ಏಮ್ಸ್ ಕುರಿತಂತೆ ಬಹಿರಂಗ ಚರ್ಚೆಗೆ ನಗರ ಶಾಸಕರಿಗೆ ಆಹ್ವಾನ:                                                              ಏಮ್ಸ್ ಹೋರಾಟ ಸಮಿತಿ ಸಂಚಾಲಕರಿಗೆ ಧಮಕಿ ಸಹಿಸುವುದಿಲ್ಲ- ಮಾರೆಪ್ಪ.                                                                                                             ಜಯ ಧ್ವಜ ನ್ಯೂಸ್, ರಾಯಚೂರು,ಜೂ.24-             ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಬಸವರಾಜ ಕಳಸ ರವರಿಗೆ ಶಾಸಕ ಡಾ.ಶಿವರಾಜ ಪಾಟೀಲ್ ಬೆಂಬಲಿಗರು ಧಮಕಿ ಹಾಕುವುದನ್ನು ಸಹಿಸುವುದಿಲ್ಲವೆಂದು ಹೋರಾಟಗಾರ ಎಸ್.ಮಾರೆಪ್ಪ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ಇತ್ತೀಚೆಗೆ ನಗರಕ್ಕಾಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರು ಏಮ್ಸ್ ನೀಡುವುದು ತಜ್ಞರ ಸಮಿತಿ ನಿರ್ಧಾರದ ಮೇಲೆ ಎಂದು ಹೇಳಿದ್ದು ಅದನ್ನು  ವಿರೋಧಿಸದೆಯಿರುವ ನಗರ ಶಾಸಕರ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಕ್ಕೆ ಅವರ  ಬೆಂಬಲಿಗರು ಸುದ್ದಿಗೋಷ್ಟಿ ನಡೆಸಿ ಕಳಸರವರ ಮನೆಗೆ ಮುತ್ತಿಗೆ ಹಾಕುವ ಧಮಕಿ ಹಾಕಿದ್ದು ಸರಿಯೇ ಎಂದು ಪ್ರಶ್ನಿಸಿದ ಅವರು ಇಂತಹ ರಾಜಕೀಯ ಗೂಂಡಾಗಿರಿಗೆ ಹೆದರುವುದಿಲ್ಲ ಇದೆಲ್ಲವನ್ನು ನಮ್ಮ ಹೋರಾಟ ಜೀವನದಲ್ಲಿ ಎದುರಿಸಿಯೇ ಬಂದಿದ್ದೇವೆ ಜನಪರ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲವೆಂದರು.

ಏಮ್ಸ್ ನೀಡುವುದು ಕೇಂದ್ರ ಸರ್ಕಾರ ಆದರೆ ಕೇಂದ್ರ ಸಚಿವರು ನೀಡಿರುವ ಹೇಳಿಕೆ ಗೊಂದಲಮಯವಾಗಿದೆ ಈ ಹಿಂದೆ ರಾಯಚೂರಿಗೆ ಮಂಜೂರಾದ ಐಐಟಿಯನ್ನು ಕುತಂತ್ರದಿಂದ ಧಾರವಾಡಕ್ಕೆ ಕೊಂಡ್ಯೊಯ್ದರು ಆಗ ಯಾವ ತಜ್ಞರ ಸಮಿತಿ  ಧಾರವಾಡಕ್ಕೆ ಏಮ್ಸ್ ನೀಡುವಂತೆ ವರದಿ ನೀಡಿತ್ತು ಎಂದು ಪ್ರಶ್ನಿಸಿದರು. ಏಮ್ಸ್ ನಮ್ಮ ಹಕ್ಕು ಜಿಲ್ಲೆಯ ಜನರಿಗೆ ದ್ರೋಹ ಮಾಡುವ ಕೆಲಸ ಸಹಿಸುವುದಿಲ್ಲ ಏಮ್ಸ್ ದೊರಕುವ ವರೆಗೂ ನಮ್ಮ ಹೋರಾಟವಿರುತ್ತದೆ ಎಂದರು. ಈ ಸಂದರ್ಭದಲ್ಲಿ ಏಮ್ಸ್  ಹೋರಾಟ ಸಮಿತಿ ಪ್ರಧಾನ ಸಂಚಾಲಕ ಬಸವರಾಜ ಕಳಸ, ಅಶೋಕ್ ಕುಮಾರ್ ಜೈನ್,ಜಾನ್ ವೆಸ್ಲಿ , ವಿನಯ ಕುಮಾರ್ ಚಿತ್ರಗಾರ, ಇನ್ನಿತರರು ಇದ್ದರು.

Comments

Popular posts from this blog