ದಾಸ ಸಾಹಿತ್ಯ ಮಾನವೀಯ ಮೌಲ್ಯಗಳ ತುಂಬು ಹೊಳೆ-
ಮುರಳಿಧರ ಕುಲಕರ್ಣಿ
ಜಯ ಧ್ವಜ ನ್ಯೂಸ್ ರಾಯಚೂರು, ಏ.29- ದಾಸ ಸಾಹಿತ್ಯವು ಕರ್ನಾಟಕದ ಸಾಹಿತ್ಯ, ಸಂಗೀತ, ಸಂಸ್ಕೃತಿಯ, ಮಾನವೀಯ ಮೌಲ್ಯಗಳ, ಸಾಮಾಜಿಕ ಪ್ರಜ್ಞೆಯ ತುಂಬು ಹೊಳೆಯಾಗಿದೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ರವರು ಹೇಳಿದರು.
ಅವರು ಇಂದು ಬೆಳಗ್ಗೆ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ರಾಯಚೂರು, ನಂದಿನಿ ಶಿಕ್ಷಣ ಮಹಾವಿದ್ಯಾಲಯ ರಾಯಚೂರು ಇವರುಗಳ ಸಹಯೋಗದಲ್ಲಿ ನಂದಿನಿ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ದಾಸ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಎಂಬ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.
16ನೇ ಶತಮಾನದಲ್ಲಿಯೇ ಸಾಮಾಜಿಕ ಅಂಕುಡೊಂಕುಗಳನ್ನು, ಮೂಡನಂಬಿಕೆಗಳನ್ನು, ಜಾತಿ ಪದ್ಧತಿಗಳನ್ನು ಎದೆಗಾರಿಕೆಯಿಂದ ಖಂಡಿಸಿ ಕೈಯಲ್ಲಿ ತಾಳ, ತಂಬೂರಿ ಹಿಡಿದು, ಕಾಲಲ್ಲಿ ಗೆಜ್ಜೆ ಕಟ್ಟಿ, ಹೆಗಲಲ್ಲಿ ಜೋಳಿಗೆಯನ್ನು ಹಾಕಿಕೊಂಡು ಮನೆ ಮನೆಗೆ ತೆರಳಿ ಮಾನವೀಯ ಮೌಲ್ಯವನ್ನು, ಭಕ್ತಿಯನ್ನು, ಪ್ರೀತಿ ವಿಶ್ವಾಸ, ಆತ್ಮಸ್ಥೈರ್ಯ, ಭರವಸೆಗಳನ್ನು ಬಿತ್ತಿದ ಮಹಾನುಭಾವರು. ಇಂತಹ ದಾಸ ಸಾಹಿತ್ಯ ದಲ್ಲಿರುವ ಪ್ರತಿಯೊಂದು ವಿಷಯಗಳು ಪ್ರಸ್ತುತ ಸಮಾಜಕ್ಕೆ ದಾರಿ ದೀಪವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಾಸೋತ್ಸವ ಸಮಿತಿಯ ಅಧ್ಯಕ್ಷರಾದ ವೆಂಕಟರಾವ ಕುಲಕರ್ಣಿ ಅವರು ಮಾತನಾಡಿ ಸಾವಿರಾರು ಸಂಕೀರ್ತನೆಗಳನ್ನು ರಚಿಸಿ ಸಮಾಜದಲ್ಲಿ ಆದರ್ಶ, ತತ್ವ, ಸಂಸ್ಕಾರ, ಭಕ್ತಿ ಮುಂತಾದವುಗಳಿಗೆ ಒತ್ತು ನೀಡಿ ಸಮೃದ್ಧ ಸಮಾಜವಾಗಬೇಕೆಂದು ಇಡೀ ಜೀವನವನ್ನೇ ದಾಸರುಗಳು ಇದಕ್ಕಾಗಿ ಮುಡುಪಿಟ್ಟರು ಎಂದು ಹೇಳಿದರು.
ಕಾರ್ಯಕ್ರಮವನ್ನು ನಂದಿನಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಅಲಿಸಾ ಜೋಸೆಫ್ ಉದ್ಘಾಟಿಸಿ ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೆಂಕಟೇಶ್ ಬೇವಿನಬೆಂಚಿ ಯವರು ಮಾತನಾಡಿ
ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಕನ್ನಡ ಸಾಹಿತ್ಯದ ಎರಡು ಕಣ್ಣುಗಳು ವಚನಕಾರು ದಾಸರು ಕಾಯಕವನ್ನು ಭಕ್ತಿಯೊಳಗೆ ತಂದಿಟ್ಟು ಮಾನವೀಯ ಮೌಲ್ಯಗಳ ಬಗ್ಗೆ ಹೇಳಿದರು.
ಕಾರ್ಯಕ್ರಮದಲ್ಲಿ ನಂದಿನಿ ಶಿಕ್ಷಣ ಮಹಾವಿದ್ಯಾಲಯದ ಉಪ ಪ್ರಾಚಾರ್ಯರಾದ ಡಾ. ಬಿ. ವಿಜಯರಾಜೇಂದ್ರ, ಗೌರವ ಕಾರ್ಯದರ್ಶಿಗಳ ರಾವುತರಾವು ಬರೋರ್ ಸಾಹಿತಿಗಳಾದ ವಸುದೇಂದ್ರ ಸಿರಿವಾರ, ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ದತ್ತಿ ಉಪನ್ಯಾಸವು ದಿ. ಜಯಾಚಾರ್ ಕೊಪ್ಪರ್, ದಿ.ಶ್ರೀ ಪ್ರಹ್ಲಾದ ಆಚಾರ್ಯ ಜೋಶಿ,ದಿ.ಡಾ. ಮಂದಾಕಿನಿ ಬಾಯಿ,ದಿ.ನರಸಿಂಹ ಪ್ರಭು ಇವರ ಸ್ಮರಣಾರ್ಥ ದತ್ತಿ ಕಾರ್ಯಕ್ರಮವನ್ನು ಆಯೋ
ಜಿಸಲಾಗಿತ್ತು.
Comments
Post a Comment