ಮಂತ್ರಾಲಯ: ಯುಗಾದಿ ಅಂಗವಾಗಿ ವಿಶೇಷ ಪೂಜೆ. ಜಯಧ್ವಜ ನ್ಯೂಸ್, ರಾಯಚೂರು,ಮಾ.30- ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಯುಗಾದಿ ಹಬ್ಬ ವಿಶ್ವವಸುನಾಮ ಸಂವತ್ಸರ ಅಂಗವಾಗಿ ವಿಶೇಷ ಪೂಜೆ ನೆರವೇರಿತು.
ಬೆಳಿಗ್ಗೆ ಶ್ರೀ ಮನ್ಮೂಲರಾಮದೇವರಿಗೆ ಹಾಗೂ ರಾಯರ ಬೃಂದಾವನಕ್ಕೆ ಹಾಗೂ ಎಲ್ಲಾ ಪೀಠಾಧಿಪತಿಗಳ ಬೃಂದಾವನಕ್ಕೆ ತೈಲಅಭ್ಯಂಜನ ಮತ್ತು ಮಹಾಮಂಗಳಾರತಿ ನೆರವೇರಿತು ನಂತರ ತುಲಸಿ ಪೂಜೆ , ಗೋಪೂಜೆ ನಡೆಯಿತು.
ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ತೈಲ ಅಭ್ಯಂಜನ, ನಾರೀಕೃತ ನೀರಾಜನ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.



Comments
Post a Comment