ಅಂತರಾಷ್ರೀಯ ಜರ್ನಲ್‌ನ ಸಂಪಾದಕ ಆಡಳಿತ ಮಂಡಳಿ ಸದಸ್ಯರಾಗಿ ಡಾ. ಪ್ರಮೋದ ಕಟ್ಟಿ ನೇಮಕ
ಜಯ ಧ್ವಜ ನ್ಯೂಸ್ ರಾಯಚೂರು,ಮೇ.29- ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯ್ಯಾಲಯದಲ್ಲಿ ಕೀಟಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಮತ್ತು ಇನ್ನಿತರ ಆಡಳಿತಾತ್ಮಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ, ಪ್ರಸ್ತುತ ಬೆಂಗಳೂರುನಲ್ಲಿರುವ “ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ”ಯಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಪ್ರಮೋದ ಕಟ್ಟಿ ಇವರಿಗೆ ಪ್ರತಿಷ್ಠಿತ “ಅಮೇರಿಕನ್ ಜರ್ನಲ್ ಆಫ್ ಅಗ್ರಿಕಲ್ಚರ್ ಅಂಡ್ ಫಾರೆಸ್ಟ್ರೀ” ಯ ಸಂಪಾದಕ ಆಡಳಿತ ಮಂಡಳಿಯ ಸದಸ್ಯರನ್ನಾಗಿ ಮೂರು ವರ್ಷಗಳ ಅವಧಿಗೆ ನೇಮಿಸಿ ನ್ಯೂಯಾರ್ಕನಲ್ಲಿನ “ಸೈನ್ಸ್ ಪಬ್ಲಿಕೇಷನ್ ಗ್ರೂಪ್” ಆದೇಶ ಹೂರಡಿಸಿದೆ. ಇವರ ಕಾರ್ಯಾವಧಿ ಮೇ ೨೦೨೮ರ ವರೆಗೆ ಇರುತ್ತದೆ. ಪ್ರತಿಷ್ಠಿತ ಅಂತರಾಷ್ರೀಯ ಜರ್ನಲ್ ವೊಂದರ ಸಂಪಾದಕೀಯ ಆಡಳಿತ ಮಂಡಳಿ ಸದಸ್ಯರಾಗಿರುವುದು ಜಿಲ್ಲೆಗೆ ಹೆಮ್ಮಯ ಸಂಗತಿಯಾಗಿದೆ.
Comments
Post a Comment