ಮಾನವೀಯ ಮೌಲ್ಯದ ಶಿಕ್ಷಣ ಅತ್ಯುತ್ತಮವಾದದ್ದು - ಎ.ಪಾಪಾರೆಡ್ಡಿ.
ಜಯ ಧ್ವಜ ನ್ಯೂಸ್ ರಾಯಚೂರು,ಮೇ.23- ಇಂದಿನ ಪ್ರಗತಿ ಪಥ ಯುಗದಲ್ಲಿ ಕೇವಲ ಅಂಕಗಳಿಗೆ ಮಾತ್ರ ಒತ್ತು ನೀಡದೆ ಮಕ್ಕಳಲ್ಲಿ ಸಂಸ್ಕಾರಯುತ ಹಾಗೂ ಮೌಲ್ಯಯುತವಾದ ಮಾನವೀಯತೆ ಗುಣದ ಶಿಕ್ಷಣ ಅತ್ಯಗತ್ಯವಾಗಿದೆ ಎಂದು ಮಾಜಿ ಶಾಸಕ, ಮುನ್ನೂರ ಕಾಪು ಸಮಾಜದ ಮುಖಂಡರು ರಾಯಚೂರು ಸಾಂಸ್ಕೃತಿಕ ಹಬ್ಬದ ರುವಾರಿಗಳಾದ ಎ. ಪಾಪಾರೆಡ್ಡಿಯವರು ಹೇಳಿದರು.
ನಗರದ ದೇವಿ ನಗರದಲ್ಲಿರುವ ಮಂದಾರ ನವೋದಯ ತರಬೇತಿ ಕೇಂದ್ರದ ಬೇಸಿಗೆ ಶಿಬಿರ ಮುಕ್ತಾಯ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಸಮಸ್ತ ರಾಯಚೂರು ಜಿಲ್ಲೆಯೇ ಅತ್ಯಂತ ಕಡಿಮೆ ಅವಧಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆ ಡಾ. ಬಾಬುರಾವ್ ಎಂ. ಶೇಗುಣಶಿಯವರ ಮಂದಾರ ನವೋದಯ ಶಿಕ್ಷಣ ಸಂಸ್ಥೆ ಎಂದು ಹೇಳಲು ಹೆಮ್ಮೆ ವಿಷಯವಾಗಿದೆ ಎಂದು ಹೇಳಿದರು.
ವಿಶೇಷ ಅಹ್ವಾನಿತರಾಗಿ ಆಗಮಿಸಿದ ಮಾನ್ವಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಜೆ.ಎಂ. ಈರಣ್ಣನವರು ಮಾತನಾಡಿ ಪ್ರಾಥಮಿಕ ಹಂತದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಯ ಮಾರ್ಗದರ್ಶನ ನೀಡಿ ಮಕ್ಕಳಲ್ಲಿ ಆತ್ಮ ವಿಶ್ವಾಸ ಮೂಡಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ವೇದಿಕೆಯ ಮೇಲೆ ಜಾನಪದ ಕಲಾವಿದರಾದ ಶರಣಪ್ಪ ಗೋನಾಳ, ಧಾರವಾಡದ ಫೇಸ್ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರದ ನಿರ್ಧೇಶಕರಾದ ಪಾಶ್ವನಾಥ ಉಪನ್ಯಾಸಕರು ಇದ್ದರು.
ಆಗಮಿಸಿದ ಸರ್ವ ಗಣ್ಯರಿಗೆ ಡಾ. ಬಾಬುರಾವ್ ಎಂ. ಶೇಗುಣಸಿಯವರು ಮುದ್ದು ಮಕ್ಕಳಿಂದ ಸನ್ಮಾನಿಸಿ ಗೌರವಿಸಿದರು.
ಮಂದಾರ ನವೋದಯ ತರಬೇತಿಯಲ್ಲಿ ಸೇವೆ ಸಲ್ಲಿಸಿದ ಸರ್ವ ಉಪನ್ಯಾಸಕರಿಗೆ ಮಾಜಿ ಶಾಸಕರಾದ ಎ. ಪಾಪಾರೆಡ್ಡಿಯವರು ಗಣ್ಯರು ಸನ್ಮಾನಿಸಿ ಗೌರವಿಸಿದರು.
ಪ್ರಾರಂಭದಲ್ಲಿ ಮಂದಾರ ನವೋದಯ ತರಬೇತಿಯ ಮುದ್ದು ಮಕ್ಕಳು ಹಾಗೂ ಪ್ರತಿಭಾ ಗೋನಾಳರವರಿಂದ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಈ ಸಂಧರ್ಭದಲ್ಲಿ ಉಪನ್ಯಾಸಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
Comments
Post a Comment