ಪಹಲ್ಗಾಮ್ ನಲ್ಲಿ ಉಗ್ರರ ಕೃತ್ಯ ಖಂಡಿಸಿ ಸಿಪಿಐಎಂ ಪ್ರತಿಭಟನೆ.                                                            ಜಯ ಧ್ವಜ ನ್ಯೂಸ್ ರಾಯಚೂರು, ಏ.29- ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ  ಭಯೋತ್ಪಾದನೆ ಕೃತ್ಯ ಖಂಡಿಸಿ    ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ಇಂದು ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯನ್ನು ಉದ್ಧೇಶಿಸಿ  ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ ಜಿ ವಿರೇಶ ಅವರು ಮಾತನಾಡಿ ‘ಕಾಶ್ಮೀರದಲ್ಲಿ ಉಗ್ರವಾದಿಗಳು ನಡೆಸಿದ ಹತ್ಯೆಯನ್ನುತೀವ್ರವಾಗಿ ಖಂಡಿಸುತ್ತೇವೆ. ೨೮ ಜನ ದಾಳಿಯಲ್ಲಿ ಅಸು ನೀಗಿದ್ದಾರೆ. ಅವರ ದುಃಖದಲ್ಲಿ ನಾವಿದ್ದೇವೆ. ಅವರಿಗೆ ಮನದಾಳ ಸಾಂತ್ವನ. ಹತ್ಯೆಯಲ್ಲಿ ಮಡಿದವರು ಇತರೆ ಜಾತಿ ಧರ್ಮದ ಜನರೂ ಇರುವರು. ಕೇಂದ್ರ ಸರ್ಕಾರ  ತನ್ನ ಭದ್ರತಾ ಲೋಪವನ್ನು ಮುಚ್ಚಿಕೊಳ್ಳಲು  ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು ಇದು ತೀವ್ರ ಖಂಡನಾರ್ಹವಾಗಿದೆ ಎಂದರು. ಕಾಶ್ಮೀರದ ಜನತೆಯು ಪ್ರವಾಸಿಗರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕಾಶ್ಮೀರದಲ್ಲಿ ಸಿಪಿಐಎಂ ಪಕ್ಷದ ಶಾಸಕರಾಗಿರುವ ಕಾ.ಯೂಸೂಫ್‌ತಾರಿಗಾಮಿ ಅವರು ನೊಂದವರನ್ನು ಸಂತೈಸುವಲ್ಲಿ, ಶಾಂತಿ ಸೌಹಾರ್ದತೆ ಕಾಪಾಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಅವರಕುಟುಂಬದಲ್ಲಿ ಮೂರು ಜನರು ಉಗ್ರಗಾಮಿಗಳಿಗೆ ಬಲಿಯಾದ ಹಿನ್ನೆಲೆ ಅವರು ನೋವು ಹೊಂದಿದ್ದಾರೆ. ಉಗ್ರವಾದ ಭಯೋತ್ಪಾದನೆಯ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದೆ ಸಿಪಿಐಎಂ ಪಕ್ಷ’ ಎಂದು ಹೇಳಿದರು.

‘ಸಿಪಿಐಎಂ ಪಕ್ಷವು ದೇಶದ ಐಕ್ಯತೆಗಾಗಿ ಶ್ರಮಿಸುತ್ತಿದೆ.   ಸೌರ್ಹದತೆಯನ್ನು ಭಂಗ ತರುವ ನಿಟ್ಟಿನಲ್ಲಿ ನಡೆದುಕೊಂಡಿರುವ ಯಾರೇ ನಡೆದುಕೊಂಡರು ಅದು ತೀವ್ರ ಖಂಡನೀಯವಾಗಿದೆ ಎಂದರು. ಪ್ರತಿಭಟನೆ ನಂತರ ಒಂದು ನಿಮಿಷ ಮೌನಚರಣೆ ಮಾಡಲಾಯಿತು 

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವಿರೇಶ.ಹೆಚ್.ಪದ್ಮಾ, ಡಿ.ಎಸ್.ಶರಣಬಸವ, ವರಲಕ್ಷ್ಮೀ, ಶ್ರೀಧರ, ಹನುಮಂತ, ಚಂದ್ರಪ್ಪ, ಗೋಕಾರಮ್ಮ, ಇಂದಿರಾ,ಮಮತಾ, ಸರೋಜಮ್ಮ,ನರಸಮ್ಮ.ಶರಣಮ್ಮ,ಆಸ್ಮಾಬೇಗಂ,ಮಹಾದೇವಿ, ಶಾಂತಕುಮಾರಿ, ಸಾಗರಾಜ, ರವಿ ಇನ್ನಿತರರು ಇದ್ದರು.

Comments

Popular posts from this blog