ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕ ಪದಾಧಿಕಾರಿಗಳ ಪದಗ್ರಹಣ ಸಮಾರಂಭ:                                 ಬ್ರಾಹ್ಮಣ ಸಮಾಜ ಸರ್ವರ ಒಳಿತು ಬಯಸುತ್ತದೆ- ಎ.ನಾಗರಾಜ.                                                                                                                  ಜಯ ಧ್ವಜ ನ್ಯೂಸ್ ರಾಯಚೂರು ,ಮೇ.31- ಬ್ರಾಹ್ಮಣ ಸಮಾಜ ಸರ್ವರ ಒಳಿತು ಬಯಸುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತ ಸೇವಾ ಪ್ರಮುಖರಾದ ಎ.ನಾಗರಾಜ್ ಹೇಳಿದರು.                             ಅವರು ಶುಕ್ರವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಬ್ರಾಹ್ಮಣರು ಸರ್ವೇ ಜನಾ: ಸುಖಿನೋ ಭವಂತು ಎಂಬುದನ್ನು ಪ್ರತಿಪಾದಿಸುವವರು ಆಗಿದ್ದಾರೆ ಎಂದ ಹೇಳಿದ ಅವರು ಇಂದು ಪದಗ್ರಹಣ ಸಮಾರಂಭ ಏರ್ಪಡಿಸಲಾಗಿದೆ ಇದನ್ನು ಪದಗ್ರಹಣ ವೆಂದು ಸಂಬೋಧಿಸುವುದಕ್ಕಿಂತಲು ಸಂಕಲ್ಪ ಸಮಾರಂಭವೆಂದರೇ ಸೂಕ್ತವಾಗುತ್ತದೆ ಏಕೆಂದರೆ ನೀವು ಜವಾಬ್ದಾರಿ ಪಡೆದು ಸಮಾಜಕ್ಕೆ ಕಿಂಚಿತ್ತು ಕೊಡುಗೆ ನೀಡುವ ಅವಕಾಶ ನಿಮಗೆ ನೀಡಲಾಗುತ್ತದೆ ಅದನ್ನು ಸಮರ್ಥವಾಗಿ ನಿಭಾಯಿಸಿ ಎಂದರು. ಬ್ರಾಹ್ಮಣರನ್ನು ಎಲ್ಲರು ಮಾದರಿಯಾಗಿ ನೋಡುತ್ತಾರೆ ಆದ್ದರಿಂದ ನಾವು ನಮ್ಮ ಆಚರಣೆಗಳಾದ ಸಂಧ್ಯಾವಂದನೆ, ಗಾಯಿತ್ರಿ ಮಂತ್ರ ಪಠಣ, ಸದ್ವಿಚಾರ ಸದಾಆಚಾರಗಳಿಂದ ನಮ್ಮತನ ಉಳಿಸಿಕೊಂಡು ನಮ್ಮ ಮಕ್ಕಳಿಗೂ ಸಂಸ್ಕಾರ ನೀಡಬೇಕೆಂದರು.

ಈ‌ ಹಿಂದೆ ರಾಜರ ಆಳ್ವಿಕೆಯಲ್ಲಿ ರಾಜಗುರುಗಳಾಗಿ ವಿದ್ಯಾರಣ್ಯರು ವಿಜಯ ನಗರ ಸಾಮ್ರಾಜ್ಯವನ್ನು ಮುನ್ನೆಡಿಸಲು ಆಶೀರ್ವದಿಸಿದರು. ಅದೇ ರೀತಿ ಶಿವಾಜಿ ಮಹಾರಾಜರಿಗೆ ಸಮರ್ಥ ರಾಮದಾಸರು  ಗುರುವಿನ ಸ್ಥಾನದಲ್ಲಿ ನಿಂತು ಮುನ್ನೆಡಿಸಿದರು.  
ಪರಶುರಾಮರು,ಚಾಣಕ್ಯ, ಸ್ವಾಮಿ ವಿವೇಕಾನಂದರು ಸೇರಿದಂತೆ ಅನೇಕರು  ಭಾರತ ದೇಶಕ್ಕೆ ಅನನ್ಯ ಕೊಡುಗೆ ನೀಡಿದವರು ಆಗಿದ್ದಾರೆ ಎಂದರು. ರಾಜಕಾರಣದಲ್ಲಿ ಧರ್ಮವಿರಬೇಕೇ ಹೊರತು ಧರ್ಮದಲ್ಲಿ ರಾಜಕಾರಣ ನುಸುಳಬಾರದೆಂದರು. ನಾವೆಲ್ಲರೂ ದೇಶ ನಮಗೆ ಏನು ನೀಡಿದೆ ಎಂಬುದನ್ನು ಬಿಟ್ಟು ನಾವು ದೇಶಕ್ಕೆ ಏನು ನೀಡಿದ್ದೇವೆ ದೇಶವೇ ನಮಗೆ ದೇವರು ಎಂಬ ಭಾವನೆ ವೃಧ್ಧಿಸಿಕೊಳ್ಳಬೇಕೆಂದರು. ನಮ್ಮ ಮಾತು ಮತ್ತು ಕೃತಿ ಒಂದೆ ಆಗಿರಬೇಕೆಂದರು.

ಪ್ರಾಸ್ತಾವಿಕವಾಗಿ ನೂತನ ಕಾರ್ಯಾಧ್ಯಕ್ಷ ವೆಂಕಟೇಶ್ ದೇಸಾಯಿ ಮಾತನಾಡಿ 50 ವರ್ಷಗಳ ಸುಧೀರ್ಘ ಇತಿಹಾಸವಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾವನ್ನು ನಾವೆಲ್ಲರೂ ಮತ್ತಷ್ಟು ಶಕ್ತಿಯುತವಾಗಿ ಬೆಳೆಸಬೇಕು ಕೆಲ ತಿಂಗಳುಗಳ ಹಿಂದೆ  ಅಶೋಕ್ ಹಾರನಹಳ್ಳಿ ಅಧ್ಯಕ್ಷತೆಯಲ್ಲಿ ಬೆಂಗಳೂರಲ್ಲಿ ಬ್ರಾಹ್ಮಣರ ರಾಜ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನೆರವೇರಿತು ನಾವೆಲ್ಲರು ಒಗ್ಗಟ್ಟು ಪ್ರದರ್ಶಿಸಬೇಕು ಇತ್ತೀಚೆಗೆ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ವಿರುದ್ಧ ಸಂಘಟಿತ ಹೋರಾಟ ನಮಗೆ ನ್ಯಾಯ ಸಿಗುವಂತೆ ಮಾಡಿತು ಎಂದರು. ನಾವು ಒಬ್ಬರೆ ಬೆಳೆಯುವುದು ಸುಲಭ ಆದರೆ ಸಮಾಜವನ್ನು ಬೆಳೆಸುವುದು ಕಷ್ಟಕರವಾಗಿದ್ದು ಎಲ್ಲರ ಸಹಕಾರವಿದ್ದರೆ ಅದು ಸುಲಭವೆಂದರು. ಚುನಾವಣೆ ಪ್ರಣಾಳಿಕೆಯಂತೆ ಕಾರ್ಯ ಯೋಜನೆ ಪೂರ್ಣಗೊಳಿಸಲು ಕಠಿಬದ್ಧರಾಗಿರೋಣವೆಂದರು. ನಿಕಟಪೂರ್ವ ಜಿಲ್ಲಾ ಸಂಚಾಲಕ ಡಿ.ಕೆ.ಮುರಳೀಧರ್ ಮತ್ತಿತರರು ಮಾತನಾಡಿದರು.

ಇದೇ ಸಂದರ್ಭದಲ್ಲಿ ನೂತನ ಜಿಲ್ಲಾ ಸಂಚಾಲಕರಿಗೆ ಮತ್ತು ನಗರ ಘಟಕದ ಪದಾಧಿಕಾರಿಗಳಿಗೆ ಧ್ವಜ ಹಸ್ತಾಂತರ ನಡೆಯಿತು ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ ನೀಡಲಾಯಿತು.

ವೇದಿಕೆ  ಮೇಲೆ ಹಿರಿಯರಾದ ನರಸಿಂಗರಾವ್ ದೇಶಪಾಂಡೆ, ಜಿಲ್ಲಾ ಪ್ರತಿನಿಧಿ ರಮೇಶ್ ಕುಲಕರ್ಣಿ,  ಡಾ.ಆನಂದತೀರ್ಥ ಫಡ್ನೀಸ್, ರಾಮರಾವ್ ಗಣೇಕಲ್, ವೇಣುಗೋಪಾಲ್ ಇನಾಂದಾರ್, ಶ್ರೀನಿವಾಸ ಮಲ್ದಕಲ್, ವಿಜಯೇಂದ್ರ ಸಿರವಾರ್ ಇನ್ನಿತರರು ಇದ್ದರು. ವಿನೋದ ಸಗರ್ ಸ್ವಾಗತಿಸಿದರು.

ಅನೀಲ್ ಗಾರಲದಿನ್ನಿ ನಿರೂಪಿಸಿದರು. ಪಂಡಿತರಿಂದ ವೇದಘೋಷ ನೆರವೇರಿತು. 

     ಹೆಚ್ಚಿನ ಸಂಖ್ಯೆಯಲ್ಲಿ ವಿಪ್ರರು ಪಾಲ್ಗೊಂಡಿದ್ದರು.

Comments

Popular posts from this blog