ಯತ್ನಾಳ್ ಉಚ್ಛಾ ಟನೆಯಿಂದ ನಮ್ಮ ಧ್ವನಿ ಕುಂದಿಲ್ಲ: ರಾಜ್ಯದಲ್ಲಿ ಅಕ್ರಮ ವಲಸಿಗರನ್ನು ಹೊರಹಾಕಬೇಕು- ಕುಮಾರ್ ಬಂಗಾರಪ್ಪ. ಜಯ ಧ್ವಜ ನ್ಯೂಸ್ ರಾಯಚೂರು,ಮೇ.24- ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಉಚ್ಛಾಟನೆಯಿಂದ ನಮ್ಮ ಧ್ವನಿ ಕುಂದಿಲ್ಲ ವೆಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು. ಅವರಿಂದು ನಗರದ ಹೊರವಲಯದಲ್ಲಿರುವ ಮಾಜಿ ಸಂಸದ ಬಿ.ವಿ.ನಾಯಕ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯತ್ನಾಳ್ ನಮ್ಮ ಬಣದಲ್ಲಿ ಗುರುತಿಸಿಕೊಂಡಿದ್ದರು ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಅದು ಪಕ್ಷದ ವರಿಷ್ಠರ ತೀರ್ಮಾನವಾಗಿದ್ದು ಇದರಿಂದ ನಮ್ಮ ಧ್ವನಿ ಕುಂದಿಲ್ಲವೆಂದರು. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಅಕ್ರಮವಾಗಿ ಬಾಂಗ್ಲಾದೇಶ ,ಪಾಕಿಸ್ತಾನ ವಲಸಿಗರಿದ್ದು ಅವರನ್ನು ಹೊರಹಾಕಬೇಕು ಎಂದ ಅವರು ನಮ್ಮ ರಾಜ್ಯದಲ್ಲಿ ಸುಮಾರು 2.5 ಲಕ್ಷ ಅಕ್ರಮ ವಲಸಿಗರಿದ್ದಾರೆ ಎಂದರು.
ಬೆಂಗಳೂರಲ್ಲಿ ಅಪರಾಧ ಪ್ರಕರಣ ಹೆಚ್ಚಳಕ್ಕೆ ಅಕ್ರಮ ಬಾಂಗ್ಲಾ ವಾಸಿಗಳು ಕಾರಣರಾಗಿದ್ದಾರೆ ಎಂದು ದೂರಿದ ಅವರು ಕೇಂದ್ರ ಗೃಹ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ ರಾಜ್ಯ ಸರ್ಕಾರವು ಕಠಿಣ ಕ್ರಮ ಜರುಗಿಸಬೇಕೆಂದರು. ಕೇರಳ ಮುಖಾಂತರ ಆಗಮಿಸಿ ಕರ್ನಾಟಕ ಗಡಿಯಲ್ಲಿ ಕಾಫಿ ಎಸ್ಟೇಟ್ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ , ಕರಾವಳಿ ಭಾಗದಲ್ಲಿಯೂ ಅವರು ನೆಲೆಸಿದ್ದಾರೆ ಎಂದರು. ರಾಜ್ಯ ಸರ್ಕಾರ ಹಗರಣದಲ್ಲಿ ಮುಳುಗಿದೆ ಇತ್ತೀಚೆಗೆ ಗೃಹ ಸಚಿವ ಪರಮೇಶ್ವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿಯಾಗಿದೆ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಬೆಂಗಳೂರಲ್ಲಿ ಮಳೆ ನೀರಿನಿಂದ ಕಂಗೆಟ್ಟ ಜನರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ ಗ್ಯಾರಂಟಿಗಳಿಂದ ಸರ್ಕಾರದ ಖಜಾನೆ ಬರಿದಾಗಿದೆ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ವೆಂದರು. ಬಂಗಾರಪ್ಪ ಸಿಎಂ ಆಗಿದ್ದಾಗ ಜಿಲ್ಲೆಗೆ ನೀಡಿದ ಕೊಡುಗೆ ಸ್ಮರಿಸಿಕೊಂಡ ಅವರು ಇಲ್ಲಿನ ಹಿರಿಯ ರಾಜಕಾರಣಿಗಳ ಒಡನಾಟ ಮೆಲುಕು ಹಾಕಿದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಮುಖಂಡರಾದ ರಾಜ್ ಕುಮಾರ್, ಕೆ.ಎಂ.ಪಾಟೀಲ್, ಬಂಗಿ ನರಸರೆಡ್ಡಿ,ಬಂಡೇಶ ವಲ್ಕಂದಿನ್ನಿ ಇನ್ನಿತರರು ಇದ್ದರು.
Comments
Post a Comment