ಏ.5 ರಂದು  ಕರ್ನಾಟಕ ಸಂಘದಲ್ಲಿ ಯುಗಾದಿ ನಿಮಿತ್ಯ ವಸಂತ ಕಾವ್ಯ ವಾಚನ: ನೋಂದಣಿಗೆ ಕೋರಿಕೆ

ಜಯ ಧ್ವಜ ನ್ಯೂಸ್ , ರಾಯಚೂರು, ಮಾ.27-ಕರ್ನಾಟಕ ಸಂಘ ರಾಯಚೂರು ಕಲೆ, ಸಾಹಿತ್ಯ, ಸಂಸ್ಕೃತಿಯ ಸಂವೇದನಾಶೀಲ ತಾಣ. ಈ ತಾಣದಲ್ಲಿ ನೂರಾರು ಕಾವ್ಯಗಳು, ಕಥೆಗಳು, ಸಾಹಿತ್ಯದ ಪರಿಕರಗಳು ಜನ್ಮ ತಾಳಿ ಇತಿಹಾಸದ ಕಾಲ ಗರ್ಭದಲ್ಲಿ ಸೇರಿಕೊಂಡು ರಾಯಚೂರಿನ ಸಾಹಿತ್ಯ  ಸಂಸ್ಕೃತಿ ಪರಂಪರೆಯ ರಾಯಭಾರಿಗಳಾಗಿವೆ. 

 ಈ ಸ್ಥಳದಲ್ಲಿ  ಸ್ವತಂತ್ರ ಪೂರ್ವದಲ್ಲಿ ಹುಟ್ಟಿದ ಕಾವ್ಯಗಳು ಸ್ವಾತಂತ್ರದ ಧ್ವನಿಗಳಾಗಿದ್ದು. ಸ್ವತಂತ್ರ ನಂತರ ಹುಟ್ಟಿದ ಕಾವ್ಯ ಮತ್ತು ಸಾಹಿತ್ಯಗಳು ಕರ್ನಾಟಕ ಏಕೀಕರಣದ ಸಮಷ್ಟಿಗಳಾ ಗಿದ್ದವು. ಇಂಥ ಪವಿತ್ರ ಸ್ಥಳದಲ್ಲಿ ಕಾವ್ಯವನ್ನು ಓದುವುದು ರೋಮಾಂಚಕಾರಿಯ ಅನುಭವ. ಇಲ್ಲಿ ವಾಚಿಸಿದ ನಮ್ಮ  ಕಾವ್ಯ ಗಂಗೆ ಸಾಹಿತ್ಯದ ಸಮುದ್ರವನ್ನು ಸೇರುತ್ತದೆ. ಕವಿಗಳೆಲ್ಲ ಬನ್ನಿ ದಿನಾಂಕ 5-4-25. ಸಂಜೆ  5.30 ಕ್ಕೆ ಕರ್ನಾಟಕ ಸಂಘ ಸಭಾಂಗಣ**ರಾಯಚೂರು*ದಲ್ಲಿ ಕಾವ್ಯ ವಾಚೀಸೋಣ. ಅಲ್ಲಿ ಉದಯಿಸಿದ ನೂರಾರು ಮಹನೀಯರ ಕಾವ್ಯಗಳಲ್ಲಿ ನಮ್ಮ ಕವನ ಲೀನವಾಗಲಿ ಎಂದು ಹರಿಸೋಣ.ಯುಗಾದಿ ಹಬ್ಬದ ನಿಮಿತ್ಯ ವಸಂತ ಕಾವ್ಯ ಕವಿಗೋಷ್ಠಿ ಯನ್ನು ಕರ್ನಾಟಕ ಸಂಘ ರಾಯಚೂರು ಹೊಸ ಮನೆ ಪ್ರಕಾಶನ ರಾಯ ಚೂರು ಆಯೋಜಿಸಿರುವ *ವಸಂತ ಕಾವ್ಯ* ನವ ಚೇತನದ ಕಾರ್ಯಕ್ರಮಕ್ಕೆ ಸಾಕ್ಷಿಯಾಗೋಣ. ಕವಿಗಳೆಲ್ಲ ಇವರಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಬಶೀರ್ ಅಹ್ಮದ್ ಹೊಸಮನಿ.ಮೋ 7483549744.ಅಧ್ಯಕ್ಷರು ಹೊಸಮನಿ ಪ್ರಕಾಶನ ಹಾಗೂ ಮುರಳಿಧರ ಕುಲಕರ್ಣಿ. ಮೋ.9448570225 ಕಾರ್ಯದರ್ಶಿ ಕರ್ನಾಟಕ ಸಂಘ ಹೆಚ್ಚಿನ ವಿವರಗಳಿಗಾಗಿ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಸಂಘ, ಶ್ರೀನಿವಾಸ್ ಗಟ್ಟು ಅವರನ್ನು ಸಂಪರ್ಕಿಸಿ. ಹೆಸರುನೋಂದಾಯಿಸಿದವರಿಗೆ ಮಾತ್ರ ಕಾವ್ಯ ವಾಚನ ಅವಕಾಶವೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 


Comments

Popular posts from this blog