ಹೆಬ್ಬುಲಿ ಕಟ್ ಸಿನಿಮಾದ ಹಾಡುಗಳ  ಬಿಡುಗಡೆ ಸಮಾರಂಭ


ಜಯಧ್ವಜ ನ್ಯೂಸ್  ರಾಯಚೂರು,ಮಾ.28- ಸಿನಿಮಾ ಕಲಿತು, ಸುಮಾರು ವರ್ಷಗಳಿಂದ ಶ್ರದ್ಧೆಯಿಂದ ಸಿನಿಮಾದಲ್ಲಿ ದುಡಿದು ದೂರದ ದೊಡ್ಡ ದೊಡ್ಡ ನಗರಗಳಿಗೆ ಹೋಗಿ ತರಬೇತಿ ಪಡೆದ ಸ್ವ ಪ್ರಯತ್ನದಿಂದ ಹೊಸ ಸಿನಿಮಾವೊಂದನ್ನು ನಿರ್ಮಿಸಿ ನಿರ್ದೇಶಿಸಿ ಈಗ ಮೇ ಕೊನೆವಾರದಲ್ಲಿ ತೆರೆಗೆ ತರುವುದಕ್ಕೆ ಮುಂದಾಗಿರುವ ಸ್ಥಳೀಯ ಪ್ರತಿಭೆಗಳನ್ನು ರಾಯಚೂರು ಜನತೆ ಆದರದಿಂದ ಬೆಳೆಸಿ ಬೆನ್ನುತಟ್ಟಬೇಕೆಂದು ಸಾಯಿಮಂದಿರ ಸಂಸ್ಥಾಪಕರಾದ ಸಾಯಿ ಕಿರಣ ಆದೋನಿ ಹಾಗೂ   ಪತ್ರಕರ್ತ ಗೌಡಪ್ಪ ಗೌಡ ಶುಭಾಶಯ ಕೋರಿದರು.


ನಗರದ ಓಂ ಸಾಯಿ ಧ್ಯಾನ ಮಂದಿರದಲ್ಲಿ ಸ್ಥಳೀಯ ರಾಯಚೂರು ಪ್ರತಿಭೆ ಪಿ. ಭೀಮರಾವ್ ಅವರು ನಿರ್ಮಿಸಿ ನಿರ್ದೇಶಿಸಿರುವ ಹೆಬ್ಬುಲಿ ಕಟ್ ಸಿನಿಮಾದ ಲವ್  ಸಾಂಗ್ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರ್ಥಿಕವಾಗಿ ಅಷ್ಟು ಸಬಲರಲ್ಲದ ವ್ಯಕ್ತಿಯೊಬ್ಬರು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿ ಸದಭಿರುಚಿಯ ಚಿತ್ರವನ್ನು ಅತ್ಯಂತ ನಾಜೂಕಾಗಿ ಗ್ರಾಮೀಣ ಸೊಗಡನ್ನೊಳಗೊಂಡು, ಸ್ಥಳೀಯ ಪ್ರತಿಭೆಗಳನ್ನೇ ಹಾಕಿಕೊಂಡು ಸ್ಥಳೀಯವಾಗಿರುವ ವಿಶೇಷ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರ ಇದಾಗಿರುವುದರಿಂದ ನಮ್ಮತನವನ್ನು ರಾಜ್ಯದೆತ್ತರಕ್ಕೆ ಹೋಯ್ದಿರುವ ಪ್ರಯತ್ನಕ್ಕೆ ಬೆಂಬಲಿಸೋಣ ಎಂದು ಆಶಿಸಿದರು.


ಆರಂಭದಲ್ಲಿ ಹಿಂದೂ ಜಾಗರಣಾ ವೇದಿಕೆ ಸುವರ್ಣ ಅವರು ಯುಗಾದಿ ಹಬ್ಬದ ಮಹತ್ವವನ್ನು ತಿಳಿಸಿದ ನಂತರ ಓಂ ಸಾಯಿ ಧ್ಯಾನಮಂದಿರದ ಸಂಸ್ಥಾಪಕರು ಹಾಗೂ ಧರ್ಮಾಧಿಕಾರಿ ಸಾಯಿ ಕಿರಣ ಆದೋನಿ ಅವರು ಬಟನ್ ಒತ್ತುವುದರ ಮೂಲಕ ಸಾಂಗ್ ಬಿಡುಗಡೆಗೊಳಿಸಿದರು.   ಸುಶ್ರಾವ್ಯವಾಗಿ ಹಾಡು ಮೂಡಿ ಬಂತು. ಹಾಡು ಮುಗಿದ ಮೇಲೆ ಪ್ರೇಕ್ಷಕರು ಚಪ್ಪಾಳಿಗೈದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮ ನಿರೂಪಣೆ ಮಾಡಿದ ದಂಡಪ್ಪ ಬಿರಾದಾರ ವಿಶ್ವ ರಂಗಭೂಮಿ ದಿನವಾದ ಇಂದು ಗುರು  ಸಾಯಿಬಾಬಾ ಸನ್ನಿಧಿಯಲ್ಲಿ ಗುರುವಾರ ಈ ಹಾಡು ಜನರಿಗೆ ಆರ್ಪಿತವಾಗುತ್ತಿರುವುದು ವಿಶೇಷ ಎಂದರು. 

ಶಂಕ್ರಣ್ಣ ಆದೋನಿ, ಶಿವಮೂರ್ತಿ ಸೇರಿದಂತೆ ಹೆಬ್ಬುಲಿ ಕಟ್ ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Comments

Popular posts from this blog