ಕಮಲ್ ಹಾಸನ್ ವಿರುಧ್ಧ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ಜಯ ಧ್ವಜ ನ್ಯೂಸ್ ರಾಯಚೂರು,ಮೇ.28- ಕನ್ನಡದ ಬಗ್ಗೆ ಅವಹೇಳನ ರೀತಿಯಲ್ಲಿ ಮಾತನಾಡಿದ ಖ್ಯಾತ ನಟ ಕಮಲ್ ಹಾಸನ್ ವಿರುಧ್ಧ ಕನ್ನಡ ಪರ ಸಂಘಟನೆಗಳು ಇಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು. ತಮಿಳು ನಾಡಿನ ಖಾಸಗಿ ಕಾರ್ಯಕ್ರಮದಲ್ಲಿ ಹಿರಿಯ ಚಿತ್ರನಟ ಅದರಲ್ಲಿಯೂ ಕನ್ನಡದಿಂದಲೇ ಚಿತ್ರರಂಗ ಪ್ರವೇಶಿಸಿ ಬೆಳೆದ ಕಮಲ ಹಾಸನ್ ಟ್ರ್ಯೂತ್ ಲೈಫ್ ಎಂಬ ಖಾಸಗಿ ಕಾರ್ಯಕ್ರಮದಲ್ಲಿ ಮೊದಲಿಗೆ ಕನ್ನಡ ಭಾಷೆ ಇರಲಿಲ್ಲ ತಮಿಳಿನಿಂದಲೇ ಕನ್ನಡ ಜನ್ಮ ತಾಳಿದೆ ಎಂದು ಹೇಳಿರುವುದು ಖಂಡನೀಯ ಮತ್ತು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ ಇದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರುನಾಡ ಚಕ್ರವರ್ತಿ ಶಿವರಾಜ ಕುಮಾರ ಎದುರಲ್ಲಿಯೇ ಹೇಳಿಕೆ ಈ ನೀಡಿದ್ದು ಇಡೀ ಕನ್ನಡದ ಹೃದಯಗಳಿಗೆ ತುಂಬಾ ನೋವುಂಟಾಗಿದೆ, ಎದುರಿಗೆ ಕುಳಿತ ಶಿವರಾಜಕುಮಾರವರೂ ಸಹಿತ ಕಮಲ ಹಾಸನ್ ರವರ ಮಾತಿಗೆ ವಿರೋಧವಾಗಿ ಏನನ್ನೂ ಪ್ರತಿಕ್ರಿಯ ಮಾಡದೇ ಇದ್ದದ್ದು ಕನ್ನಡಿಗರಿಗೆ ತುಂಬಾ ಬೇಸರ ತಂದಿದೆ, ಆದಕಾರಣ ಕಮಲ ಹಾಸನ ಚಿತ್ರಗಳನ್ನು ಕರ್ನಾಟಕದಲ್ಲಿ ಭಹಿಷ್ಕರಿಸಬೇಕು ಮತ್ತು ಅವರ ಮೇಲೆ ಭಾಷೆ ವಿರೋಧಿ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕೆಂದು ಅಖಿಲ ಕರ್ನಾಟಕ ಡಾ. ರಾಜಕುಮಾರ ಅಭಿಮಾನಿ ಬಳಗದ ಅಧ್ಯಕ್ಷರು, ಏಮ್ಸ್ ಹೋರಾಟ ಸಮಿತಿಯ ಪ್ರದಾನ ಸಂಚಾಲಕರಾದ ಡಾ. ಬಸವರಾಜ ಕಳಸವರು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಕರ್ನಾಟಕ
ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಜೈನ , ಕಮಲ ಹಾಸನ್ ಎಂಬ ಒಬ್ಬ ಹಿರಿಯ ನಟ ಕನ್ನಡದಲ್ಲಿಯೇ ಪ್ರಥಮಬಾರಿಗೆ ಚಿತ್ರರಂಗ ಪ್ರವೇಶ ಮಾಡಿ ಬಹು ಎತ್ತರಕ್ಕೆ ಬೆಳೆದ ಮೇಲೆ ಕನ್ನಡವನ್ನೇ ಅವಮಾನಿಸಿದ್ದಕ್ಕಾಗಿ ಕನ್ನಡ ಹೃದಯಗಳಿಗೆ ತುಂಬಾ ಬೇಸರವಾಗಿದೆ, ಆತನ ಯಾವುದೇ ಚಿತ್ರಗಳು ಜಿಲ್ಲೆಯಲ್ಲಿ ಅಲ್ಲದೇ ರಾಜ್ಯದ ಯಾವುದೇ ಚಿತ್ರಮಂದಿರದಲ್ಲಿ ಪ್ರದರ್ಶವಾಗದಂತೆ ಸಿಎಂ ಸಿದ್ದರಾಮಯ್ಯನವರು ಆದೇಶಿಸಿ ಅವರು ಕನ್ನಡರಾಮಯ್ಯ ಎಂಬ ಕೀರ್ತಿಗೆ ಭಾಜನರಾಗಬೇಕು ಒಂದು ವೇಳೆ ಕಮಲ ಹಾಸನವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ದಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿಶ್ವ ನಾಥ ಪಟ್ಟಿ, ಕೆ.ಇ.ಕುಮಾರ್, ರಮೇಶ್ ಕಲ್ಲೂರಕರ್,ಬಶೀರ್ ಅಹ್ಮದ್ ಹೊಸಮನಿ ಸೇರಿದಂತೆ ಕನ್ನಡಪರ ಸಂಘಟನೆಗಳ ಮುಖಂಡರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
Comments
Post a Comment