ಅಕ್ರಮ ಗೋ ಸಾಗಾಣಿಕೆ ತಡೆಯಲು ಚೆಕ್ ಪೋಸ್ಟ್ ಸ್ಥಾಪಿಸಿ- ವಿನಯ ಸಿಂಗ್. ಜಯ ಧ್ವಜ ನ್ಯೂಸ್ ರಾಯಚೂರು, ಮೇ.29- ಅಕ್ರಮ ಗೋ ಸಾಗಾಣಿಕೆ ತಡೆಯಲು ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಬೇಕೆಂದು ರಾಷ್ಟ್ರೀಯ ಗೋ ರಕ್ಷಕ ವಾಹಿನಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿನಯ್ ಸಿಂಗ್ ಠಾಕೂರ್ ಹೇಳಿದರು. ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಗರಕ್ಕೆ ಅನೇಕ ಕಡೆಗಳಿಂದ ಅಕ್ರಮವಾಗಿ ಗೋ ಸಾಗಾಣಿಕೆ ಮಾಡಲಾಗುತ್ತಿದೆ ಆದ್ದರಿಂದ ಶಕ್ತಿನಗರ, ನವೋದಯ ಕಾಲೇಜು, ಸಾಥ್ ಮೈಲ್ ಕ್ರಾಸ್ ಮುಂತಾದ ಕಡೆಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ಗೋ ಸಾಗಾಣಿಕೆ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಮತ್ತು ಪ್ರಾಣಿ ಹತ್ಯೆ ಕಾಯ್ದೆ ಜಾರಿಯಲ್ಲಿರುವುದರಿಂದ ಪೊಲೀಸ್ ಇಲಾಖೆ ಈ ಬಗ್ಗೆ ನಿಗಾ ವಹಿಸಬೇಕೆಂದರು.
ಗೋ ಸಂರಕ್ಷಕರಿಗೆ ಬೆದರಿಕೆ ಕರೆ ಬಂದಲ್ಲಿ ಸ್ಪಂದಿಸಿ ಕರೆ ಮಾಡುವವರು ಮೇಲೆ ಕ್ರಮ ಕೈಗೊಳ್ಳಬೇಕೆಂದು ಅವರು ಗೋ ಸಂರಕ್ಷಕರು ಗೋ ಕಳ್ಳ ಸಾಗಾಣಿಕೆ ವಾಹನ ತಡೆದ ಸಂದರ್ಭದಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ವಾಹನ ಮತ್ತು ಗೋ ಸಾಗಾಣಿಕೆ ದಾಖಲೆ ಪರಿಶೀಲಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಬಜರಂಗದಳ ನಗರಾಧ್ಯಕ್ಷ ಸಾಯಿ ರೆಡ್ಡಿ, ಪಿ.ಬಾಳಪ್ಪ, ಸ್ವಪ್ನಾ ಸಿಂಗ್ ಇದ್ದರು.
Comments
Post a Comment