ಏ.4 ರಿಂದ 6ರವರೆಗೆ ರಾಯಚೂರು ಸಾಂಸ್ಕೃತಿಕ ಜನೋತ್ಸವ -ಚನ್ನಬಸವ ಜಾನೇಕಲ್. ಜಯಧ್ವಜ ನ್ಯೂಸ್, ರಾಯಚೂರು, ಮಾ.26- ಎಐಡಿಎಸ್ಓ, ಎಐಡಿವೈಓ ಹಾಗೂ ಎಐಎಂಎಸ್ಎಸ್ ಮತ್ತು ಪಂಡಿತ ತಾರಾನಾಥ ಸಾಂಸ್ಕೃತಿಕ ವೇದಿಕೆಗಳಿಂದ ಏ.4 ರಿಂದ 6ರವರೆಗೆ ಮೂರು ದಿನಗಳ ರಾಯಚೂರು ಸಾಂಸ್ಕೃತಿಕ ಜನೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಎಐಡಿವೈಓ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್ ಹೇಳಿದರು. ಅವರಿಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಏ.4 ರಂದು ಕರ್ನಾಟಕ ಸಂಘದಲ್ಲಿ ಸಂಜೆ 6.30ಕ್ಕೆ ಕಾರ್ಯಕ್ರಮ ಉದ್ಘಾಟನೆಯನ್ನು ಎಸ್ ಯು ಸಿ ಐ ರಾಜ್ಯ ಕಾರ್ಯದರ್ಶಿ ಕೆ.ಉಮಾ ನೆರವೇರಿಸಲಿದ್ದು , ಅಧ್ಯಕ್ಷತೆಯನ್ನು ಎಐಡಿವೈಓ ರಾಜ್ಯ ಅಧ್ಯಕ್ಷ ಶರಣಪ್ಪ ಉದ್ಬಾಳ್ ವಹಿಸಲಿದ್ದಾರೆಂದರು.
ಏ.5 ರಂದು ಸಂಜೆ 5.30 ಕ್ಕೆ ಎಸ್ ಕೆ ಇ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಬಿ ಎಂ. ಗಿರಿರಾಜ್ ನಾರ್ದೇಶನದ ಅಚ್ಯುತ್ ಕುಮಾರ್ ನಟನೆಯ ಅಮರಾವತಿ ಸಿನೆಮಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು ಅತಿಥಿಗಳಾಗಿ ಪ್ರಜಾವಾಣಿ ಹಿರಿಯ ವರದಾಗಾರರಾದ ಮನೋಜ್ ಕುಮಾರ್ ಗುದ್ದಿ ಆಗಮಿಸಲಿದ್ದಾರೆ ಎಂದರು. ಏ.6 ರಂದು ಬೆಳಗ್ಗೆ 10.30ಕ್ಕೆ ಸರ್ಕಾರಿ ನೌಕರರ ಭವನದಲ್ಲಿ ಯುವ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದ್ದು ಕವಿ ಗೋಷ್ಠಿಯನ್ನು ಹಿರಿಯ ಉಪನ್ಯಾಸಕರಾದ ಗೋಪಾಲ್ ನಾಯಕ ಉದ್ಘಾಟಿಸಲಿದ್ದಾರೆಂದರು. ಅಂದು ಸಂಜೆ 5.30ಕ್ಕೆ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸಮಾರೋಪ ನಡೆಯಲಿದ್ದು ಸಾಹಿತಿ ಮಹಾಂತೇಶ ಮಸ್ಕಿ ಆಗಮಿಸಲಿದ್ದು ಅಧ್ಯಕ್ಷತೆಯನ್ನು ಚನ್ನಬಸವ ಜಾನೆಕಲ್ ವಹಿಸಲಿದ್ದಾರೆ ಎಂದರು. ಮೂರು ದಿನಗಳ ಕಾರ್ಯಕ್ರಮದಲ್ಲಿ ನಾಟಕ, ಮೈಮ್ ಶೋ(ಮೂಕಾಭಿನಯ ಮಾದರಿ), ನೃತ್ಯ, ಹಾಡು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಈ ಸಂದರ್ಭದಲ್ಲಿ ಹಯ್ಯಾಳಪ್ಪ, ವಿನೋದ್ ಕುಮಾರ್, ಸರೋಜ ಇದ್ದರು.
Comments
Post a Comment