ತಾಲೂಕಾ ಮತ್ತು ಗ್ರಾಮ ಮಟ್ಟದಲ್ಲಿ ಮದುಮೇಹ ಪಾಠಶಾಲೆ ಪ್ರಾರಂಭಿಸಿ ಜಾಗೃತಿ ಮೂಡಿಸುವೆ -  ಡಾ.ಬಸವರಾಜ್.ಎಂ. ಪಾಟೀಲ
.                                                     ಜಯಧ್ವಜ ನ್ಯೂಸ್ ರಾಯಚೂರು, ಏ.26- ನಗರದ ರಿಮ್ಸ್ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕರ್ನಾಟಕ ಮದುಮೇಹ ಸಂಶೋಧನಾ ಸಂಸ್ಥೆಗೆ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಭಾರತೀಯ ಮೆಡಿಕಲ್ ಅಸೋಷಿಯೇಶನ್ ಅಧ್ಯಕ್ಷರಾದ ಡಾ. ವಿ.ವಿ. ಚಿನಿವಲರರವರ  ನೆರವೇರಿಸಿದರು. ಅಧ್ಯಕ್ಷತೆಯನ್ನು ರಿಮ್ಸ್ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಸವರಾಜ ಎಂ. ಪಾಟೀಲರು ವಹಿಸಿದ್ದರು .

ಉದ್ಘಾಟಕರಾಗಿ ಆಗಮಿಸಿದ ರಾಯಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಡೀನ್ ಕಮ್ ನಿರ್ಧೇಶಕರಾದ ಡಾ. ರಮೇಶರವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸುಮಾರು 13 ವರ್ಷಗಳ ಬಳಿಕ ಕಲ್ಯಾಣ ಕರ್ನಾಟಕಕ್ಕೆ ಆರ್.ಎಸ್ ಎಸ್ ಡಿ.ಐ. ಸಂಸ್ಥೆಗೆ ಅಧ್ಯಕ್ಷ ಸ್ಥಾನ ದೊರೆತಿದ್ದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ, ಅಧ್ಯಕ್ಷ ಸ್ಥಾನದ ಅಧಿಕಾರ ಸ್ವೀಕರಿಸಿದ ರಿಮ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಸವರಾಜ ಎಂ. ಪಾಟೀಲರಿಗೆ ಹಾರ್ಧಿಕ ಶುಭಾಶಯಗಳನ್ನು ತಿಳಿಸುತ್ತೇನೆ, ಅವರು ಭಾರತ ಮಟ್ಟದ ಈ ಸಂಸ್ಥೆ ರಾಜ್ಯ ಮಟ್ಟದ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಅವರು ಸಂಸ್ಥೆಯನ್ನು ಇನ್ನೂ ಉನ್ನತ ಮಟ್ಟಕ್ಕೆ ಬೆಳೆಸುತ್ತಾರೆ ಎಂಬ ನಂಬಿಕೆ ನಮಗಿದೆ, ಯಾಕೆಂದರೆ ಡಾ. ಎಂ. ಪಾಟೀಲರು ತುಂಬಾ ಸರಳ ಸಜ್ಜಿನಿಕೆಯ ವ್ಯಕ್ತಿಯಾದುದರಿಂದ ಜನಸಾಮಾನ್ಯರಲ್ಲಿ ಮದುಮೇಹದ ಅರಿವು ಮೂಡಿಸಿ ಜಿಲ್ಲೆ ತಾಲೂಕಲ್ಲದೇ ಗ್ರಾಮ ಗ್ರಾಮಗಳಿಗೂ ತೆರಳಿ ಮದುಮೇಹದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ಸುಕಾಣುವಂತಾಗಲಿ, ಹಾಗೇ ಆರ್ ಎಸ್ ಎಸ್ ಡಿ ಐ  ಗೆ ಇ‌ನ್ನೂ ಹೆಚ್ಚಿನ ಸಂಖೆಯ ಸದಸ್ಯರನ್ನು ಬದಳೆಸುವಲ್ಲಿ ಅವರು ಯಶಸ್ಸು ಕಾಣಲಿ ಎಂದು ಶುಭ ಹಾರೈಸುತ್ತೇನೆ ಎಂದು ಹೇಳಿದರು.



ಆರ್ ಎಸ್ ಎಸ್ ಡಿ ಐ  ನ ನೂತನ ರಾಜ್ಯಾಧ್ಯಕ್ಷರಾದ ಡಾ. ಬಸವರಾಜ ಎಂ. ಪಾಟೀಲರು ಮಾತನಾಡಿ ಈ ಸಂಸ್ಥೆಯು ಪ್ರಾರಂಭವಾಗಿ ಸುಮಾರು ವರ್ಷಗಳ ನಂತರ ಕಲ್ಯಾಣ ಕರ್ನಾಟಕದ ಭಾಗಕ್ಕೆ ನನ್ನನ್ನು ಅಧ್ಯಕ್ಷನನ್ನಾಗಿ ಚುನಾಯಿಸಿದ್ದು ತುಂಬಾ ಖುಷಿ ತಂದಿದೆ ಹಾಗೆ ನನ್ನ ಈ ಸಂಸ್ಥೆಯು ದೊಡ್ಡ ಜವಾಬ್ದಾರಿಯನ್ನು ನನ್ನ ಹೆಗಲಿಗೆ ಏರಿಸಿದೆ, ಇದಕ್ಕೆಲ್ಲ ಆ ಭಗವಂತನ, ನನ್ನ ಮಾತಾಪಿತೃಗಳ ಆಶೀರ್ವಾದ ಹಾಗೂ ನನ್ನ ಪ್ರೀತಿಯ ಮಡದಿಯ ಸಹಾಯ ಸಹಕಾರ ಆಕೆಯು ನನ್ನ ಮೇಲೆ ಇಟ್ಟಂಥಹ ನಂಬಿಕೆ ಮತ್ತು ಆಕೆಯ ಧೈರ್ಯವೇ ಕಾರಣ ಯಾಕೆಂದರೆ ಅವರು ಯಾವಾಗಲೂ ಹೇಳ್ತಾ ಇರ್ತಾರೆ ಯಾರಿಗಾದರೂ ಅಥವಾ ಯಾವುದಾದರೂ ಸಂಘ ಸಂಸ್ಥೆಗೆ ಒಳ್ಳೇ ಕೆಲಸ ಮಾಡುವುದಾದರೆ ಅದನ್ನು ಕಣ್ಣು ಮುಚ್ಚಿಕೊಂಡು ಜವಾಬ್ದಾರಿ ವಹಿಸಿಕೊಳ್ಳಬೇಕು ಮುಂದೆ ಆ ಭಗವಂತ ಇದ್ದೇ ಇರುತ್ತಾನೆ, ಈ ಸೇವೆಯಲ್ಲಿ ನೀವು ಯಶಸ್ಸು ಕಂಡೇ ಕಾಣ್ತೀರಾ ಎಂದು ಬೆನ್ನು ತಟ್ಟುವ ನುಡಿಗಳು ನನಗೆ ಆನೆ ಬಲ ಬಂದಂತಾಗಿದೆ, ಈಗಾಗಲೇ ಈ ಸಂಸ್ಥೆಗೆ ಹಲವಾರು ಜಿಲ್ಲೆಗಳ ಅನೇಕ ಅಧ್ಯಕ್ಷರು ಅಧಿಕಾರ ಸ್ವೀಕಾರ ಮಾಡಿ ಈಗ ರಾಯಚೂರು ಜಿಲ್ಲೆಯ ಮಡಲಿಗೆ ಬಂದಿದೆ, ಜಿಲ್ಲೆ ತಾಲೂಕಲ್ಲದೇ ಗ್ರಾಮ ಗ್ರಾಮಗಳಿಗೂ ತೆರಳಿ ಮದುಮೇಹ ಪಾಠಶಾಲೆಗಳನ್ನು ಪ್ರಾರಂಭಿಸಿ ಜನರಲ್ಲಿ ಜಾಗೃತಿ ಮೂಡಿಸುವ ಸೇವೆ ಸಲ್ಲಿಸುತ್ತೇನೆ ಹಾಗೇ ಈ ಸಂಸ್ಥೆಗೆ ನನ್ನ ಅಧಿಕಾರದ ಅವಧಿಯಲ್ಲಿ ಸಾವಿರಕ್ಕೂ ಹೆಚ್ಚು ಸಂಖೆಯ ಸದಸ್ಯತ್ವವನ್ನು ಮಾಡಿಸುವ ಗುರಿ ಹೊಂದಿದ್ದೇನೆ ಎಂದು ಹೇಳಿದರು.

ನಂತರ ವೇದಿಕೆಯ ಮೇಲೆ ಆಸೀನರಾದ ರಾಜ್ಯ ಮಟ್ಟದ ಜಿಲ್ಲಾ ಮಟ್ಟದ ಹಾಗೂ ಸಂಸ್ಥೆಯ ಹಿರಿಯ ಕಿರಿಯ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವ ವೈಧ್ಯರನ್ನು ನೂತನ ರಾಜ್ಯಾಧ್ಯಕ್ಷರಾದ ಡಾ.ಬಸವರಾಜ ಎಂ.ಪಾಟೀಲರು ಸನ್ಮಾನಿಸಿ ನೆನಪಿನ ಕಾಣಿಕೆಯಾಗಿ ಪುಸ್ತವನ್ನು ನೀಡಿ ಗೌರವಿಸಲಾಯಿತು.

ನಂತರ ಡಾ. ಬಸವರಾಜ ಎಂ. ಪಾಟೀಲರಿಗೆ ನಿಕಟಪೂರ್ವ ಅಧ್ಯಕ್ಷರು ಮತ್ತು ಸರ್ವ ವೈಧ್ಯರು ಸೇರಿ ಸನ್ಮಾನಿಸಿ ಆರ್ ಎಸ್ ಎಸ್ ಡಿ ಐ ಸಂಸ್ಥೆಯ  ಲಾಂಚನವಿರುವಂಥ ಚಿನ್ನೆಯನ್ನು ನೀಡಿ ಸಂಸ್ಥೆಯ ಅಧಿಕಾರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಡಾ.ಬಿ.ಎಂ.ಪಾಟೀಲರ ಕುಟುಂಬದವರೂ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ವಿಘ್ನೇಶ್ವರ ದೇವರ ಪ್ರಾರ್ಥನೆಯನ್ನು ಕಾಲೇಜಿನ ವಿದ್ಯಾರ್ಥಿನಿ ಪ್ರಸ್ತುತ ಪಡಿಸಿದರು.

ನೂತನ ಅಧ್ಯಕ್ಷರಿಗೆ  ದಂಡಪ್ಪ ಬಿರಾದಾರ ಹಾಗೂ ಇನ್ನಿತರ ವೈಧ್ಯರು ಆತ್ಮೀಯರು ಸನ್ಮಾನಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಡಾ.ರಾಮಕೃಷ್ಣ ಎಂ.ಆರ್., ಡಾ. ಭಾಸ್ಕರ್ ಕೆ., ಡಾ. ಮಂಜುನಾಥ ಯು., ಡಾ. ಸಂಜೀವ ಚೆಟ್ಟಿ, ಡಾ. ಕೆ.ಎನ್. ಮನೋಹರ, ಡಾ. ಕಾರ್ತಿಕ್ ಮುನಿಚೂಡಪ್ಪ, ಡಾ. ನಿಜಗುಣ ಶಿವಯೋಗಪ್ಪ ಜವಳಿ, ಡಾ. ಮಹಾಲಿಂಗಪ್ಪ, ಹಿರಿಯ ಪತ್ರಕರ್ತರಾದ ಬಿ. ವೆಂಕಟಸಿಂಗ, ಒ.ಪಿ.ಡಿ. ಸಿಬ್ಬಂಧಿ, ಔಷಧ ವಿತರಣಾ ಸಿಬ್ಬಂಧಿ, ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಕಾಲೇಜಿನ ಸರ್ವ ಸಿಬ್ಬಂಧಿಗಳು ಉಪಸ್ಥಿತರಿದ್ದರು.

Comments

Popular posts from this blog