ಪಹಲ್ಗಾಮ್ ಉಗ್ರರ ದಾಳಿ ಪ್ರಕರಣ: ಕೇಂದ್ರದ ಆಂತರಿಕ ಭದ್ರತಾ ವೈಫಲ್ಯ ಕಾರಣ- ಉಗ್ರಪ್ಪ. ಜಯ ಧ್ವಜ ನ್ಯೂಸ್ ರಾಯಚೂರು,ಏ.27- ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಸಂಭವಿಸಲು ಕೇಂದ್ರ ಸರ್ಕಾರದ ಆಂತರಿಕ ಭದ್ರತಾ ವೈಫಲ್ಯವೇ ಕಾರಣವೆಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು. ಅವರಿಂದು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಉಗ್ರರ ದಾಳಿಯಲ್ಲಿ ಅಮಾಯಕರು ಬಲಿಯಾಗಿದ್ದು ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. 2016ರಲ್ಲಿ ಊರಿ ಘಟನೆ, 2019ರಲ್ಲಿ ಬಾಲಕೋಟ್ ಘಟನೆ ಇದೀಗ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಯಲು ಕೇಂದ್ರ ಸರ್ಕಾರದ ನಿರ್ಲಕ್ಷವೇ ಕಾರಣವೆಂದು ಆರೋಪಿಸಿದರು. ಸಬ್ ಕಾ ಸಾಥ್ ವಿಕಾಸ್ ಎಂದು ಹೇಳುವ ಪ್ರಧಾನಿಗಳು ಸಾವಿರಾರು ಪ್ರವಾಸಿಗರು ಸೇರುವ ಪಹಲ್ಗಾಮ್ ನಲ್ಲಿ ಕನಿಷ್ಟ ಭದ್ರತೆಯೂ ವದಗಿಸಿಲ್ಲದಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು. ಮೋದಿ ಮತ್ತು ಅಮಿತ್ ಶಾ ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ ಅವರು ರಾಜಿನಾಮೆ ನೀಡಬೇಕೆಂದರು. ಕಾಂಗ್ರೆಸ್ ಉಗ್ರವಾದ ಸಹಿಸುವುದಿಲ್ಲ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಬಲಿದಾನ ವಾಗಿದೆ ಎಂದರು. 2014ರ ನಂತರ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದಿನ ನಿತ್ಯ ಬಳಕೆಯ ವಸ್ತುಗಳು, ತೈಲ, ಇಂಧನ ಬೆಲೆ ಗಗನಕ್ಕೇರಿದೆ ಬೆಳ್ಳಿ ಬಂಗಾರ ಬಡವರಿಗೆ ಕೈಗೆಟುಕದ ರೀತಿಯಲ್ಲಿ ಬೆಲೆ ಏರುಗತಿಯಲ್ಲಿದೆ ಎಂದರು. ಬಡವರು ಮದುವೆಗೆ ತಾಳಿ ಮಾಡಿಸಲು ಹೆಣಗಾಡುತ್ತಿದ್ದಾರೆ ಎಂದರು. ಕಬ್ಬಿಣ, ಸಿಮೆಂಟ್ ಬೆಲೆ ಹೆಚ್ಚಿದೆ ಬಡವರು ಸೂರು ಕಟ್ಟಿಕೊಳ್ಳಲು ಪರಿತಪಿಸುತ್ತಿದ್ದಾರೆ ಎಂದರು. ಬಿಜೆಪಿ ಯಾವ ಕಾರಣಕ್ಕೆ ಜನಾಕ್ರೋಶ ಯಾತ್ರೆ ಮಾಡುತ್ತಿದೆ ಜನರಿಗೆ ರಾಜ್ಯ ಸರ್ಕಾರದ ಬದಲಿಗೆ ಕೇಂದ್ರ ಸರ್ಕಾರದ ಮೇಲೆ ಆಕ್ರೋಶವಿದೆ ಎಂದರು. ರಾಮನ ಜಪ ಮಾಡುವ ಬಿಜೆಪಿಯವರು ರಾಮಾಯಣ , ಮಹಾಭಾರತ ಓದಲಿ ಎಂದ ಅವರು ಈ ಹಿಂದೆ ಲಾಲ್ ಬಹದ್ದೂರ್ ಶಾಸ್ತ್ರಿ ರೈಲು ದುರಂತವಾದಾಗ ಹೊಣೆಹೊತ್ತು ರಾಜೀನಾಮೆ ನೀಡಿದ್ದರು ನಮ್ಮ ರಾಜ್ಯದಲ್ಲಿ ಎಂ.ವಿ.ರಾಮರಾಯರು ರಾಜಿನಾಮೆ ನೀಡಿದ್ದರು ಈಗಿನ ಉಗ್ರ ದಾಳಿ ಹೊಣೆಹೊತ್ತು ಮೋದಿ ರಾಜೀನಾಮೆ ನೀಡಬೇಕೆಂದರು. ಮೋದಿ ಬದಲಾವಣೆಗೆ ನಾಗಪುರ ಆರೆಸ್ಸೆಸ್ ಕಛೇರಿಯಲ್ಲಿ ಸಭೆ ನಡೆದಿದೆ ಎನ್ನಲಾಗುತ್ತಿದೆ ಎಂಬ ಮಾಹಿತಿ ಇದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಉಗ್ರವಾದದ ವಿರುದ್ಧವಿದೆ ಯಾವ ಧರ್ಮದವರೂ ಸಹ ಕಾನೂನು ಮೀರಿದರೆ ಅವರಿಗೆ ಸೂಕ್ತ ಕ್ರಮವಾಗಿ ಬೇಕೆಂದ ಅವರು ಸಿದ್ದರಾಮಯ್ಯ ಯುದ್ಧ ಬೇಡವೆಂದು ಹೇಳಿದ್ದರ ಕುರಿತು ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲವೆಂದರು. ರಾಜ್ಯದಲ್ಲಿ ಜಾತಿ ಗಣತಿ ವರದಿ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಮಾಡಿ ಎಲ್ಲ ಜಾತಿಗಳಿಗೂ ನ್ಯಾಯದೊರಕಿಸಿಕೊಡುತ್ತದೆ ಎಂಬ ವಿಶ್ವಾಸವಿದೆ ಎಂದರು.
Comments
Post a Comment