ಪಹಲ್ಗಾಮ್ ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ರಾಜ್ಯದ ಮೂವರ ಕುಟಂಬಕ್ಕೆ ಮಂತ್ರಾಲಯ ಮಠದಿಂದ ತಲಾ ಒಂದು ಲಕ್ಷ .ರೂ ಪರಿಹಾರ- ಶ್ರೀ ಸುಬುಧೇಂದ್ರತೀರ್ಥರು. ಜಯ ಧ್ವಜ ನ್ಯೂಸ್ ರಾಯಚೂರು,ಏ.24- ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ಪೈಶಾಚಿಕ ಕೃತ್ಯದಲ್ಲಿ ಹತ್ಯೆಗೀಡಾದ ರಾಜ್ಯದ ಮೂವರ ಕುಟುಂಬಕ್ಕೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಘೋಷಿಸಿದ್ದಾರೆ. ಉಗ್ರರ ಕೃತ್ಯವನ್ನು ತೀರ್ವವಾಗಿ ಖಂಡಿಸಿರುವ ಅವರು ಭಾರತ ದೇಶದಲ್ಲಿ ಎಲ್ಲಾ ಜಾತಿ ಧರ್ಮದವರು ನೆಲೆಸಿದ್ದಾರೆ ನಾವು ಯಾರಿಗೂ ತೊಂದರೆ ನೀಡುವುದಿಲ್ಲ ಭಾರತೀಯರು ಶಾಂತಿ ಪ್ರಿಯರು ಆದರೆ ನಮ್ಮ ದೇಶದ ಜನರ ಮೇಲೆ ವಿನಾಕಾರಣ ದಾಳಿ ಮಾಡಿದರೆ ನಮ್ಮ ಸರ್ಕಾರ ಸಹಿಸಿಕೊಳ್ಳುವುದಿಲ್ಲ ಅದಕ್ಕೆ ತಕ್ಕ ಪ್ರತಿಕ್ರಿಯೆ ಶತ್ರು ರಾಷ್ಟ್ರಕ್ಕೆ ನೀಡುತ್ತದೆ ನಾವೆಲ್ಲರೂ ಭಾರತೀಯರು ಒಗ್ಗಟ್ಟಿನಿಂದ ಬದುಕಬೇಕು ಎಂದು ಸಂದೇಶ ನೀಡಿದ್ದಾರೆ.
Comments
Post a Comment