ದಲಿತರ ಪಾಲಿಗೆ ಸಿದ್ದರಾಮಯ್ಯ ಎರಡನೇ ಅಂಬೇಡ್ಕರ್:              ಜೂನ್ ನಲ್ಲಿ ಒಳಮೀಸಲಾತಿ ಜಾರಿಗೆ ಸರ್ಕಾರಕ್ಕೆ ಒತ್ತಾಯ- ಹೆಚ್.ಆಂಜಿನೇಯ.                                                 ಜಯ ಧ್ವಜ ನ್ಯೂಸ್ ರಾಯಚೂರು,ಮೇ.24-             ಮುಂದಿನ ತಿಂಗಳು ಜೂನ್ ನಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿ ಮಾಡುವಂತೆ ಸರ್ಕಾರಕ್ಕೆ ಮಾಜಿ ಸಚಿವ ಹೆಚ್.ಆಂಜಿನೇಯ ಒತ್ತಾಯಿಸಿದರು.                ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಒಳಮೀಸಲಾತಿಗಾಗಿ ದಶಕಗಳಿಂದ ಹೋರಾಟ ನಡೆಯುತಿದ್ದು ಇದೀಗ ಒಳಮೀಸಲಾತಿ ಜಾರಿಗೆ ಕಾಲ ಕೂಡಿಬಂದಿದೆ ಎಂದ ಅವರು ನಾಗ್ ಮೋಹನ್ ದಾಸ್ ಅಧ್ಯಕ್ಷತೆಯ ಆಯೋಗ ಪರಿಶಿಷ್ಟ ಜಾತಿಗಳ ಸಮೀಕ್ಷೆಗೆ ಕೈಗೊಂಡಿದ್ದು ಈ ತಿಂಗಳು ಕೊನೆ ವರೆಗೆ ಸಮೀಕ್ಷೆ ನಡೆಯಲಿದ್ದು ಮಾದಿಗ ಜನಾಂಗದವರು ಸ್ಪಷ್ಟವಾಗಿ ಮಾದಿಗರೆಂದು ಜಾತಿ ಕಾಲಂ ನಲ್ಲಿ ನಮೂದಿಸಬೇಕೆಂದರು.       ಮುಂದಿನ ತಿಂಗಳು ಒಳಮೀಸಲಾತಿ ಜಾರಿ ಮಾಡಲು ಸರ್ಕಾರಕ್ಕೆ ಒತ್ತಾಯಿಸಿದ ಅವರು ಆಧುನಿಕ ಸಲಕರಣೆ ಮೂಲಕ ಸಮೀಕ್ಷೆ ಕೈಗೊಳ್ಳಲಾಗಿದ್ದು ದತ್ತಾಂಶ ಸಂಗ್ರಹ ಕಾರ್ಯ ಸುಲಭವಾಗಿದೆ ಎಂದರು.

ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿಯೇ ಒಳಮೀಸಲಾತಿ ಜಾರಿಯಾಗುತ್ತದೆ ಎಂಬ ವಿಶ್ವಾಸವಿದೆ ಎಂದರು. ದಲಿತರ ಪಾಲಿಗೆ ಸಿದ್ದರಾಮಯ್ಯ ಎರಡನೆ ಅಂಬೇಡ್ಕರ್ ಆಗಿದ್ದಾರೆ ಅವರು ಅಂಬೇಡ್ಕರ್ ರವರ ಆಶಯ ಈಡೇರಿಸಿದ್ದಾರೆ ಎಸ್ಸಿಪಿ ಟಿಎಸ್ಪಿ ಅನುದಾನ ಕಾಯ್ದೆ ಜಾರಿಗೆ  ತಂದಿದ್ದಾರೆ ದಲಿತರ ಬಗ್ಗೆ ಅಪಾರ ಕಾಳಜಿ ಮೆರೆದಿದ್ದಾರೆ ಗ್ಯಾರಂಟಿ ಯೋಜನೆಗಳಿಗೆ ಎಸ್ಸಿಪಿ ಟಿಎಸ್ಪಿ ಅನುದಾನ ಬಳಸಿಕೊಂಡರೆ ಮಹಾಪರಾಧವೇನಲ್ಲವೆಂದರು.         ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ್, ಎಂ.ವಿರುಪಾಕ್ಷಿ, ಜಯಣ್ಣ, ಅಂಬಣ್ಣ ಅರೋಲಿಕರ್,ಬಾಲಸ್ವಾಮಿ ಕೊಡ್ಲಿ, ಜೆ.ಬಿ.ರಾಜು, ನರಸಿಂಹಲು ಮಾಡಗಿರಿ, ರಾಮಣ್ಣ ಇರಬಗೇರ ಸೇರಿದಂತೆ ಇನ್ನಿತರರು ಇದ್ದರು.

Comments

Popular posts from this blog