ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನೂತನ ರಾಜ್ಯಾಧ್ಯಕ್ಷ ಎಸ್.ರಘುನಾಥ್ ರವರಿಗೆ ಸನ್ಮಾನ ಕಾರ್ಯಕ್ರಮ ಪೂರ್ವಭಾವಿ ಸಭೆ:            ನೂತನ ಜಿಲ್ಲಾ ಪ್ರತಿನಿಧಿಗಳಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ವಿಪ್ರ ಶ್ರೀ ಪ್ರಶಸ್ತಿ ಪ್ರದಾನ  ಸರ್ವಾನುಮತದ ನಿರ್ಣಯ- ಜಗನ್ನಾಥ  ಕುಲಕರ್ಣಿ.                        ಜಯ ಧ್ವಜ ನ್ಯೂಸ್ ರಾಯಚೂರು,ಏ.30- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಕಲ್ಯಾಣ  ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಯಚೂರು(ರಿ) (ಕೆಕೆ ಬಿಎಂಎಸ್ ಈಗ ಅಧಿಕೃತವಾಗಿ ಎಕೆಬಿಎಂಎಸ್ ಗೆ ಸಂಯೋಜಿತವಾಗಿದೆ.)    ಏ. 29 ಸಂಜೆ 5-30 ಕ್ಕೆ ನಗರದ ಗಾಜಗಾರ ಪೇಟೆ ಶಂಕರ ಮಠ ಕಲ್ಯಾಣ ಮಂಟಪದಲ್ಲಿ ರಾಜ್ಯ ಅಧ್ಯಕ್ಷರು ಆದ ಸನ್ಮಾನ್ಯ ಶ್ರೀ ಎಸ್ ರಘುನಾಥ ರವರ ಸನ್ಮಾನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು .               ರಾಜ್ಯ ನೂತನ ಅಧ್ಯಕ್ಷರಿಗೆ ಮತ್ತು ಹಿರಿಯ ಉಪಾಧ್ಯಕ್ಷರಿಗೆ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ನೂತನವಾಗಿ ಚುನಾಯಿತರಾದ ಜಿಲ್ಲಾ ಪ್ರತಿನಿಧಿಗಳಿಗೆ ಸನ್ಮಾನ ಮಾಡಲು ನಿರ್ಧರ, ವಿಪ್ರ ಸಾಧಕ ಐವರಿಗೆ ವಿಪ್ರಶ್ರೀ ಪ್ರಶಸ್ತಿ ಕೊಡಲು ಸಹ ತೀರ್ಮಾನಿಸಲಾಯಿತು.  ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 80% ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಮತ್ತು ದ್ವಿತಿಯ ಪಿಯುಸಿ ಯಲ್ಲಿ ಶೇಕಡಾ 70% ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ  ಮಾಡಲು ನಿರ್ಧರ ಹಾಗೂ ಈ ವಿಶೇಷ ಸನ್ಮಾನ ಹಾಗೂ ವಿಪ್ರಶ್ರೀ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಶಾಸಕರುಗಳು,ವಿಧಾನ ಪರಿಷತ್ ಸದಸ್ಯರು ಮತ್ತು ಮಂತ್ರಿಗಳನ್ನು ಆಹ್ವಾನಿಸಲು ನಿರ್ಧರಿಸಲಾಯಿತು ಹಾಗು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಾಗೂ ಪಿಹೆಚ್ ಡಿ ಪಡೆದವರಿಗೆ ಸನ್ಮಾನಿಸಲು ನಿರ್ಧರಿಸಲಾಯಿತು.

   ಸದರಿ ಕಾರ್ಯಕ್ರಮವನ್ನು ಜೂನ್ 08 ಅಥವಾ 15, 2025 ಮಾಡಲು ಈ ಸಭೆಯಲ್ಲಿ ಈ ಮೇಲಿನ ಎಲ್ಲಾ ಕಾರ್ಯಕ್ರಮಗಳನ್ನು ಮಾಡಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.ಈ ಸಭೆಯ ಅಧ್ಯಕ್ಷತೆಯನ್ನು ಶ್ರೀ ಜಗನ್ನಾಥ ಕುಲಕರ್ಣಿ ನಿಕಟಪೂರ್ವ ರಾಜ್ಯ ಉಪಾಧ್ಯಕ್ಷರು ಎಕೆಬಿಎಂಎಸ್ ರವರು ವಹಿಸಿದ್ದರು.  ಸಭೆಯ ಮೊದಲಿಗೆ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದ ಕೃತ್ಯದಲ್ಲಿ ಹತರಾದ ನಾಗರಿಕರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆಯನ್ನು ಮಾಡಲಾಯಿತು.   ಈ ಸಭೆಯಲ್ಲಿ  ಗುರುರಾಜ ಚಾರ್ ಜೋಶಿ ತಾಳಿಕೋಟಿ,ಜಿ.ಬಿ. ಕುಲಕರ್ಣಿ, ಹನುಮಂತ ರಾವ್ ಕಲ್ಲೂರಕರ್,  ಹರೀಶ್ ಕೊಪ್ಪರ್, , ಶ್ರೀಪಾದ್, ವಿಜಯ ರಾವ್ ಗುಂಜಳ್ಳಿ, ಎಚ್‌.ಡಿ. ಕುಲಕರ್ಣಿ, ನರಸಿಂಹ ಮೂರ್ತಿ ಕುಲಕರ್ಣಿ,ಸಿ .ವಿ .ವಸಂತ್ ರಾವ್, ಗುರುರಾಜ್ ಕುಲಕರ್ಣಿ, ಗೋಪಾಲಕೃಷ್ಣ ತಟ್ಟಿ, ರಾಘವೇಂದ್ರ ಯೆರಗೋಳ, ಮಧು, ವೈ.ಚಂದ್ರಕಾಂತ್, ರಾಮಚಂದ್ರ ಜೋಶಿ, ಸುಧೀಂದ್ರ, ಜಯ ಕುಮಾರ್ ದೇಸಾಯಿ , ಟಿ ಶ್ರೀನಿವಾಸ್, ರವೀಂದ್ರ ಕುಲಕರ್ಣಿ,   ರಾಘವೇಂದ್ರ, ಕೃಷ್ಣ, ಮೋಹನ್,  ಮುಂತಾದವರು ಉಪಸ್ಥಿತರಿದ್ದರು.

  ಸ್ವಾಗತವನ್ನು ಮುರಳಿಧರ ಕುಲಕರ್ಣಿ ಅವರು ಮಾಡಿದರು, ವಂದನಾರ್ಪಣೆಯನ್ನು  ಗೋಪಾಲಕೃಷ್ಣ ತಟ್ಟಿ ನಿರ್ವಹಿಸಿದರು.

Comments

Popular posts from this blog