ನಗರಕ್ಕೆ 40 ಕೋಟಿ. ರೂ ವೆಚ್ಚದ ಸಭಾಂಗಣ ಮಂಜೂರು: ಡಾ.ರಝಾಕ್ ಉಸ್ತಾದ್ ಸ್ವಾಗತ                                 ಜಯ ಧ್ವಜ ನ್ಯೂಸ್ ರಾಯಚೂರು,ಮೇ.24-                   ನಗರದಲ್ಲಿ ಸಭಾಭವನ‌ ನಿರ್ಮಾಣಕ್ಕೆ ಕೆಕೆಆರ್.ಡಿ.ಬಿ ಮ್ಯಾಕ್ರೋ ಅನುದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಇವರ ಶಿಫಾರಸ್ಸಿನಂತೆ ಸರಕಾರ ಆಡಳಿತಾತ್ಮಕ ಅನುಮೋದನೆ‌ ನೀಡಿರುವದನ್ನು  ಕೆಪಿಸಿಸಿ ಮಾಧ್ಯಮ ವಿಭಾಗದ ರಾಜ್ಯ ವಕ್ತಾರ ಡಾ.ರಝಾಕ್ ಉಸ್ತಾದ್ ಸ್ವಾಗತಿಸಿದ್ದಾರೆ.

ರಾಯಚೂರು ನಗರವು ಜಿಲ್ಲಾ ಕೇಂದ್ರವಾಗಿದ್ದು ಸಾಂಸ್ಕೃತಿಕ ಸಮಾರಂಭಗಳನ್ನು ನಡೆಸಲು ಎಲ್ಲರೂ‌ ರಂಗಮಂದಿರದ‌ ಮೇಲೆ ಅವಲಂಬಿತರಾಗಿದ್ದು, ಇದರಿಂದ‌ ಕಾರ್ಯಕ್ರಮಗಳನ್ನು ನಡೆಸಲು‌ ಅನಾನುಕೂಲತೆ ಉಂಟಾಗುತ್ತಿರುವದನ್ನು‌ ವಿಧಾನ‌ ಪರಿಷತ್  ಸದಸ್ಯರಾದ ಎ.ವಸಂತಕುಮಾರ, ಶಾಸಕರಾದ ಹಂಪನಗೌಡ ಬಾದರ್ಲಿ ಹಾಗೂ ಬಸನಗೌಡ ದದ್ದಲ್ ಇವರು ಸಲ್ಲಿಸಿದ ಪ್ರಸ್ತಾವನೆಯನ್ನು ಮನಗೊಂಡು ಡಾ.ಶರಣ ಪ್ರಕಾಶ ಪಾಟೀಲ್‌ ಅವರು 2024-25ನೇ ಸಾಲಿನ‌ ಕೆಕೆಆರ್.ಡಿಬಿ ಯ ಮ್ಯಾಕ್ರೋ ಅನುದಾನದಲ್ಲಿ ಸುಮಾರು 5000 ಜನ‌ ಕೂಡುವ ಆಸನ ಉಳ್ಳ ಬೃಹತ ಸಭಾ ಭವನ‌ ನಿರ್ಮಾಣಕ್ಕೆ 40 ಕೋ.ರೂ‌ ಅನುದಾನ‌ ಒದಗಿಸಿ ಮಂಜೂರಾತಿ ನೀಡಿದ್ದು, ಈಗ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿರುವದು ಜಿಲ್ಲೆಯ ಜನತೆಗೆ ಸಂತೋಷದ ವಿಷಯ ಅದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ‌ ಪಾಟೀಲ್ ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Comments

Popular posts from this blog