ಪಹಲ್ಗಾಮ್ ಘಟನೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ನಿಂದ ಮೇಣದಬತ್ತಿ ಮೆರವಣಿಗೆ.                                                                                                           ಜಯ ಧ್ವಜ ನ್ಯೂಸ್ ರಾಯಚೂರು ಏ.25-                                                                                                                                       ಕಾಶ್ಮೀರದ‌ ಪಹಲ್ಗಾಮ್ ನಲ್ಲಿ‌ ನಡೆದ ಉಗ್ರರ‌ ದಾಳಿಯನ್ನು ಖಂಡಿಸಿ ದಾಳಿಯಲ್ಲಿ ಹುತಾತ್ಮರಾದ ದೇಶದ ಅಮಾಯಕ‌ ನಾಗರೀಕರ ಸ್ಮರಣಾರ್ಥ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ   ಮೇಣದಬತ್ತಿ ಮೆರವಣಿಗೆ ನಡೆಸಲಾಯಿತು . 

                    ಸಂಜೆ ನಗರದ ತೀನ ಕಂದೀಲ್ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯರಾದ ಎ.ವಸಂತ ಕುಮಾರ್,  ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಬಸವರಾಜ ಪಾಟೀಲ್ ಇಟಗಿ,ಆರ್ ಡಿ ಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಕೆಪಿಸಿಸಿ ಮಾಧ್ಯಮ ವಿಭಾಗದ ರಾಜ್ಯ ವಕ್ತಾರ ಡಾ.ರಝಾಕ್ ಉಸ್ತಾದ್, ಮಹಾನಗರ ಪಾಲಿಕೆ ಸದಸ್ಯ ದರೂರು ಬಸವರಾಜ, ಸೇರಿದಂತೆ ಪಕ್ಷದ ಮುಖಂಡರು , ಕಾರ್ಯಕರ್ತರು ಇದ್ದರು. 

Comments

Popular posts from this blog