ಕಾಕರಗಲ್ ಟೋಲ್ ಧ್ವಂಸ ಶಾಸಕರ ಪುತ್ರನ ಮೇಲೆ ಸೂಕ್ತ ಕ್ರಮ ವಹಿಸಿ- ಶ್ರೀ ದೇವಿ ನಾಯಕ. ಜಯ ಧ್ವಜ ನ್ಯೂಸ್ ರಾಯಚೂರು,ಏ.27- ದೇವದುರ್ಗ ತಾಲೂಕಿನ ಕಾಕರಗಲ್ ಬಳಿ ಟೋಲ್ ಧ್ವಂಸಗೊಳಿಸಿದ ಶಾಸಕರಾದ ಕರೆಮ್ಮ ನಾಯಕ ಪುತ್ರ ಸಂತೋಷ್ ನಾಯಕ ಮೇಲೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ವಹಿಸಬೇಕು ಎಂದು ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಶ್ರೀ ದೇವಿ ನಾಯಕ ಆಗ್ರಹಿಸಿದರು. ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಶಾಸಕರ ಪುತ್ರ ನಿಂದಲೆ ಅಶಾಂತಿ ಮೂಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಈ ಹಿಂದೆ ಶಾಸಕರು ತಮಗೆ ಜೀವ ಬೆದರಿಕೆಯಿದೆ ಎಂದು ವಿಧಾನ ಸಭೆಯಲ್ಲಿ ಸರ್ಕಾರದಿಂದ ರಕ್ಷಣೆ ಕೋರಿದ್ದರು ಸದ್ಯ ಅವರ ಪುತ್ರ ನಿಂದಲೆ ಸರ್ಕಾರದ ಆಸ್ತಿ ನಷ್ಟವಾಗಿದ್ದು ಇದನ್ನು ಭರಿಸುವವರು ಯಾರು ಇವರ ಮೇಲೆ ಸೂಕ್ತ ಕ್ರಮ ಜರುಗಿಸದಿದ್ದರೆ ಗೃಹ ಸಚಿವರಿಗೆ ಮನವಿ ಮಾಡಲಾಗುತ್ತದೆ ಎಂದರು. ಟೋಲ್ ಅಗತ್ಯವಿಲದಿದ್ದಲ್ಲಿ ಸರ್ಕಾರಕ್ಕೆ ಮನವಿ ಮಾಡಿ ತೆರವುಗೊಳಸಬೇಕಿತ್ತು ಈ ರೀತಿ ದೌರ್ಜನ್ಯ ಮಾಡಿರುವುದು ಸರಿಯಲ್ಲವೆಂದರು. ಈ ಸಂದರ್ಭದಲ್ಲಿ ಮಂಜುಳಾ ಅಮರೇಶ, ಮಾಲಾ ಭಜಂತ್ರಿ,ಕಾಸಿಂಬಿ, ಲಕ್ಷ್ಮೀ ನರಸಿಂಹಲು ಇದ್ದರು.
Comments
Post a Comment