ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಪ್ರದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ಅಂಗವಾಗಿ ನಾಳೆ ಪೂರ್ವಭಾವಿ ಸಭೆ - ಜಗನ್ನಾಥ ಕುಲಕರ್ಣಿ   
                ಜಯ ಧ್ವಜ ನ್ಯೂಸ್ ರಾಯಚೂರು,ಏ.28-                                                                                                          ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ  ಅಧಿಕೃತವಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ) ಬೆಂಗಳೂರು. ಗೆ ಸಂಯೋಜಿತವಾಗಿದ್ದು ಏ‌. 29 ರಂದು ಸಂಜೆ 5-30ಕ್ಕೆ  ಗಾಜಗಾರಪೇಟೆಯ ಶ್ರೀ ಶ್ರೀಂಗೇರಿ ಶಾರದಾ ಕಲ್ಯಾಣ ಮಂಟಪದಲ್ಲಿ ಸಭೆಯನ್ನು ಆಯೋಜಿಸಲಾಗಿದೆ.  ಇತ್ತೀಚೆಗೆ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ ಎಸ್ ರಘುನಾಥ ರವರಿಗೆ ಹಾಗೂ ಎಕೆಬಿಎಂಎಸ್ ರಾಜ್ಯ ಹಿರಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಸನ್ಮಾನ್ಯ ಶ್ರೀ ಆರ್ ಲಕ್ಷ್ಮೀಕಾಂತ ರವರಿಗೆ ಮತ್ತು ಎಕೆಬಿಎಂಎಸ್ ನ ರಾಜ್ಯ ಖಜಾಂಚಿಯಾಗಿ ಆಯ್ಕೆ ಆದ ಸನ್ಮಾನ್ಯ ಶ್ರೀ ಸುಬ್ಬ ನರಸಿಂಹ ರವರಿಗೆ ಸನ್ಮಾನ ಕಾರ್ಯಕ್ರಮವನ್ನು ಜೂನ್ ತಿಂಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ.               ಇದರ ಸಂಬಂಧ ಸಲಹೆ ಸೂಚನೆಗಳನ್ನು ನೀಡಲು ಸಭೆಯನ್ನು ಕರೆಯಲಾಗಿದೆ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ  ಎಲ್ಲಾ ವಿಪ್ರ ಬಾಂಧವರು  ಭಾಗವಹಿಸಬೇಕೆಂದು  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾನಿಕಟಪೂರ್ವ ಉಪಾಧ್ಯಕ್ಷರಾದ  ಜಗನ್ನಾಥ ಕುಲಕರ್ಣಿ  ಕೋರಿದ್ದಾರೆ. 

Comments

Popular posts from this blog