ಮೇ.1 ರಂದು ಜಾಗೃತಿ ಜಾಥಾಕ್ಕೆ ಚಾಲನೆ: ಮಾದಿಗ ಸಮುದಾಯದವರು ನಿಖರ ಮಾಹಿತಿ ನೀಡಿ- ಜೆ.ಬಿ.ರಾಜು. ಜಯ ಧ್ವಜ ನ್ಯೂಸ್ ರಾಯಚೂರು,ಏ.28- ಒಳಮೀಸಲಾತಿ ಜಾರಿಗಾಗಿ ರಚಿಸಿದ ನಾಗ್ ಮೋಹನದಾಸ್ ಆಯೋಗವು ಮೇ.5ರಿಂದ ಒಳಮೀಸಲಾತಿಗೊಳಪಡುವ ಜಾತಿಗಳ ಗಣತಿ ನಡೆಸುತ್ತಿದ್ದು ಮಾದಿಗ ಸಮುದಾಯದ ಜನರು ನಿಖರ ಮಾಹಿತಿ ನೀಡಬೇಕೆಂದು ಮಾದಿಗ ಸಮಾಜದ ಮುಖಂಡರಾದ ಜೆ.ಬಿ.ರಾಜು ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸಲು ನಾಗಮೋಹನ ದಾಸ್ ಆಯೋಗ ಸರ್ಕಾರಕ್ಕೆ ಮಧ್ಯಂತರ ವರದಿ ನೀಡಿದ್ದು ಒಳಮೀಸಲಾತಿ ಕಲ್ಪಿಸಲು ಒಳಮೀಸಲಾತಿಗೆ ಒಳಪಡುವ ಜಾತಿಗಳ ಗಣತಿ ಮಾಡಲು ಮೇ. 5ರಿಂದ ಮನೆ ಮನೆಗೆ ಬರುತ್ತಿದ್ದು ಮಾದಿಗ ಜನಾಂಗದ ಜನರು ಕಾಲಂ ನಂ.61 ರಲ್ಲಿ ಮಾದಿಗರೆಂದು ಬರೆಸಬೇಕೆಂದು ಹೇಳಿದ ಅವರು ಮೇ.1 ರಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಮಹಾನಗರ ಪಾಲಿಕೆ ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಿಗಿರಿ ಮಾದಿಗ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಿದ್ದು ಜಿಲ್ಲೆಯ ಎಲ್ಲಾ ತಾಲೂಕುಗಳು, ವಾರ್ಡ್ ಗಳಲ್ಲಿ ಜಾಗೃತಿಮೂಡಿಸಲಾಗುತ್ತದೆ ಎಂದರು.
ಮೇ 17 ರವರೆಗೆ ಒಳ ಮೀಸಲಾತಿ ಜಾತಿ ಗಣತಿ ನಡೆಯಲಿದ್ದು ಮೇ ಅಂತ್ಯಕ್ಕೆ ಸರ್ಕಾರಕ್ಕೆ ಆಯೋಗ ಅಂಕಿ ಅಂಶ ನೀಡಲಿದ್ದು ಸರ್ಕಾರ ಜಾತಿ ಗಣತಿ ಅಂಕಿ ಅಂಶ ಪರಿಗಣಿಸಿ ಒಳ ಮೀಸಲಾತಿ ಜಾರಿ ಮಾಡಲಿದೆ ಎಂಬ ವಿಶ್ವಾಸವಿದ್ದು ಮಾದಿಗ ಸಮುದಾಯದ ಜನರು ನಿರ್ದಿಷ್ಟ ಮಾಹಿತಿ ನೀಡಬೇಕೆಂದರು. ಈ ಸಂದರ್ಭದಲ್ಲಿ ಎಂ.ವಿರುಪಾಕ್ಷಿ , ಅಂಬಣ್ಣ ಅರೋಲಿ, ನರಸಿಂಹಲು ಮಾಡಗಿರಿ, ನರಸಪ್ಪ, ಕೆ.ಪಿ.ಅನೀಲ ಕುಮಾರ್,ಶಂಕರ್ ಇನ್ನಿತರರು ಇದ್ದರು.
Comments
Post a Comment