ಸಚಿವ ಪ್ರಿಯಾಂಕ್ ಖರ್ಗೆ ವಿರುಧ್ದ ಚಲುವಾದಿ ನಾರಾಯಣ ಸ್ವಾಮಿ ಅಸಭ್ಯ ಟೀಕೆಗೆ ವಸಂತಕುಮಾರ್ ಖಂಡನೆ ಜಯ ಧ್ವಜ ನ್ಯೂಸ್ ರಾಯಚೂರು,ಮೇ.23- ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಚಲುವಾದಿ ನಾರಾಯಣ ಸ್ವಾಮಿಯವರು ಇತ್ತೀಚಿಗೆ ಗುಲ್ಬರ್ಗಾ ನಗರಕ್ಕೆ ಭೇಟಿ ನೀಡಿದ ವೇಳೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆಯವರ ಬಗ್ಗೆ ಅಸಭ್ಯ ಟಿಪ್ಪಣಿ ಮಾಡಿ ಟೀಕಿಸಿದ್ದನ್ನು ವಿಧಾನ ಪರಿಷತ್ ಸದಸ್ಯ ಎ.ವಸಂತ್ ಕುಮಾರ್ ಖಂಡಿಸಿದ್ದಾರೆ . ಚಲುವಾದಿ ನಾರಾಯಣಸ್ವಾಮಿಯವರು ಕಳೆದ ಮೂವತ್ತು ವರ್ಷಗಳ ಕಾಲ ಮಲ್ಲಿಕಾರ್ಜುನ ಖರ್ಗೆಯವರ ಗರಡಿಯಲ್ಲಿಯೇ ರಾಜಕೀಯವಾಗಿ ಬೆಳೆದು ಹತ್ತು ಹಲವು ಹುದ್ದೆಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿ ಪಡೆದಿದ್ದನ್ನು ಮರೆತು ಆ ಕಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮತ್ತು ಹಗುರವಾಗಿ ಮಾತನಾಡುವದು ಸರಿಯಾದುದಲ್ಲ. ದೇಶದ ಪ್ರಧಾನ ಮಂತ್ರಿಗಳನ್ನು ಪ್ರಶ್ನೆ ಮಾಡಲು ಪ್ರಿಯಾಂಕ್ ಯಾರು ಎಂದು ಕೇಳಿರುವ ಚಲುವಾದಿ ನಾರಾಯಣಸ್ವಾಮಿಯವರು ದೇಶದ ಪ್ರಜಾಪ್ರಭುತ್ವದ ತಳಹದಿ ಮರೆತಿದ್ದಾರೆ ಎನಿಸುತ್ತಿದೆ, ಪ್ರಿಯಾಂಕ್ ಖರ್ಗೆಯವರು ಸರಕಾರದ ಸಚಿವರು, ಅವರು ಬಿಡಿ ದೇಶದ ಸಾಮಾನ್ಯ ನಾಗರೀಕ ಸಹ ಪ್ರಧಾನ ಮಂತ್ರಿಗಳನ್ನು ಪ್ರಶ್ನೆ ಮಾಡಬಹುದು ಎನ್ನುವ ಕನಿಷ್ಠ ತಿಳುವಳಿಕೆ ಇಲ್ಲದಿರುವಂತಹ ವ್ಯಕ್ತಿ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕನಾಗಿರುವದು ಈ ರಾಜ್ಯದ ದುರಂತ.
ಪ್ರಜಾಪ್ರಭುತ್ವದಲ್ಲಿ ಅಧಿಕಾರದಲ್ಲಿ ಇರುವವರು ಯಾರೇ ಆಗಲಿ ಅವರು ಏಷ್ಟೇ ದೊಡ್ಡ ಆನೆಯಾದರೂ ಸಾಮಾನ್ಯ ಪ್ರಜೆಗೆ ಉತ್ತರಿಸಲೇಬೇಕಾಗುತ್ತದೆ, ಆನೆ ನಡೆದಿದ್ದೆ ದಾರಿ ಎನ್ನಲಿಕ್ಕೆ ಇದು ನಿರಂಕುಶವಾದದ ದೇಶವಲ್ಲ, ನಾಗರೀಕರ ಪ್ರಶ್ನೆಗೆ ಉತ್ತರಿಸಲು ಸಾದ್ಯವಿಲ್ಲವೆನ್ನುವದಾದರೆ ಅವರು ಹೊಂದಿರುವ ಸ್ಥಾನ ತ್ಯಾಗ ಮಾಡಿ ಹೋಗಬೇಕು. ಚಲುವಾದಿ ನಾರಾಯಣಸ್ವಾಮಿಯವರು ಸಚಿವ ಪ್ರಿಯಾಂಕ್ ಖರ್ಗೆಯವರನ್ನು ನಾಯಿಗೆ ಹೋಲಿಸಿರುವದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಚಿತ್ತಾಪುರದಲ್ಲಿ ಘೇರಾವ ಹಾಕಿ ಕೂಡಿ ಹಾಕಿರುವದು ಸರಿಯಾಗಿಯೇ ಇದೆ, ಇದಕ್ಕಿಂತ ತೀಕ್ಷಣವಾಗಿ ಪ್ರತಿಭಟಿಸಬೇಕಾಗುತ್ತದೆ. ಕೇವಲ ಚಿತ್ತಾಪುರ ಅಲ್ಲ ಇಡೀ ರಾಜ್ಯದಲ್ಲಿ ಚಲುವಾದಿ ನಾರಾಯಣಸ್ವಾಮಿಯವರು ಎಲ್ಲಿಯೇ ಪ್ರಯಾಣಿಸಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಖರ್ಗೆಯವರ ಅಭಿಮಾನಿಗಳು ಘೇರಾವ ಹಾಕುತ್ತಾರೆ ಎನ್ನುವ ಎಚ್ಚರಿಕೆ ಇರಲಿ, ನಿಮ್ಮ ಮನುವಾದಿ ಮನಸ್ಥಿತಿಗೆ ದಿಕ್ಕಾರವಿರಲಿ. ನೀವು ನಿಮ್ಮ ನಾಯಕರನ್ನು ಖುಷಿ ಪಡಿಸಲು ಈ ರೀತಿ ಖರ್ಗೆಯವರ ಕುಟುಂಬಕ್ಕೆ ವೈಯಕ್ತಿಕ ಟೀಕೆ ಮಾಡುತ್ತ ಇದ್ದೀರಿ ಎನ್ನುವದು ಜನರಿಗೆ ತಿಳಿದಿದೆ, ನಮ್ಮ ದಲಿತ ಸಮಾಜದ ಒಬ್ಬ ರಾಷ್ಟ್ರೀಯ ನಾಯಕರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡುವದು ಶೋಭೆ ತರುವದಿಲ್ಲ.
ಆದ್ದರಿಂದ, ಪ್ರಿಯಾಂಕ್ ಖರ್ಗೆಯವರ ಬಗ್ಗೆ ಮಾತನಾಡುವ ಮೊದಲು ಹತ್ತು ಸಲ ವಿಚಾರ ಮಾಡಬೇಕು ಮತ್ತು ಪ್ರಿಯಾಂಕ್ ಖರ್ಗೆಯವರ ಹತ್ತಿರ ಕ್ಷಮಾಪಣೆ ಕೇಳಬೇಕೆಂದು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.
Comments
Post a Comment