ಏ.28 ರಂದು ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನಾ ಜಾಥಾ- ಫಡ್ನೀಸ್. ಜಯ ಧ್ವಜ ನ್ಯೂಸ್, ರಾಯಚೂರು,ಏ.27- ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿಯಿಂದ ಏ.28 ರಂದು ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಸಂಚಾಲಕ ಡಾ.ಆನಂದತೀರ್ಥ ಫಡ್ನೀಸ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಸಂಜೆ 6ಕ್ಕೆ ನಗರದ ಶೆಟ್ಟಿಭಾವಿ ವೃತ್ತದಿಂದ ಸರಾಫ್ ಬಜಾರ್, ತೀನ್ ಕಂದೀಲ್, ಬಟ್ಟೆ ಬಜಾರ್, ಮಹಾವೀರ ವೃತ್ತದ ಮೂಲಕ ಚಂದ್ರಮೌಳೇಶ್ವರ ವೃತ್ತಕ್ಕೆ ಬಂದು ಸೇರಲಿದೆ ಎಂದರು. ಪ್ರತಿಭಟನಾ ಜಾಥಾದಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಸಂಖ್ಯೆಯ ಜನರು ಭಾಗವಹಿಸಲಿದ್ದು ಮಂತ್ರಾಲಯ ಶ್ರೀಗಳು ಸೇರಿದಂತೆ ಅನೇಕ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಶಿವಬಸಪ್ಪ ಮಾಲಿಪಾಟೀಲ್, ಅಶೋಕ್ ಪಾಟೀಲ್ ಅತ್ತನೂರು, ಶಂಶಾಲಪ್ಪ, ರವಿ ಕೃಷ್ಣಾ, ರಮೇಶ್, ಹನುಮೇಶ ಸರಾಫ್ ಇದ್ದರು.
Comments
Post a Comment