ಬಿಜನಗೇರಾ: ಗರುಡ ಗಂಬ ಸ್ಥಾಪನೆ ವೇಳೆ ತಪ್ಪಿದ ಭಾರಿ ಅನಾಹುತ. ಜಯ ಧ್ವಜ ನ್ಯೂಸ್ ರಾಯಚೂರು,ಮೇ.25- ತಾಲೂಕಿನ ಬಿಜನಗೇರಾ ಗ್ರಾಮದ ಆಂಜಿನೇಯ ದೇವಸ್ಥಾನ ಉದ್ಘಾಟನೆ ಸಮಾರಂಭದಲ್ಲಿ ಗರುಡ ಗಂಬ ಸ್ಥಾಪನೆ ವೇಳೆ ಪವಾಡ ಸದೃಶ ರೀತಿಯಲ್ಲಿ ಭಾರಿ ಅನಾಹುತ ತಪ್ಪಿದ ಘಟನೆ ಜರುಗಿದೆ.
ಬೆಳಿಗ್ಗೆ ದೇವಸ್ಥಾನ ಮುಂಭಾಗದಲ್ಲಿ ಗರುಡ ಗಂಬವನ್ನು ಕ್ರೇನ್ ಮುಖಾಂತರ ಸ್ಥಾಪನೆ ಮಾಡುವ ವೇಳೆ ಗರುಡ ಗಂಬ ಮೂರು ತುಂಡಾಗಿ ನೆಲಕ್ಕೆ ಬಿದ್ದಿದೆ ಈ ವೇಳೆ ಪವಾಡ ಸದೃಶ ರೀತಿಯಲ್ಲಿ ಯಾವುದೆ ಅವಘಡವಾಗದೆಯಿರುವುದು ದೈವನಾಗ್ರಹಕ್ಕೆ ಸಾಕ್ಷಿಯಾಗಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಶ್ರೀ ಗಳು ವಹಿಸಿದ್ದರು, ಶಾಸಕ ಡಾ.ಶಿವರಾಜ ಪಾಟೀಲ್, ಮುಖಂಡರಾದ ಕೆ.ಶಾಂತಪ್ಪ, ತಿಮ್ಮಪ್ಪ ನಾಡಗೌಡ, ಡಿ.ಕೆ.ಮುರಳಿ ಯಾದವ್ ಸೇರಿದಂತೆ ಗ್ರಾಮದ ಮುಖಂಡರು, ಗ್ರಾಮಸ್ಥರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಮುಂಜಾಗ್ರತೆ ಕ್ರಮದಿಂದ ತಪ್ಪಿದ ಅನಾಹುತ : ಮುಂಜಾಗ್ರತೆ ಕ್ರಮ ವಹಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ ಕ್ರೇನ್ ಮೂಲಕ ಗರುಡ ಗಂಬ ಎತ್ತುವ ವೇಳೆ ಜನರು ನೆರೆದ ವಿರುಧ್ಧ ದಿಕ್ಕಿನಲ್ಲಿ ಗಂಬವನ್ನು ಎತ್ತಿದ್ದರಿಂದ ಭಾರಿ ಪ್ರಮಾದ ತಪ್ಪಿದೆ ಇಲ್ಲದಿದ್ದರೆ ಜನರ ಮೇಲೆಯೆ ಗಂಬ ಮುರಿದು ಬೀಳುವ ಸಾಧ್ಯತೆಯಿತ್ತು ಎನ್ನಲಾಗುತ್ತಿದೆ. ಒಟ್ಟಾರೆಯಾಗಿ ದೇವರ ಕೃಪೆಯಿಂದ ಯಾವುದೆ ಅಪಾಯ ಸಂಭವಿಸಿದುರುವುದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
Comments
Post a Comment