ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳಿಂದ ಅಧಿಕ ಡೊನೇಷನ್ ಪಡೆದರೆ ನಿರ್ದಾಕ್ಷಿಣ್ಯ ಕ್ರಮ:
ದ್ವಿತೀಯ ಪಿಯು 3ನೇ ಪರೀಕ್ಷೆಗೆ ನೋಂದಾಯಿಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗಿ- ಕೊಟ್ರಬಸಪ್ಪ
ಜಯ ಧ್ವಜ ನ್ಯೂಸ್ ,ರಾಯಚೂರು, ಮೇ.22- ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆ-3 ಕ್ಕೆ ನೋಂದಾಯಿಸಿಕೊಂಡು ಪರೀಕ್ಷೆಗೆ ಹಾಜರಾಗಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೊಟ್ರಬಸಪ್ಪ.ಕೆ ಅವರು ಹೇಳಿದರು.
ಅವರಿಂದು ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
2025 ದ್ವಿತೀಯ ಪಿಯುಸಿ ಪರೀಕ್ಷಾ-2ಕ್ಕೆ ಅವಕಾಶ ಕಲ್ಪಿಸಿದ್ದರಿಂದ ರಾಜ್ಯದಲ್ಲಿ 60,692 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಂತೆ ರಾಯಚೂರು ಜಿಲ್ಲೆಯಲ್ಲಿ 6,788 ವಿದ್ಯಾರ್ಥಿಗಳ ಪೈಕಿ 1625 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಪ್ರತಿಶತ 23.09 ಫಲಿತಾಂಶ ಬಂದಿದೆ.
ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮೂರನೇ ಪರೀಕ್ಷೆ-3ಯನ್ನು ಜೂನ್ 09 ರಿಂದ ಜೂನ್ 20ರವರೆಗೆ ನಡೆಸಲು ದಿನಾಂಕ ನಿಗದಿಪಡಿಸಿದೆ. ಆದ್ದರಿಂದ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಮೇ 28 ಅಂತಿಮ ದಿನಾಂಕವಾಗಿದ್ದು, ಅನುತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳು ತಮ್ಮ ಮುಂದಿನ ಉತ್ತಮ ಭವಿಷ್ಯಕ್ಕಾಗಿ ವಿದ್ಯಭ್ಯಾಸ ಮುಂದುವರಿಸಬೇಕು ಎಂಬುದು ಘನ ರಾಜ್ಯ ಸರ್ಕಾರದ ಆಶಯವಾಗಿರುತ್ತದೆ.
ಪಾಲಕರಲ್ಲಿ ಮನವಿ ಮಾಡಿದೆ ಅವರು ವಿದ್ಯಾರ್ಥಿಗಳು ಓದಿನಲ್ಲಿ ಹಿಂದುಳಿಯುವುದು ಕೆಲವೊಮ್ಮೆ ಸಹಜ ಕಡಿಮೆ ಅಂಕಗಳು ಬಂದಾಗ ಮತ್ತು ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ಯಾವುದೇ ಕಾರಣಕ್ಕೂ ಕುಗ್ಗಬಾರದು ಎಂದರು. ಈ ಬಗ್ಗೆ ಪಾಲಕರು ಮಕ್ಕಳಗೆ ತಿಳಿ ಹೇಳಿ ಪರೀಕ್ಷೆ-3ಗೆ ರಾಯಚೂರು ಜಿಲ್ಲೆ ಎಲ್ಲಾ ವಿದ್ಯಾರ್ಥಿಗಳು ನೋಂದಾಯಿಸಿಕೊಂಡು ಪರೀಕ್ಷೆಗೆ ಹಾಜರಾಗುವಂತೆ ಆಯಾ ವಿದ್ಯಾರ್ಥಿಗಳ ಪೋಷಕರು ಮಕ್ಕಳಿಗೆ ಪೇರೇಪಿಸಬೇಕು ಎಂದ ಅವರು ವಿದ್ಯಾರ್ಥಿಗಳು ಪಾಲಕರ ಮಾತು ಕೇಳಬೇಕು ತಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಪ್ರಾಂಶುಪಾಲರಲ್ಲಿ ಮನವಿ ಮಾಡಿದ ಅವರು ವಿದ್ಯಾರ್ಥಿಗಳು ಓದಿನಲ್ಲಿ ಹಿಂದೆ ಬೀಳಲು ಕಾರಣ ಏನು ಫಲಿತಾಂಶ ಕುಸಿಯಲು ವಾಸ್ತವವಾಗಿ ಗಂಭೀರ ಕಾರಣಗಳೇನು ಎಂಬುದು ಎಲ್ಲ ಪ್ರಾಂಶುಪಾಲರಿಗೆ ತಿಳಿದ ವಿಷಯವಾಗಿರುತ್ತದೆ. ಆದ್ದರಿಂದ ಎಲ್ಲ ಪ್ರಾಂಶುಪಾಲರು ಜಾಗೃತರಾಗಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ ಆಲೋಚಿಸಿ ಕಾರ್ಯತತ್ಪರರಾಗಬೇಕು ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು 3ನೇ ಪರೀಕ್ಷೆಗೆ ನೋಂದಾಯಿಸಿ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗುವಂತೆ ಕ್ರಮವಹಿಸಬೇಕೆಂದು ಎಲ್ಲ ಪ್ರಾಂಶುಪಾಲರುಗಳಲ್ಲಿ ಮನವಿ ಮಾಡಿದರು.
2025ರ ಮಾರ್ಚನಲ್ಲಿ ಪರೀಕ್ಷೆ-1ಗೆ ಒಟ್ಟು 18,414 ವಿದ್ಯಾರ್ಥಿಗಳು ನೋಂದಾಯಿಸಿದ್ದು, ಈ ಪೈಕಿ 10,818 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯ ಪ್ರತಿಶತ ಫಲಿತಾಂಶವು ಶೇ.58.75 ಆಗಿದೆ. ಅಲ್ಲದೆ ಏಪ್ರಿಲ್ ಮೇ ತಿಂಗಳಿನಲ್ಲಿ ಪರೀಕ್ಷೆ-2 ನಡೆಸಲಾಗಿದ್ದು, 6,788 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಈ ಪೈಕಿ 1,625 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.23.09 ಫಲಿತಾಂಶವನ್ನು ಪಡೆಯಲಾಯಿತು ಎಂದು ಇದೆ ವೇಳೆ ಅವರು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಪದವಿ ಪೂರ್ವ ಕಾಲೇಜುಗಳಲ್ಲಿರುವ ಖಾಲಿ ಹುದ್ದೆ ಬಗ್ಗೆ ಮಾಹಿತಿ ನೀಡಿದ ಅವರು ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ, ಶಿಥಿಲ ಕೊಠಡಿಗಳ ರಿಪೇರಿ ಮತ್ತು ನೂತನ ಕಟ್ಟಡಗಳ ನಿರ್ಮಾಣಕ್ಕೆ ಕೆಕೆಆರ್ ಡಿಬಿಗೆ ಮನವಿ ಮಾಡಲಾಗಿದೆ ಎಂದರು. ಖಾಸಗಿ ಕಾಲೇಜುಗಳು ಸರ್ಕಾರದ ನಿಯಮಗಳನ್ನು ಪಾಲಿಸಬೇಕೆಂದ ಅವರು ಅಧಿಕ ಡೊನೆಷನ್ ಪಡೆಯುವ ಶಿಕ್ಷಣ ಸಂಸ್ಥೆಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಸೋಮಶೇಖರಪ್ಪ ಹೊಕ್ರಾಣಿ, ಮಾನ್ವಿ ಸರ್ಕಾರಿ ಬಾಲಕರ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ.ಕುಂಟಪ್ಪ ಗೌರಿಪುರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಸುಧಾ ಸೇರಿದಂತೆ ಸಿಬ್ಬಂದಿಗಳು ಇದ್ದರು.
Comments
Post a Comment