಕು  ಜೀವಸಂಕುಲವನ್ನು ಉಳಿಸಬೇಕು ಪ್ರಕೃತಿಯನ್ನು ಆರಾಧಿಸಿ ಉಳಿಸಿ ಬೆಳೆಸಬೇಕು ಪ್ಲಾಸ್ಟಿಕ್ ತ್ಯಜಿಸಿ ಬಟ್ಟೆ ಚೀಲಗಳನ್ನು ಬಳಸೋಣ ಪ್ರಕೃತಿ ಉಳಿಸೋಣ

ದೈಹಿಕ ಶೃಂಗಾರಕ್ಕೆ ಆದ್ಯತೆ ನೀಡುವಂತೆ ಆತ್ಮವನ್ನು ಸುದ್ದಿಗೊಳಿಸಿಕೊಳ್ಳಲು ಧ್ಯಾನ ಪ್ರಾಣಾಯಾಮ ಮಾಡೋಣ  ಪರಮಾತ್ಮನ ಪ್ರೀತಿಗೆ ಪಾತ್ರರಾಗೋಣ ಎನ್ನುತ್ತಾ ಪ್ರೀತಿ ಪ್ರೇಮ ದಯೆ ಕರುಣೆ ಅನುಕಂಪ ಅನುರಾಗ ಸ್ನೇಹಪರತೆ ಉತ್ತಮ ಚಿಂತನೆಗಳನ್ನು ನಾವೆಲ್ಲಾ ಅಳವಡಿಸಿಕೊಳ್ಳಬೇಕು  ಅಂದಾಗ ಮಾತ್ರ ಸಮಾಜ ಸುಧಾರಣೆ ಆಗಲು ಸಾಧ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ಸಾಧನೆ ಮಾಡಿದ ಮಹಿಳಾ ಸಾಧಕರಿಗೆ ಸನ್ಮಾನವನ್ನು ಮಾಡಲಾಯಿತು.ಕೃಷಿ ಕ್ಷೇತ್ರ - ಶ್ರೀಮತಿ ಜಯಲಕ್ಷ್ಮಿ ನರಸನಗೌಡ ಪಾಟೀಲ್ ಬೊಮ್ಮನಾಳ. ಶಿಕ್ಷಣ ಕ್ಷೇತ್ರ- ಶ್ರೀಮತಿ ಶಿವಮ್ಮ ಬೋಯರ್ ಮತ್ತು ಡಾ ಉಮಾ ವೈದ್ಯಕೀಯಕ್ಷೇತ್ರ -  ಶ್ರೀಮತಿ ಯಶೊದಬಾಯಿ ಪದ್ಮಶಾಲಿ ಮತ್ತು ಶ್ರೀಮತಿ ಶಾರದಾ ಗೋನಾಳ,ಸಾಮಾಜಿಕ ಕ್ಷೇತ್ರ  - ಶ್ರೀಮತಿ ರೂಪ ಶ್ರೀನಿವಾಸ್ ನಾಯಕ್ ,ರಾಜಕೀಯ ಕ್ಷೇತ್ರ - ಶ್ರೀಮತಿ ಶರಣಮ್ಮ ಕಾಮರೆಡ್ಡಿ , ಕಾನೂನು  ಕ್ಷೇತ್ರ- ಶ್ರೀಮತಿ ವಿಜಯಲಕ್ಷ್ಮಿ  ವೆಂಕಪ್ಪ ಪಾಸೋಡಿ ,ಯೋಗ ಕ್ಷೇತ್ರ - ಶ್ರೀಮತಿ ಶ್ರೀದೇವಿ ಅಶೋಕ್ ಕುಮಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಕ್ಷೇತ್ರ - ಶ್ರೀಮತಿ ಸುಲೋಚನ ಚಂದ್ರಶೇಖರ ಗೌಡ ಮಿರ್ಜಾಪೂರ್ ,ಸಂಗೀತ -  ಶ್ರೀಮತಿ ಪ್ರತಿಭಾ ಗೋನಾಳ ಮತ್ತು  ಶ್ರೀಮತಿ ಮಹಾಲಕ್ಷ್ಮಿ, ಪೌರ ಕಾರ್ಮಿಕರ ಕ್ಷೇತ್ರ -ಶ್ರೀಮತಿ ಆಂಜಿನಮ್ಮ ರಾಜಪ್ಪ.ಪರಿಸರ ಕ್ಷೇತ್ರ ...ಶ್ರೀಮತಿ ನಿರ್ಮಲಾ,  ಸ್ವಯಂ ಉದ್ಯೋಗ ಕ್ಷೇತ್ರ..ಶ್ರೀಮತಿ ಸರೋಜಾ ,  ಮತ್ತು ಸುಶೀಲಾ, ಸಾರಿಗೆ ಇಲಾಖೆಯ ಮೋಟಾರು ವಾಹನ ಕ್ಷೇತ್ರ... ಶ್ರೀಮತಿ ವನೀತಾ  ಇನ್ನಿತರರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ವೇದಿಕೆ ಮೇಲೆ ನಗರಸಭಾ ಸದಸ್ಯರಾದ  ಶ್ರೀಮತಿ ಉಮಾ ಜಲ್ದಾರ್, ಕೆ ಶಾಂತಪ್ಪ, ರವೀಂದ್ರ ಜಲ್ದಾರ್,ಕೆ ಪಂಪಾಪತಿ,ಜಯಣ್ಣ, ರುದ್ರಪ್ಪ ಅಂಗಡಿ, ವಿಜಯ ರಾಜೇಶ್ವರಿ ಗೋಪಿಶೆಟ್ಟಿ,  ಇನ್ನಿತರರು ಉಪಸ್ಥಿತರಿದ್ದರು.

ಪ್ರಾಸ್ತಾವಿಕ ಭಾಷಣವನ್ನು  ಬಿ. ಬಸವರಾಜ, ಅದ್ಯಕ್ಷರು ಶ್ರೀ ಗಿರಿ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಸಮಿತಿ ಮಾತನಾಡಿ  ದೇವಸ್ಥಾನದ ಅಭಿವೃದ್ಧಿಯ ಕುರಿತು ಹಲವಾರು ಅಂಶಗಳನ್ನು  ಮಾನ್ಯ ಸಚಿವರಿಗೆ ಮನವಿ ಮಾಡಿದರು ಈ ಸಂದರ್ಭದಲ್ಲಿ ಮನವಿಗೆ ಸ್ಪಂದಿಸಿ ಮುಂದಿನ ದಿನಗಳಲ್ಲಿ ಕಲ್ಯಾಣ ಮಂಟಪಕ್ಕೆ ಅನುದಾನ ನೀಡುವುದಾಗಿ ತಿಳಿಸಿದರು.

ಸ್ವಾಗತವನ್ನು  ಡಾ ಅರುಣಾ ಹಿರೇಮಠ, ಜಿಲ್ಲಾ ಅದ್ಯಕ್ಷರು  ಜಾನಪದ ಮಹಿಳಾ ಘಟಕರವರು ಮಾಡಿದರು. ಕಾರ್ಯಕ್ರಮ ನಿರೂಪಣೆಯನ್ನು ಉಮಾ ಅಶೋಕ್  ನಡೆಸಿಕೊಟ್ಟರು, ಪ್ರಾರ್ಥನೆಯನ್ನು ಸರಿತಾ ಮಹೇಶ್, ಪ್ರತಿಭಾ ಗೋನಾಳ, ಮಹಾಲಕ್ಷ್ಮಿ  ಗಾಯಕರು ಮತ್ತು ಅವರ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು, ಶ್ರೀ ಗಿರಿ ಅಭಯ ಮಹಿಳಾ ಮಂಡಳಿ ಯಿಂದ ಮತ್ತು ಕರ್ನಾಟಕ ಜಾನಪದ ಪರಿಷತ್ ಮತ್ತು ರಘುನಾಥ ಹಳ್ಳಿ ವಿದ್ಯಾರ್ಥಿನಿಯರಿಂದ  ಕೋಲಾಟ ಮತ್ತು ಜಾನಪದ ಗೀತೆಗಳು  ಮತ್ತು ಭಕ್ತಿ ಗೀತೆಗಳು ನಡೆಸಿಕೊಟ್ಟರು. ಖುಷಿ ಭರತ ನಾಟ್ಯ  ನಡೆಸಿ ಕೊಟ್ಟರು.ಕೊನೆಯಲ್ಲಿ ಶಾರದಾ ವಂದಿಸಿದರು. 


Comments

Popular posts from this blog