ಕಾಕರಗಲ್ ಟೋಲ್ ಧ್ವಂಸ ಶಾಸಕರ ಪುತ್ರನ ಪಾತ್ರವಿಲ್ಲ- ಎಂ.ವಿರುಪಾಕ್ಷಿ. ಜಯ ಧ್ವಜ ನ್ಯೂಸ್ ರಾಯಚೂರು ಏ.28- ದೇವದುರ್ಗ ತಾಲ್ಲೂಕಿನ ಕಾಕರಗಲ್ ಟೋಲ್ ಪ್ಲಾಜಾ ಧ್ವಂಸ ಪ್ರಕರಣದಲ್ಲಿ ಶಾಸಕಿ ಕರೆಮ್ಮ ನಾಯಕ ಪುತ್ರ ಸಂತೋಷ ನಾಯಕ ಪಾತ್ರವಿಲ್ಲ ವೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾಕರಗಲ್ ಬಳಿ ಟೋಲ್ ಧ್ವಂಸ ಪ್ರಕರಣದಲ್ಲಿ ಶಾಸಕಿ ಪುತ್ರನ ಪಾತ್ರವಿಲ್ಲದಿದ್ದರೂ ಅವರು ಹೆಸರು ಸೇರಿಸಲಾಗಿದೆ ಉದ್ಧೇಶ ಪೂರ್ವಕವಾಗಿ ಶಾಸಕರ ಹೆಸರಿಗೆ ಕಳಂಕ ತರಲು ಇದನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ದೂರಿದರು. ಟೋಲ್ ಪ್ಲಾಜಾ ನಿರ್ಮಾಣ ವಿರೋಧಿಸಿ ಸ್ಥಳೀಯ ರೈತರು, ಗ್ರಾಮಸ್ಥರು ಪ್ರತಿಭಟಿಸುವ ವೇಳೆ ಶಾಸಕರು ಅದೆ ಮಾರ್ಗದಲ್ಲಿ ತೆರಳುತ್ತಿರುವ ವೇಳೆ ಪ್ರತಿಭಟನೆಯ ಬಗ್ಗೆ ವಿಚಾರಿಸಿ ತೆರಳಿದ್ದಾರೆ ಅದನ್ನು ವಿರೋಧಿಗಳು ಶಾಸಕರ ಕುಮ್ಮಕ್ಕಿನ ಮೇಲೆ ಟೋಲ್ ಧ್ವಂಸ ವೆಂದು ಬಿಂಬಿಸಲು ಹೊರಟಿದ್ದಾರೆ ಸಂತೋಷ ನಾಯಕ ಯಾವುದೆ ದೌರ್ಜನ್ಯ ಮಾಡಿಲ್ಲ ಅವರನ್ನು ವಿನಾಕಾರಣ ಪೊಲೀಸರು ಪ್ರಕರಣದಲ್ಲಿ ಸಿಲುಕಿಸುವ ಯತ್ನ ಮಾಡುತ್ತಿದ್ದಾರೆ ಎಂದರು.
ಟೋಲ್ ಪ್ಲಾಜಾ ಟೆಂಡರ್ ಅವಧಿ ಮುಗಿದಿದೆ ಅಲ್ಲದೆ ಸ್ಥಳೀಯರ ಸಭೆ ಮಾಡದೆ ಅವರನ್ನು ವಿಶ್ವಾಸಕ್ಕೆ ಪಡೆಯದೆ ತರಾತುರಿಯಲ್ಲಿ ಟೋಲ್ ಗೇಟ್ ಏಕೆ ಸ್ಥಾಪಿಸಿದ್ದಾರೆ ನಿಯಮ ಗಾಳಿಗೆ ತೂರಿ ಟೋಲ್ ನಿರ್ಮಾಣ ಮಾಡಿರುವುದು ಏಕೆಂದು ಅರ್ಥವಾಗುತ್ತಿಲ್ಲವೆಂದ ಅವರು ದೇವದುರ್ಗದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಶಾಸಕರು ಅವಿರತ ಶ್ರಮ ಪಡುತ್ತಿದ್ದಾರೆ ಅದನ್ನು ಸಹಿಸದ ವ್ಯಕ್ತಿಗಳು ಇದನ್ನು ದೊಡ್ಡದಾಗಿ ಮಾಡುತ್ತಿದ್ದಾರೆ ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಎನ್.ಶಿವಶಂಕರ ವಕೀಲ್, ಬಿ.ತಿಮ್ಮಾರೆಡ್ಡಿ, ರಾಮಕೃಷ್ಣ, ಶರಣಗೌಡ, ನರಸಪ್ಪ ಇತರರು ಇದ್ದರು.
Comments
Post a Comment