ಮೇ.25 ರಂದು ರವಿವಾರ ಶ್ರೀ ಮಹಾರಾಣ ಪ್ರತಾಪ ಸಿಂಹ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ
ಜಯ ಧ್ವಜ ನ್ಯೂಸ್ ರಾಯಚೂರು, ಮೇ.22-
ರಾಯಚೂರು ಜಿಲ್ಲಾ ರಾಜಪೂತ ಸಮಾಜದ ವತಿಯಿಂದ ಮೇ 25 ರಂದು ರವಿವಾರ ಶ್ರೀ ಮಾಹಾರಾಣ ಪ್ರತಾಪ ಸಿಂಹ ರವರ 485ನೇ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿದೆ ಎಂದು ರಾಜಪೂತ ಸಮಾಜದ ಜಿಲ್ಲಾ ಅಧ್ಯಕ್ಷ ಮನೋಹರಸಿಂಗ್ ತಿಳಿಸಿದ್ದಾರೆ.
ಪ್ರತಿ ವರ್ಷದಂದತೆ ಈ ವರ್ಷವೂ ನಡೆಯುವ ಈ ಜಯಂತಿ ಕಾರ್ಯಕ್ರಮವನ್ನು ಸಂಜೆ 7 ಗಂಟೆಗೆ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಉದ್ಘಾಟನೆ ಮಾಡಲಿದ್ದಾರೆ.
ಮುಖ್ಯತಿಥಿಗಳಾಗಿ ಲೋಕಸಭಾ ಸದಸ್ಯರಾದ ಜಿ.ಕುಮಾರನಾಯಕ, ಶಾಸಕ ಡಾ.ಶಿವರಾಜ ಪಾಟೀಲ ವಿಧಾನ ಪರಿಷತ್ ಸದಸ್ಯ ಎ.ವಸಂತ್ ಕುಮಾರ್, ಮಹಾನಗರಪಾಲಿಕೆ ಮೇಯರ ನರಸಮ್ಮ ಮಾಡಿಗಿರಿ, ಪಾಲಿಕೆ ಸದಸ್ಯ ಎನ್.ಶ್ರೀನಿವಾಸ್ ರೆಡ್ಡಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನಾಾ ನಗರದ ಮಾವಿನಕೆರೆ ಬಳಿ ಇರುವ ಶ್ರೀೆ ಮಾಹಾರಾಣಾ ಪ್ರತಾಪ ಸಿಂಹಾಜೀಯರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಸಂಜೆ 4ಗಂಟೆಗೆ ಶೋಭಾ ಯಾತ್ರೆೆ ಆರಂಭವಾಗಿ ನಗರದ ತೀನ್ ಕಂದೀಲ್ ಮೂಲಕ ಸಮಾರಂಭ ನಡೆಯುವನ ಸ್ಥಳ ಗದ್ವಾಲ್ ರಸ್ತೆೆಯಲ್ಲಿರುವ ರಾಜಪೂತ ಸಮಾಜದ ಆವರಣ ಉದಾಸಿ ಮಠಕ್ಕೆೆಬಂದು ತಲುಪಲಿದೆ ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮದ ಅಧ್ಯೆೆಕ್ಷತೆಯನ್ನು ಜಿಲ್ಲಾ ಅಧ್ಯಕ್ಷ ಮನೋಹರ ಸಿಂಹ ವಹಿಸಲಿದ್ದು ಸಮಾಜದ ಭಾಂದವರು ಭಾಗವಹಿಸಿ ಯಶಸ್ವಿಿಗೋಳಿಸಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಗೌತಮ ಶುಕ್ಲಾ ಮನವಿ ಮಾಡಿದ್ದಾರೆ.
Comments
Post a Comment