ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ - ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥರು
ಜಯ ಧ್ವಜ ನ್ಯೂಸ್ ರಾಯಚೂರು, ಏ.24- ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಕಣ್ವ ಮಠಾಧೀಶರಾದ ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥ ಶ್ರೀಪಾದಂಗಳವರು ತಿಳಿಸಿದ್ದಾರೆ.
ದೇಶದ ಏಕತೆ, ಸಾಮರಸ್ಯ, ಶಾಂತಿ – ಇವು ನಮ್ಮ ಸಂಸ್ಕೃತಿಯ ಮೂಲಸ್ತಂಭಗಳು. ಯಾವುದೇ ಉಗ್ರಕೃತ್ಯಗಳು ಈ ಅಖಂಡತೆಯ ಮೇಲೆ ಹೊಡೆತ ನೀಡದಂತೆ ನಾವು ಎಚ್ಚರಿಕೆಯಿಂದ ಇರಬೇಕಾಗಿದೆ. ಸಂವಿಧಾನದ ಮೌಲ್ಯಗಳನ್ನು ಕಾಪಾಡುವುದು, ಎಲ್ಲರಿಗೂ ಸಮಾನ ಹಕ್ಕುಗಳನ್ನು ಒದಗಿಸುವ ಭಾವನೆಗಳನ್ನು ಬೆಳೆಸುವುದು ನಿಜವಾದ ದೇಶಪ್ರೇಮವಾಗಿದೆ.
ಇಂತಹ ಘಟನೇಗಳು ದೇಶದ್ರೋಹಿಗಳ, ಸಂವಿಧಾನ ವಿರೋಧಿಗಳ ದುಷ್ಕೃತ್ಯಗಳಾಗಿವೆ. ಹಾಗೆಯೇ, ನಿನ್ನೆ ಅಮಾಯಕ ಪ್ರವಾಸಿಗಳನ್ನು ಹತ್ಯೆಗೈದ ಕಾಶ್ಮೀರ ದಾಳಿಯೂ ಅದೇ ಶ್ರೇಣಿಗೆ ಸೇರಿದೆ. ಇಂತಹ ಭಯೋತ್ಪಾದಕರಿಗೂ, ಅವರನ್ನು ಬೆಂಬಲಿಸುವ ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂಬುದು ಎಲ್ಲ ಭಾರತೀಯರ ಆಶಯವಾಗಿದೆ.
ಆ ನಿಟ್ಟಿನಲ್ಲಿ ನಾವೆಲ್ಲರೂ ಜಾತಿ ಭೇದ ಮರೆತು ಉಗ್ರವಾದದ ವಿರುದ್ಧ ಒಂದಾಗಬೇಕಿದೆ. ದೇಶದ ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಶಾಂತಿ, ಸಹಿಷ್ಣುತೆ ಮತ್ತು ಸಹಬಾಳ್ವೆ ಯನ್ನು ಮತ್ತೆ ಸ್ಥಾಪಿಸಬೇಕಿದೆ. ದೇಶದ ಏಕತೆಗಾಗಿ ಕೈಜೋಡಿಸೋಣವೆಂದು ಈ ಮೂಲಕ ಶ್ರೀ ಪಾದಂಗಳವರು ಕರೆ ನೀಡಿದ್ದಾರೆ.
Comments
Post a Comment