ಸದರ್ ಬಜಾರ್  ಪೊಲೀಸರ ಕಾರ್ಯಾಚರಣೆ ನಾಲ್ಕು ಗಂಟೆಗಳಲ್ಲಿ 1.95 ಲಕ್ಷ ರೂ ಮೌಲ್ಯದ ಬಂಗಾರ, ಬೆಳ್ಳಿ  ಒಡವೆ ಪತ್ತೆ. 
                                                                                                                              ಜಯ ಧ್ವಜ ನ್ಯೂಸ್ ರಾಯಚೂರು,ಏ.26-                  ನಗರದ ಸದರ್ ಬಜಾರ್ ಪೊಲೀಸರ ಕಾರ್ಯಾಚರಣೆಯಿಂದ ನಾಲ್ಕು ಗಂಟೆಗಳಲ್ಲಿ ಕಳೆದು ಹೋದ ಒಡವೆ ಪತ್ತೆ ಹಚ್ಚಿ  ಮಾಲೀಕರಿಗೆ ಒಪ್ಪಿಸಿದ ಘಟನೆ ಜರುಗಿದೆ.            ಈ ಬಗ್ಗೆ  ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯಲ್ಲಿ  ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಸುದ್ದಿಗೋಷ್ಠಿಯಲ್ಲಿ  ಮಾತನಾಡಿ ಶಕ್ತಿ ನಗರದ ಕರಾಟೆ ಶಿಕ್ಷಕಿ ಲಕ್ಷ್ಮೀ. ಎಂ ಎಂಬುವವರು ನಗರದ ಕೇಂದ್ರ ಬಸ್  ನಿಲ್ದಾಣದಿಂದ  ತೀನ್ ಕಂದಿಲ್ ಗೆ ಏ.22 ರಂದು ಆಟೋದಲ್ಲಿ ಆಗಮಿಸಿ ಒಡವೆಯಿದ್ದ ಬ್ಯಾಗ್ ಆಟೋದಲ್ಲಿ ಮರೆತು ಹೋಗಿದ್ದರು ತದ ನಂತರ ಸದರ್ ಬಜಾರ್ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ

ತತಕ್ಷಣದಲ್ಲಿ ಕಾರ್ಯಾಚರಣೆ ನಡೆಸಿ ತಂತ್ರಾಜ್ಞಾನ ಮತ್ತು ಇತ್ತೀಚೆಗೆ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಇಲಾಖೆ  ಅಳವಡಿಸಿರುವ ಸಿಸಿ ಕ್ಯಾಮರಾ ಸಹಾಯದಿಂದ ಆಟೋ ಪತ್ತೆ ಹಚ್ಚಿ ಕಳೆದು ಹೋದ 17 ಗ್ರಾಂ ಬಂಗಾರದ ಒಡವೆ, 33 ತೊಲೆ ಬೆಳ್ಳಿ ಆಭರಣ ಮತ್ತು ಒಂದು ಸಾವಿರ ರ ನಗದು ಒಟ್ಟು 1.95 ಲಕ್ಷ.ರೂ ಮೌಲ್ಯ ಪತ್ತೆ ಹಚ್ಚಿ ಮಾಲೀಕರಿಗೆ ಒಪ್ಪಿಸಲಾಗಿದೆ ಎಂದು ತಿಳಿಸಿದರು. ಈ ಕಾರ್ಯದಲ್ಲಿ ಡಿಎಸ್ಪಿ ಶಾಂತವೀರ್, ಸರ್ದಾರ್ ಬಜಾರ್ ಪಿಐ ಉಮೇಶ್ ಕಾಂಬ್ಳೆ, ಅಪರಾಧ ವಿಭಾಗದ ಪಿಎಸ್ಐ ನರಸಮ್ಮ ಮತ್ತು ಸಿಬ್ಬಂದಿಗಳಾದ ವೆಂಕಟೇಶ್, ರವಿಕುಮಾರ್, ಶಿವಾನಂದ ರವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.

Comments

Popular posts from this blog