ಮಾನ್ವಿಯಲ್ಲಿ ನಡೆದ ಘಟನೆಗೆ ಚಾಮರಸ್ ಮಾಲಿಪಾಟೀಲ್ ವಿಷಾದ. ಜಯ ಧ್ವಜ ನ್ಯೂಸ್ ರಾಯಚೂರು,ಮೇ.23- ಮಾನ್ವಿ ಯಲ್ಲಿ ರೈತರೊಂದಿಗೆ ಪ್ರತಿಭಟನೆ ವೇಳೆ ಆಹಾರ ಇಲಾಖೆ ಉಪನಿರ್ದೇಶಕ ಕೃಷ್ಣಾ ಶಾವಂತಗೇರಿ ರವರಿಗೆ ಭಾವಾವೇಶದಲ್ಲಿ ಆಡಿರುವ ಮಾತಿಗೆ ವಿಷಾದ ವ್ಯಕ್ತಪಡಿಸುತ್ತೇನೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ್ ಮಾಲಿಪಾಟೀಲ್ ತಿಳಿಸಿದ್ದಾರೆ. ಮಾನ್ವಿಯಲ್ಲಿ ರೈತರು ಸಂಕಷ್ಟಕ್ಕೊಳಗಾದ ಹಿನ್ನಲೆ ಮುಷ್ಕರ ಸಂದರ್ಭದಲ್ಲಿ ಆಹಾರ ಇಲಾಖೆ ಉಪನಿರ್ದೇಶಕರಿಗೆ ತಾವು ರೈತರ ಸಮಸ್ಯೆ ಆಲಿಸುತ್ತಿಲ್ಲ ವೆಂದು ರೈತರ ಪರವಾಗಿ ನಾನು ಭಾವಾವೇಶದಲ್ಲಿ ಮಾತನಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸುತ್ತೇನೆಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
Comments
Post a Comment