ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ಉನತ್ತೀಕರಿಸುವಂತೆ ಎ.ವಸಂತಕುಮಾರ್ ಮನವಿ ಜಯಧ್ವಜ ನ್ಯೂಸ್ ರಾಯಚೂರು,ಮೇ.21- ನಗರದಲ್ಲಿರುವ ಉರ್ದು ಮಾದ್ಯಮ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ಉನತ್ತೀಕರಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಹಾಗೂ ವಸತಿ ಖಾತೆ ಸಚಿವರಾದ ಬಿ.ಝೆಡ್.ಜಮೀರ ಅಹ್ಮದ ಖಾನ್ ರವರಿಗೆ ವಿಧಾನ ಪರಿಷತ್ ಸದಸ್ಯರಾದ ಎ.ವಸಂತ ಕುಮಾರ್ ಮನವಿ ಮಾಡಿದ್ದಾರೆ. ಸರಕಾರ ೨೦೨೫-೨೬ನೇ ಸಾಲಿನಲ್ಲಿ ರಾಜ್ಯ ಸರಕಾರದ ೧೦೦ ಉರ್ದು ಮಾದ್ಯಮ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ಉನತ್ತೀಕರಿಸುವದು ಮತ್ತು ಅಭಿವೃದ್ದಿ ಪಡಿಸುವ ಯೋಜನೆ ಘೋಷಿಸಿದೆ, ಅದರಂತೆ ತಮ್ಮ ಇಲಾಖೆಯು ಸದರಿ ಶಾಲೆಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತಿದ್ದು ರಾಯಚೂರು ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪೂರೈಸುತ್ತಿದ್ದು, ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಉರ್ದು ಮಾದ್ಯಮ ಪ್ರಾಥಮಿಕ ಹಾಗೂ ಪ್ರೌಡ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ರಾಯಚೂರು ನಗರದಲ್ಲಿಯೇ ಹತ್ತಕ್ಕೂ ಹೆಚ್ಚು ಸರಕಾರಿ ಉರ್ದು ಪ್ರಾಥಮಿಕ ಶಾಲೆಗಳು ಹಾಗೂ ನಾಲ್ಕು ಸರಕಾರಿ ಉರ್ದು ಪ್ರೌಡ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಕಾರಣ, ರಾಯಚೂರು ನಗರದ ಕನಿಷ್ಠ ಮೂರು ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ಉನತ್ತೀಕರಿಸುವದು ಮತ್ತು ಅಭಿವೃದ್ದಿ ಪಡಿಸುವ ಯೋಜನೆ ಅಡಿಯಲ್ಲಿ ಆಯ್ಕೆ ಮಾಡಿಕೊಳ್ಳಬೇಕೆಂದು, ಆ ಮೂಲಕ ಇಲ್ಲಿಯ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಲು ಅವಕಾಶ ಒದಗಿಸಿಕೊಡಬೇಕು, ೨೦೨೫-೨೬ ನೇ ಸಾಲಿನಿಂದ ಪ್ರಾರಂಭಿಸುವಂತೆ ರಾಯಚೂರು ಜಿಲ್ಲೆಯ ಮಸ್ಕಿ, ಸಿರವಾರ ಅಥವಾ ಕವಿತಾಳ ಹಾಗೂ ಸಿಂಧನೂರ ತಾಲ್ಲೂಕುಗಳಿಗೆ ಒಂದೊoದು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಮಂಜೂರು ಮಾಡಬೇಕೆಂದು ಹಾಗೂ ರಾಯಚೂರು ನಗರದ ಯರಮರಸ್ ಕ್ಯಾಂಪ್ ಪ್ರದೇಶಕ್ಕೆ ಒಂದು ಮತ್ತು ಆಶಾಪುರ ರಸ್ತೆಯ ಆಶ್ರಯ ಕಾಲೋನಿ ಹತ್ತಿರ ಒಂದು ಮೌಲಾನಾ ಆಜಾದ ಮಾದರಿ ಇಂಗ್ಲಿಷ್ ಮಾದ್ಯಮ ಶಾಲೆಯನ್ನು ಮಂಜೂರು ಮಾಡಬೇಕೆಂದು ಕೋರಿದ್ದಾರೆ
Comments
Post a Comment