ಪಹಲ್ಗಾಮ್ ಉಗ್ರರ ದಾಳಿ‌ ಖಂಡಿಸಿ ಬೃಹತ್ ಪ್ರತಿಭಟನಾ ಜಾಥಾ:                                                     ಕಾಶ್ಮೀರ ಭಾರತದ ಮುಕುಟ- ಶ್ರೀಕಾಂತ್.                                                                                                 ಜಯಧ್ವಜ ನ್ಯೂಸ್ ರಾಯಚೂರು,ಏ.28-                  ಕಾಶ್ಮೀರ ಭಾರತದ ಮುಕುಟ ಅದನ್ನು ಪಾಕಿಸ್ಥಾನ ಪಡೆದುಕೊಳ್ಳುವುದು ಅಸಾಧ್ಯದ ಮಾತು ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಸಹ ಸಂಚಾಲಕ ಶ್ರೀಕಾಂತ್ ಹೇಳಿದರು.          ಅವರಿಂದು ನಗರದಲ್ಲಿ ಹಿಂದೂ ಹಿತರಕ್ಷಣಾ ಸಮಿತಿಯಿಂದ ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿ‌ ಖಂಡಿಸಿ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ಜಾಥಾ ಉದ್ದೇಶಿಸಿ ಮಾತನಾಡಿದರು. ಅಮಾಯಕ 26 ಭಾರತೀಯರನ್ನು ಕೊಲೆಗೈದ ಪಾಕಿಸ್ಥಾನದ ಉಗ್ರಗಾಮಿಗಳ ಕೃತ್ಯ ಅತ್ಯಂತ ಖಂಡನೀಯ ಮತ್ತು ಪೈಶಾಚಿಕವಾಗಿದ್ದು ಇದಕ್ಕೆ ತಕ್ಕ ಉತ್ತರ ನಮ್ಮ ಮೋದಿ‌ ಸರ್ಕಾರ ನೀಡಲಿದೆ ನಾವೆಲ್ಲರೂ ಭಾರತ ಸರ್ಕಾರದ ಬೆಂಬಲಕ್ಕೆ ನಿಲ್ಲೋಣವೆಂದರು. ಹಿಂದೂಗಳನ್ನೆ ಗುರಿಯಾಗಿಸಿಕೊಂಡು ಮಾಡಿದ ಭಯೋತ್ಪಾದನಾ ಕೃತ್ಯ ನಮಗೆಲ್ಲ ಪಾಠ ಕಲಿಸಿದೆ ನಾವೆಲ್ಲ ಒಂದಾಗಿ ಒಗ್ಗಟ್ಟು ಪ್ರದರ್ಶಿಸದಿದ್ದರೆ ನಮಗೆ ಉಳಿಗಾಲವಿಲ್ಲ ಧರ್ಮಾಧಾರಿತ ಭಯೋತ್ಪಾದನೆ ದೇಶಕ್ಕೆ ಮಾರಕವಾಗಿದೆ ಇದನ್ನು ಬೇರು ಸಹಿತ ಕಿತ್ತೊಗೆಯಬೇಕೆಂದ ಅವರು  ಪಾಕಿಸ್ಥಾನದ ಉಗ್ರರೊಂದಿಗೆ ಭಾರತದ ಅನ್ನು ನೀರು ಸೇವಿಸುವ ಕೆಲ ವಿಷ ಜಂತುಗಳು ಇದ್ದು ಅವುಗಳನ್ನು ಮೂಲೊತ್ಪಾಟನೆ ಮಾಡಬೇಕೆಂದರು.

ಭಾರತ ದೇಶದಲ್ಲಿರುವ ಪ್ರತಿಯೊಬ್ಬರು ದೇಶ ಪ್ರೇಮ ಬೆಳೆಸಿಕೊಳ್ಳಬೇಕೆಂದರು. ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ ಧರ್ಮಾಧಾರಿತ ಹತ್ಯಾಕಾಂಡ ಅತ್ಯಂತ ದುರದೃಷ್ಟಕರ ಸಂಗತಿ ನಾವೆಲ್ಲರೂ ಒಂದಾಗದಿದ್ದಾರೆ ನಮ್ಮನ್ನು ಒಡೆದು ಛಿದ್ರ ಛಿದ್ರ ಮಾಡುತ್ತಾರೆ    ಕಾಂಗ್ರೆಸ್ ಸರ್ಕಾರ ನಮ್ಮ ನಮ್ಮ ನಡುವೆ ಒಡೆದಾಳುವ ನೀತಿ ಅನುಸರಿಸುತ್ತಿದೆ ಎಂದ ಅವರು ನಾವೆಲ್ಲರು ನಮ್ಮ ನಗರದಲ್ಲಿ ಒಂದು ತಂಡ ಮಾಡಿ ದೇಶದ ಗಡಿ ಕಾಯುವ ಸೈನಿಕರಿಗೆ ರಕ್ತವನ್ನು ದಾನ ಮಾಡೋಣ ಅನಿವಾರ್ಯ ಸ್ಥಿತಿಯಲ್ಲಿ ಅವರಿಗೆ ರಕ್ತ ಬೇಕಿದ್ದ ಸಂದರ್ಭದಲ್ಲಿ ನಾವು ರಕ್ತವನ್ನು ಕಳಿಸಿಕೊಡೋಣವೆಂದರು. ನಾವೆಲ್ಲರೂ ಪ್ರಧಾನಿಗಳೊಂದಿಗೆ ಇದ್ದೇವೆಂಬ ಭಾವನೆ ವ್ಯಕ್ತಪಡಿಸೋಣ ಕೇಂದ್ರ ಸರ್ಕಾರದ ರಾಕ್ಷಣಾ  ನೀತಿಗಳನ್ನು ಬೆಂಬಲಿಸೋಣವೆಂದರು.

ಸಾನಿಧ್ಯ ವಹಿಸಿದ್ದ ಶ್ರೀ ಸೋಮವಾರ ಪೇಟೆ ಹಿರೇಮಠದ ಶ್ರೀ ಅಭಿನವ ರಾಚೋಟಿವೀರ ಶಿವಾಚಾರ್ಯ ಶ್ರೀಗಳು ಅನುಗ್ರಹ ಸಂದೇಶ ನೀಡಿ ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಭಾವನೆ ಪುಟಿದೇಳಬೇಕು ನಮಗೆ ದೇಹಾಭಿಮಾನಕ್ಕಿಂತ ದೇಶಾಭಿಮಾನ ಮುಖ್ಯವಾಗ ಬೇಕೆಂದ ಅವರು ಗುಡಿ ಕಾಯುವುದಕ್ಕಿಂತ ದೇಶದ ಗಡಿ ಕಾಯುವುದು ಶ್ರೇಷ್ಟ ಈ ದೇಹ ದೇಶ ಸೇವೆಗೆ ಅರ್ಪಿತವಾಗಬೇಕೆಂದರು. ಪ್ರತಿಭಟನಾ ಜಾಥಾದಲ್ಲಿ ಕಿಲ್ಲೆ ಬ್ರಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಶ್ರೀಗಳು, ಚೌಕಿ ಮಠ ಶ್ರೀಗಳು,ಮಂಗಳವಾರ ಪೇಟೆ ಮಠ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಿದ್ದರು.

ಹಿಂದೂ ಹಿತ ರಕ್ಷಣಾ ಸಮಿತಿ ಸಂಚಾಲಕ ಡಾ.ಆನಂದ ತೀರ್ಥ ಫಡ್ನಿಸ್ ವಂದಿಸಿದರು. ಜಾಥಾದಲ್ಲಿ ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ,  ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಸೇರಿದಂತೆ ಮಹಾನಗರ ಪಾಲಿಕೆ  ಬಿಜೆಪಿ ಸದಸ್ಯರು, ವಿವಿಧ ಸಮಾಜದ ಮುಖಂಡರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.   

               ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಶೆಟ್ಟಿ ಭಾವಿ ವೃತ್ತದಿಂದ ಪ್ರಾರಂಭವಾದ ಬೃಹತ್ ಪ್ರತಿಭಟನಾ ಜಾಥಾ ಚಂದ್ರಮೌಳೇಶ್ವರ ವೃತ್ತಕ್ಕೆ ತೆರಳಿ ಸಮಾರೋಪ ಗೊಂಡಿತು.

Comments

Popular posts from this blog