ವರ್ಚುವಲ್ ಮೂಲಕ  ಘಟಿಕೋತ್ಸವಕ್ಕೆ ರಾಜ್ಯಪಾಲರು ಮತ್ತು ಕೃಷಿ ಸಚಿವರಿಂದ ಚಾಲನೆ.                                ಜಯ ಧ್ವಜ ನ್ಯೂಸ್ ರಾಯಚೂರು,ಮೇ.26-                   ಹವಾಮಾನ ವೈಪರೀತ್ಯದಿಂದ ನಗರದ ಕೃಷಿ ವಿವಿಯಲ್ಲಿ ಆಯೋಜಿಸಿದ ಘಟಿಕೋತ್ಸವಕ್ಕೆ ಗೈರು ಹಾಜರಾದ ರಾಜ್ಯ ಪಾಲರು ಮತ್ತು ಕೃಷಿ ಸಚಿವರು ವರ್ಚುವಲ್ ಮೂಲಕ ತಾವಿದ್ದ ಸ್ಥಳದಿಂದಲೇ ಘಟಿಕೋತ್ಸವ ಕ್ಕೆ ಚಾಲನೆ ನೀಡಿದರು. ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಘಟಿಕೋತ್ಸವಕ್ಕೆ ಘನತವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮತ್ತು ಕೃಷಿ ಸಚಿವ ಚೆಲುವರಾಯಸ್ವಾಮಿ ಚಾಲನೆ ನೀಡಿದರು. ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ವಿವಿ ಸಾಧನೆ ಮತ್ತು ಶೈಕ್ಷಣಿಕ ಪ್ರಗತಿ ಬಗ್ಗೆ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಾರತೀಯ ವಿವಿಗಳ ಒಕ್ಕೂಟ ಮಹಾಕಾರ್ಯದರ್ಶಿ ಡಾ.ಪಂಕಜಾ ಮಿತ್ತಲ್,  ಕುಲ ಸಚಿವರಾದ ಡಾ.ಕೆ.ಆರ್ ದುರುಗೇಶ ಸೇರಿದಂತೆ ವಿವಿ ಆಡಳಿತ ಮಂಡಳಿ ಸದಸ್ಯರು , ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೈತರಾದ ದೇವೆಂದ್ರಪ್ಪ ಶಂಕ್ರಪ್ಪ ಬಳ್ಳೂಟಗಿ ಇವರಿಗೆ ಗೌರವ ಡಾಕ್ಟರೇಟ್ ಮತ್ತು ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ  ಪದವಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು , ಪಾಲಕರು, ವಿವಿ ಸಿಬ್ಬಂದಿಗಳು ಉಪಸ್ಥಿತರಿದ್ದರು .


Comments

Popular posts from this blog