ಏಮ್ಸ್ ಹೋರಾಟಗಾರರಿಗೆ  ಶಾಸಕ  ಡಾ. ಶಿವರಾಜ ಪಾಟೀಲ್ ಬೆದರಿಕೆ;  ಕಾನೂನು ಕ್ರಮ ಜರುಗಿಸುವಂತೆ ಕಳಸ ಮನವಿ

ಜಯ ಧ್ವಜ ನ್ಯೂಸ್, ರಾಯಚೂರು,ಜೂ.27- ನಗರ ಶಾಸಕರಾದ ಡಾ. ಶಿವರಾಜ್ ಪಾಟೀಲ್ ರವರು ಜೂ.25 ರಂದು ತಮ್ಮ ಕಾರ್ಯಾಲಯದಲ್ಲಿ ತಮ್ಮ ಪಕ್ಷದ ಮುಖಂಡರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ "ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಬಸವರಾಜ ಕಳಸ ಮತ್ತು ಸಂಚಾಲಕ ಅಶೋಕ್ ಕುಮಾರ್ ಜೈನ್ ರವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ," ನೀವು ಕಾಂಗ್ರೆಸ್ ಪಕ್ಷದ ಏಜೆಂಟರು ನಿಮಗೆಲ್ಲಾ ಅಕೌಂಟಿಗೆ ದುಡ್ಡು ಬರುತ್ತದೆ ನಿಮ್ಮ ಯೋಗ್ಯತೆ ಏನು ಎಂದು ಗೊತ್ತಿದೆ ನನ್ನ ಬಗ್ಗೆ ಅವಹೇಳನ ಮಾಡಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಬಗ್ಗೆ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿರುವಿರಿ ನಾನು ಕೊಡುವ ಎಚ್ಚರಿಕೆಗೆ ಗಮನ ಹರಿಸದಿದ್ದಲ್ಲಿ ಕ್ಷಮೆ ಕೇಳದಿದ್ದಲ್ಲಿ ಮುಂದೆ ನಿಮಗೆ ಆ ದೇವರೇ ಗತಿ ನಾನು ಪೊಲೀಸರಿಗೆ ವಿನಂತಿ ಮಾಡುತ್ತೇನೆ ತಕ್ಷಣವೇ ಕಾರ್ಯ ಪ್ರವರ್ತರಾಗಿರಿ ಇಲ್ಲದಿದ್ದಲ್ಲಿ ಯಾವುದೇ ಅನಾಹುತ ಆದಲ್ಲಿ ನಾನು ಜವಾಬ್ದಾರನಲ್ಲ ನನ್ನನ್ನು ಬ್ಲೇಮ್ ಮಾಡಬೇಡಿರಿ ನನ್ನ ಕಾರ್ಯಕರ್ತರು ಏನು ಮಾಡುತ್ತಾರೋ ಗೊತ್ತಿಲ್ಲ" ಎನ್ನುವ ವಿಡಿಯೋ ಬಹಿರಂಗಗೊಂಡಿದೆ. ಏಮ್ಸ್ ಹೋರಾಟಗಾರರಿಗೆ ಬಹಿರಂಗವಾಗಿ ಜೀವ ಬೆದರಿಕೆ ಹಾಕಿದ ಇವರ ಬಗ್ಗೆ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು ಮತ್ತು ಏಮ್ಸ್ ಹೋರಾಟ ವೇದಿಕೆಗೆ ಭದ್ರತೆ ಮತ್ತು ಹೋರಾಟಗಾರರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಏಮ್ಸ್ ಹೋರಾಟಗಾರರು ಒತ್ತಾಯಿಸಿದರು.


ಏಮ್ಸ್ ಹೋರಾಟವನ್ನು ಸ್ಥಗಿತಗೊಳಿಸಬೇಕು ಟೆಂಟನ್ನು ಕಿತ್ತುಗೆಯಬೇಕು ಎನ್ನುವುದಕ್ಕೆ ಶಾಸಕರಿಗೆ ಏನು ಅಧಿಕಾರ ಇದೆ? ಇದರಿಂದ ಎಲ್ಲರಿಗೂ ಸ್ಪಷ್ಟವಾಗಿ ತಿಳಿಯುವುದೇನೆಂದರೆ ಶಾಸಕ ಶಿವರಾಜ್ ಪಾಟೀಲರು ಏಮ್ಸ್ ವಿರೋಧಿಗಳು ಅವರಿಗೆ ರಾಯಚೂರಿಗೆ ಏಮ್ಸ್ ಮಂಜೂರಾಗುವುದು ಬೇಡವಾಗಿದೆ ಅದಕ್ಕಾಗಿಯೇ ಹೋರಾಟ ವಿರೋಧಿ ಹೇಳಿಕೆಯನ್ನು ನೀಡಿ ಪ್ರಜಾಪ್ರಭುತ್ವದಲ್ಲಿ ಹೋರಾಡುವ ಹಕ್ಕನ್ನು ಕಸಿದುಕೊಳ್ಳಲು ತವಕಿಸುತ್ತಿದ್ದಾರೆ, ಇದನ್ನು ಹೋರಾಟ ಸಮಿತಿಯು ಖಂಡಿಸುತ್ತದೆ, ಏಮ್ಸ್ ಹೋರಾಟಗಾರರ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿರುತ್ತಾರೆ. ಇದನ್ನು ಅವರು ಕೂಡಲೇ ಹಿಂಪಡೆಯಬೇಕು" ಎಂದು ಈ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ  ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಎಸ್. ಮಾರಪ್ಪ ವಕೀಲ, ಜಾನ್ ವೆಸ್ಲಿ, ಸುಲೋಚನಾ , ಶ್ಯಾಮಲಾ ಪುರುಷೋತ್ತಮ್ ಕಲಾಲ ಬಂಡಿ,ಅನ್ವರ್ ಸಾಬ್, ಎಸ. ತಿಮ್ಮಾರೆಡ್ಡಿ, ಎಸ್. ಹನುಮಂತಪ್ಪ, ಅಮರೇಗೌಡ ಪಾಟೀಲ್, ಕಾಮರಾಜ ಪಾಟೀಲ್, ಜಗದೀಶ್ ಪೂರತಿಪ್ಲಿ,ಪ್ರಭು ನಾಯಕ್, ಉದಯ್ ಕುಮಾರ್, ಸೋಮಶೇಖರ್ ಪೂರತಿಪ್ಲಿ, ಹೇಮರಾಜ್ ಅಸ್ಕಿಹಾಳ್, ನರಸಿಂಹಲು ಮೈತ್ರಿಕರ್, ವೀರಭದ್ರಯ್ಯ ಸ್ವಾಮಿ, ಗುರುರಾಜ್ ಕುಲಕರಣಿ, ವಿನಯ್ ಕುಮಾರ್ ಚಿತ್ರಗಾರ,ಜೈ ಭೀಮ್, ಪ್ರಸನ್ನ ಆಲಂಪಲ್ಲಿ,ತಾಯಣ್ಣ ಗದಾರ್, ಶ್ರೀನಿವಾಸ್ ಕಲವಲ ದೊಡ್ಡಿ, ಎನ್. ಮಹಾವೀರ್, ಆಂಜನೇಯ ಕುರುಬದೊಡ್ಡಿ, ಬಸವರಾಜ್, ಎನ್ಕೆ, ಕೃಷ್ಣ, ಮಲ್ಲಿಕಾರ್ಜುನ್ ಕಡದಿನ್ನಿ ಮುಂತಾದವರು ಉಪಸ್ಥಿತರಿದ್ದರು.

Comments

Popular posts from this blog