ರಾಯಚೂರು ರಿಪೋರ್ಟರ್ಸ್ ಗಿಲ್ಡ್  ಅಧ್ಯಕ್ಷರಾಗಿ ವಿಜಯ ಜಾಗಟಗಲ್, ಪ್ರಧಾನ ಕಾರ್ಯದರ್ಶಿಯಾಗಿ ವೆಂಕಟೇಶ ಹೂಗಾರ ಅವಿರೋಧ ಆಯ್ಕೆ

ಜಯ ಧ್ವಜ ನ್ಯೂಸ್, ರಾಯಚೂರು,ಜೂ.29-

ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಗೆ 2025-2027 ನೇ ಸಾಲಿನ  ಅಧ್ಯಕ್ಷರಾಗಿ ಪಬ್ಲಿಕ್ ಟಿವಿ ವರದಿಗಾರ ವಿಜಯ ಕುಮಾರ ಜಾಗಟಗಲ್ , ಪ್ರಧಾನ ಕಾರ್ಯದರ್ಶಿಯಾಗಿ ಸುದ್ದಿಮೂಲ ವರದಿಗಾರ ವೆಂಕಟೇಶ ಹೂಗಾರ ಅವಿರೋಧ ಆಯ್ಕೆಯಾಗಿದ್ದಾರೆ.

ಇಂದು ನಾಮಪತ್ರಗಳ ಪರಿಶೀಲನೆ ಬಳಿಕ ಚುನಾವಣಾಧಿಕಾರಿ ಶ್ರೀನಿವಾಸ ವಕೀಲರು ಅವಿರೋಧ ಆಯ್ಕೆ ಪಟ್ಟಿ ಪ್ರಕಟಿಸಿದರು.

ಉಪಾಧ್ಯಕ್ಷರಾಗಿ ರಾಯಚೂರು ವಾಣಿ ವರದಿಗಾರ ಎಂ.ಜಯರಾಮ್  ಮತ್ತು ಖಜಾಂಚಿಯಾಗಿ ಜನಬಲ ಟೈಮ್ಸ್ ವರದಿಗಾರ ಕೆ.ಸಣ್ಣ ಈರಣ್ಣ ಅವಿರೋಧ ಆಯ್ಕೆಯಾಗಿದ್ದಾರೆ.

ಐವರು ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಕ್ಕೆ ಸುದ್ದಿಮೂಲ ಪ್ರಧಾನ ವರದಿಗಾರ ಹಾಗೂ ಹಿರಿಯ ಪತ್ರಕರ್ತ  ಬಿ.ವೆಂಕಟಸಿಂಗ್, ಪ್ರಜಾವಾಣಿ  ಹಿರಿಯ ವರದಿಗಾರ ಚಂದ್ರಕಾಂತ ಮಸಾನೆ, ನ್ಯೂಸ್ ಫಸ್ಟ್ ವರದಿಗಾರ ಶ್ರೀಕಾಂತ ಸಾವೂರ್ ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನೂ ಎರಡು ಕಾರ್ಯಕಾರಿ ಸಮಿತಿ  ಸದಸ್ಯ ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಚುನಾವಣಾಧಿಕಾರಿ ಶ್ರೀನಿವಾಸ ವಕೀಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

Popular posts from this blog