ಜೂ.27 ರಂದು ದೇವದುರ್ಗಕ್ಕೆ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಆಗಮನ: ಚಿಕ್ಕಹೊನ್ನಕುಣಿಯಲ್ಲಿ ದೇವೇಗೌಡರ ಪುತ್ಥಳಿ ಅನಾವರಣ - ವಿರುಪಾಕ್ಷಿ ಜಯ ಧ್ವಜ ನ್ಯೂಸ್, ರಾಯಚೂರು,ಜೂ.22- ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡರು ಹಾಗೂ ಯುವ ನಾಯಕ ನಿಖಿಲ್ ಕುಮಾರಸ್ವಾಮಿರವರು ಜೂ.27 ರಂದು ದೇವದುರ್ಗಕ್ಕೆ ಆಗಮಿಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜೆಡಿಎಸ್ ಪಕ್ಷವನ್ನು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಪಣತೊಟ್ಟಿರುವ ದೇವೇಗೌಡರು ತಮ್ಮ 94 ನೇ ವರ್ಷದ ಇಳಿವಯಸ್ಸಿನಲ್ಲಿಯೂ ಪಕ್ಷ ಸಂಘಟನೆಗೆ ಪ್ರವಾಸ ಕೈಗೊಂಡಿದ್ದಾರೆ ಅವರ ಜೊತೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ ಸ್ವಾಮಿ ಸಹ ಆಗಮಿಸಲಿದ್ದಾರೆ ಎಂದರು.
ದೇವದುರ್ಗ ತಾಲೂಕಿನ ಚಿಕ್ಕಹೊನ್ನಕುಣಿ ಕ್ರಾಸ್ ನಲ್ಲಿ ದೇವೇಗೌಡರ ಪುತ್ಥಳಿ ಅನಾವರಣ ಹಾಗೂ ದೇವದುರ್ಗ ಪಟ್ಟಣದಲ್ಲಿ "ಜನರೊಂದಿಗೆ ಜೆಡಿಎಸ್" ಸಮಾವೇಶ ನಡೆಯಲಿದೆ ಎಂದರು. ನಿಖಿಲ್ ಕುಮಾರಸ್ವಾಮಿ ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ 110 ಕ್ಷೇತ್ರಗಳಲ್ಲಿ ಪ್ರವಾಸ ಹೊರಡಲಿದ್ದು ಜೂ.26 ರಂದು ಸಿಂಧನೂರು, ಮಾನ್ವಿ ಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ ತದನಂತರ ಜೂ.27ಕ್ಕೆ ದೇವದುರ್ಗ ತಾಲೂಕಿನಲ್ಲಿ ಪುತ್ಥಳಿ ಅನಾವರಣ ಹಾಗೂ ದೇವದುರ್ಗದಲ್ಲಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು. ಜೆಡಿಎಸ್ ದೇವದುರ್ಗ ತಾಲೂಕು ಘಟಕದ ಅಧ್ಯಕ್ಷರು ಪಕ್ಷದಿಂದ ದೂರವುಳಿದಿಲ್ಲ ಅವರು ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು ಯಾವುದೆ ಭಿನ್ನಾಭಿಪ್ರಾಯವಿಲ್ಲವೆಂದರು. ದೇವದುರ್ಗ ಶಾಸಕರಾದ ಕರೆಮ್ಮ .ಜಿ.ನಾಯಕ ಮಾತನಾಡಿ ಜೆಡಿಎಸ್ ಪಕ್ಷ ಬಲಿಷ್ಟವಾಗಿದೆ ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ ಎಂದ ಅವರು ಶಾಸಕರ ಹಕ್ಕುಚ್ಯುತಿ ಸರ್ಕಾರ ಮಾಡುತ್ತಿದೆ ನಮ್ಮ ಕ್ಷೇತ್ರಕ್ಕೆ ಕೆಕೆ ಆರ್ ಡಿ ಬಿ ಅನುದಾನ ಹೊರತುಪಡಿಸಿ ಉಳಿದ ಅನುದಾನ ನೀಡದೇ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರನ್ನು ದೆಹಲಿಯಲ್ಲಿ ಭೇಟಿ ಮಾಡಿ ದೇವದುರ್ಗಕ್ಕೆ ಕೈಗಾರಿಕೆ ಸ್ಥಾಪನೆ ಸೇರಿದಂತೆ ಕೇಂದ್ರ ಸರ್ಕಾರದ ಅನುದಾನ ಒದಗಿಸಲು ಕೋರಿದ್ದೇನೆಂದರು. ಈ ಸಂದರ್ಭದಲ್ಲಿ ಮುಖಂಡರಾದ ಮಹಾಂತೇಶ ಪಾಟೀಲ ಅತ್ತನೂರು, ಸಣ್ಣ ನರಸಿಂಹ ನಾಯಕ, ಸಿದ್ದಣ್ಣ ತಾತ, ಎನ್.ಶಿವಶಂಕರ್, ಸಿದ್ದನಗೌಡ, ತಿಮ್ಮಾರೆಡ್ಡಿ, ಲಕ್ಷ್ಮೀಪತಿ ಗಾಣಧಾಳ್,ಮಲ್ಲಣ್ಣ ಸಾಹುಕಾರ್,ನರಸಪ್ಪ ಇನ್ನಿತರರು ಇದ್ದರು.
Comments
Post a Comment