ಏ.26 ರಂದು ಕೆ ಆರ್ ಎಸ್ ಎಸ್ ಡಿ ಐ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ಮಧುಮೇಹ ಜಾಗೃತಿ ಕಾರ್ಯಕ್ರಮ - ಡಾ.ಬಸವರಾಜ ಪಾಟೀಲ್. ಜಯ ಧ್ವಜ ನ್ಯೂಸ್ ರಾಯಚೂರು, ಏ.25- ರಿಸರ್ಚ್ ಸೋಸೈಟಿ ಫಾರ್ ದಿ ಸ್ಟಡಿ ಆಫ್ ಡಯಾಬಿಟಿಸ್ ಇನ್ ಇಂಡಿಯಾ ಕರ್ನಾಟಕ ಶಾಖೆಯ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ಮಧುಮೇಹ ಜಾಗೃತಿ ಕಾರ್ಯಕ್ರಮವನ್ನು ಏ.26 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕೆ ಆರ್ ಎಸ್ ಎಸ್ ಡಿ ಐ ಸಂಸ್ಥೆಯ ನೂತನ ಅಧ್ಯಕ್ಷರಾದ ಡಾ.ಬಸವರಾಜ ಎಂ.ಪಾಟೀಲ್ ಹೇಳಿದರು. ಅವರಿಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ದೇಶಾದ್ಯಂತ ಸುಮಾರು 12 ಸಾವಿರ ಜನ ಸದಸ್ಯರಿದ್ದಾರೆ ರಾಜ್ಯದಲ್ಲಿ 2003ರಲ್ಲಿ ಪ್ರಾರಂಭವಾಗಿದ್ದು ನಾನು ಸಂಸ್ಥೆಯ 13 ನೇ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುತ್ತಿದ್ದು ಕಲ್ಯಾಣ ಕರ್ನಾಟಕ ಭಾಗದಿಂದ ಪ್ರಪ್ರಥಮ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ ಎಂದರು. ದೇಶ ಮತ್ತು ರಾಜ್ಯದಲ್ಲಿ ಮಧುಮೇಹ ವ್ಯಾಪಕವಾಗಿ ಬಾಧಿಸುತ್ತಿದೆ ಚಿಕ್ಕ ಮಕ್ಕಳು ಸಹ ಮಧುಮೇಹಕ್ಕೆ ತುತ್ತಾಗುತ್ತಿದ್ದಾರೆ ಇದಕ್ಕೆ ಪ್ರಮುಖ ಕಾರಣ ಜೀವನ ಪದ್ಧತಿ , ಹೆಚ್ಚಾಗಿ ಸಕ್ಕರೆ ಹಾಗೂ ಕೊಬ್ಬಿನಾಂಶವಿರುವ ಆಹಾರ ಸೇವನೆ ಪ್ರಮುಖ ಕಾರಣ ವ್ಯಾಯಾಮದಿಂದ ವಿಮುಖ ,ದೈಹಿಕ ಶ್ರಮವಿಲ್ಲದೆ ಇರುವುದು ಸಹ ಮಧುಮೇಹ ಬರಲು ಕಾರಣವಾಗಿದೆ ಎಂದರು.
ನಮ್ಮ ಸಂಸ್ಥೆಯ ಅಧ್ಯಕ್ಷನಾಗಿ ನಾನು ಏ. 26 ರಂದು ಬೆಳಿಗ್ಗೆ 10 ರಿಮ್ಸ್ ಆಸ್ಪತ್ರೆ ಶಿಕ್ಷಣ ಘಟಕ ಸಭಾಂಗಣದಲ್ಲಿ ನಡೆಯುವ ಪದಗ್ರಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಲಿದ್ದು ಕಾರ್ಯಕ್ರಮ ಉದ್ಘಾಟನೆಯನ್ನು ರಿಮ್ಸ್ ಡೀನ್ ಡಾ.ರಮೇಶ ಬಿ.ಎಚ್ ನೆರವೇರಿಸಲಿದ್ದು, ಅತಿಥಿಗಳಾಗಿ ಐಎಂಎ ರಾಜ್ಯ ಅಧ್ಯಕ್ಷ ಡಾ.ವಿ.ವಿ.ಚಿನಿವಾಲರ್ , ವಿಶೇಷ ಆಹ್ವಾನಿತರಾಗಿ ಡಾ.ರಾಮಕೃಷ್ಣ,ಡಾ.ಭಾಸ್ಕರ್ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದರು. ಇದೆ ವೇಳೆ ಮಧುಮೇಹದ ಬಗ್ಗೆ ಅನೇಕ ನುರಿತ ವೈದ್ಯರಿಂದ ವಿಚಾರ ಸಂಕಿರಣ ನಡೆಯಲಿದೆ ಎಂದರು. ಹಿರಿಯ ವೈದ್ಯ ಡಾ.ಮಹಾಲಿಂಗಪ್ಪ ಮಾತನಾಡಿ ಮಧುಮೇಹ ಇತ್ತೀಚೆಗೆ ಹೆಚ್ಚಾಗಿ ಪೀಡಿಸುತ್ತಿದ್ದು ಅನೇಕ ಕಾಯಿಲೆಗಳಿಗೆ ಮಧುಮೇಹ ರಹದಾರಿಯಾಗಿದೆ ಇದರಿಂದ ದೂರವಿರಲು ನಾವು ಆಹಾರ ಪದ್ಧತಿ ಮತ್ತು ಆಹಾರ ಸೇವನೆ ನಿಯಂತ್ರಣ, ವ್ಯಾಯಾಮ ಇನ್ನಿತರ ಕ್ರಿಯಾಶೀಲ ಚಟುವಟಿಕೆಗಳಿಂದ ಮಧುಮೇಹ ತೊಡೆದು ಹಾಕಬಹುದು ಎಂದರು. ಈ ಸಂದರ್ಭದಲ್ಲಿ ಡಾ.ರಾಮಕೃಷ್ಣ ಎಂ.ಆರ್, ಡಾ.ಹರಿಪ್ರಸಾದ್, ಡಾ.ಎಸ್.ಎಸ್.ರೆಡ್ಡಿ, ಡಾ.ನಾಗಭೂಷಣ್ ಇದ್ದರು.
Comments
Post a Comment